ಇಡುಕ್ಕಿ: ಬಂಧನಲ್ಲಿದ್ದ ಆರೋಪಿಗೆ ಚಿತ್ರಹಿಂಸೆ ನೀಡಿರುವ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರು ಪೊಲೀಸರನ್ನು ಬುಧವಾರ ಬಂಧಿಸಲಾಗಿದೆ.

ಸಬ್ಇನ್ಸ್ಪೆಕ್ಟರ್ ಕೆ.ಎ. ಸಬು ಮತ್ತು ಪೊಲೀಸ್ ಅಧಿಕಾರಿ ಸಜೀವ್ ಆಂಟೋನಿ ಬಂಧಿತರು.

ಇಬ್ಬರನ್ನು ಮಂಗಳವಾರಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ಇವರ ಹೇಳಿಕೆಗಳನ್ನು ಕ್ರೈಂ ವಿಭಾಗ ರೆಕಾರ್ಡ್ ಮಾಡಿಕೊಂಡಿದೆ.

ಬಂಧನ ನಂತರ ಸಬು ಮೂರ್ಛೆ ಹೋಗಿದ್ದು, ಅವರನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರ್ಥಿಕ ವಂಚನೆ ಪ್ರಕರಣದ ಹಿನ್ನೆಲೆಯಲ್ಲಿ ಜೂನ್ 12ರಂದು ರಾಜ್ಕುಮಾರ್(49) ಎಂಬುವವರನ್ನು ಪೊಲೀಸರು ಬಂಧಿಸಿದ್ದರು. ನಾಲ್ಕು ದಿನ ಪೊಲೀಸ್ ಬಂಧನದಲ್ಲಿದ್ದ ಅವರು, ನಂತರ ಸಾವನ್ನಪ್ಪಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಬ್ ಇನ್ಸ್ಪೆಕ್ಟರ್, ಸಹಾಯಕ ಸಬ್ ಇನ್ಸ್ಪೆಕ್ಟರ್ ಮತ್ತು ಇಬ್ಬರು ಚಾಲಕರು ಸೇರಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಎಂಟು ಮಂದಿಯನ್ನು ವರ್ಗಾವಣೆ ಮಾಡಲಾಗಿದೆ.

ತಪಿತಸ್ಥರ ರಕ್ಷಣೆಗೆ ಸರ್ಕಾರ ಮುಂದಾಗುವುದಿಲ್ಲ. ಆರೋಪಿಗಳಿಗೆ ಶಿಕ್ಷೆಯಾಗಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.