ನವದೆಹಲಿ: ಹಿಂಸಾಚಾರವನ್ನು ತ್ಯಜಿಸಿ, ಪ್ರಜಾಪ್ರಭುತ್ವದ ಮುಖ್ಯವಾಹಿನಿಯನ್ನು ಸೇರುವುದಕ್ಕೆ ಸಮ್ಮತಿಸಿರುವ ನಿಷೇಧಿತ ಉಲ್ಫಾ (ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸ್ಸಾಂ) ಸಂಘಟನೆಯ ಒಂದು ಗುಂಪು, ಕೇಂದ್ರ ಮತ್ತು ಅಸ್ಸಾಂ ಸರ್ಕಾರದ ಜತೆ ಶಾಂತಿ ಒಪ್ಪಂದಕ್ಕೆ ಶುಕ್ರವಾರ ಸಹಿ ಹಾಕಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ಪ್ರಕ್ರಿಯೆಗೆ ಸಾಕ್ಷಿಯಾದರು. ಅರವಿಂದ ರಾಜಖೋವಾ ನೇತೃತ್ವದ ಉಲ್ಫಾ ಸಂಘಟನೆ ಜತೆ ಶಾಂತಿ ಒಪ್ಪಂದಕ್ಕಾಗಿ 12 ವರ್ಷಗಳಿಂದಲೂ ಮಾತುಕತೆ ನಡೆಯುತ್ತಿತ್ತು. ಇದೀಗ ಒಪ್ಪಂದ ಏರ್ಪಟ್ಟಿದೆ. ಈ ಒಪ್ಪಂದದಿಂದ, ದಶಕಗಳಿಂದ ಅಸ್ಸಾಂನಲ್ಲಿ ನಡೆಯುತ್ತಿದ್ದ ಹಿಂಸಾಚಾರ ಪ್ರಕರಣಗಳು ಇನ್ನಷ್ಟು ತಗ್ಗುವ ವಿಶ್ವಾಸ ವ್ಯಕ್ತವಾಗಿದೆ.

‘ಈ ಬೆಳವಣಿಗೆಯು ಅಸ್ಸಾಂ ಜನತೆಗೆ ಮಹತ್ವದ್ದಾಗಿದೆ. ಉಲ್ಫಾ ಸಂಘಟನೆಯ ಹಿಂಸಾಚಾರದಿಂದಾಗಿ ಅಸ್ಸಾಂ ಹಲವು ವರ್ಷ ನರಳಿದೆ. 1979ರಿಂದ ಈವರೆಗಿನ ಹಿಂಸಾಚಾರದಲ್ಲಿ ಸುಮಾರು 10 ಸಾವಿರ ಮಂದಿ ಬಲಿಯಾಗಿದ್ದಾರೆ’ ಎಂದು ಶಾ ಹೇಳಿದರು.

‘ಹಿಂಸಾಚಾರ ತೊರೆದು ಸಂಘಟನೆಯನ್ನು ವಿಸರ್ಜಿಸಲು ಒಪ್ಪಿರುವ ಉಲ್ಫಾ ಸಂಘಟನೆಯು, ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಒಪ್ಪಿಕೊಂಡಿದೆ. ಈ ಒಪ್ಪಂದದ ಭಾಗವಾಗಿ ದೊಡ್ಡ ಅಭಿವೃದ್ಧಿ ಯೋಜನೆಯನ್ನು ಅಸ್ಸಾಂಗೆ ನೀಡಲಾಗುತ್ತದೆ. ಈ ಒಪ್ಪಂದದ ಪ್ರತಿಯೊಂದು ಅಂಶವನ್ನು ಜಾರಿಗೊಳಿಸಲಾಗುತ್ತದೆ’ ಎಂದು ಭರವಸೆ ನೀಡಿದರು.

ಪರೇಶ್ ಬರುವಾ ನೇತೃತ್ವದ ಉಲ್ಫಾ ಸಂಘಟನೆ ಮತ್ತೊಂದು ಗುಂಪು ಈ ಒಪ್ಪಂದದ ಭಾಗವಾಗಿಲ್ಲ. ಬರುವಾ ಅವರು ಚೀನಾ–ಮ್ಯಾನ್ಮಾರ್ ಗಡಿಯಲ್ಲಿ ನೆಲೆಸಿರುವ ಮಾಹಿತಿ ಇದೆ.

‘ಸಾರ್ವಭೌಮ ಅಸ್ಸಾಂ’ ಸ್ಥಾಪನೆಯ ಬೇಡಿಕೆಯೊಂದಿಗೆ 1979ರಲ್ಲಿ ಉಲ್ಫಾ ಸಂಘಟನೆ ಅಸ್ತಿತ್ವಕ್ಕೆ ಬಂತು. ಆ ಬಳಿಕ ಹಲವು ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ ಕಾರಣ ಕೇಂದ್ರ ಸರ್ಕಾರವು 1990ರಲ್ಲಿ ಈ ಸಂಘಟನೆಯನ್ನು ನಿಷೇಧಿಸಿತ್ತು.

ರಾಜಖೋವಾ ನೇತೃತ್ವದ ಗುಂಪು 2011ರ ಸೆಪ್ಟೆಂಬರ್ 3ರಂದು ತನ್ನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಘೋಷಿಸಿ, ಸರ್ಕಾರದೊಂದಿಗೆ ಶಾಂತಿ ಒಪ್ಪಂದದ ಮಾತುಕತೆಗೆ ಒಪ್ಪಿಗೆಯನ್ನು ಸೂಚಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.