ಗೋರಖ್‌ಪುರ: ‘ಗ್ಯಾನವಾಪಿಯು ವಾಸ್ತವವಾಗಿ ಭಗವಾನ್ ಶಿವ. ಆದರೆ ದುರದೃಷ್ಟವಶಾತ್ ಜನರು ಅದನ್ನು ಮಸೀದಿ ಎಂದು ಕರೆಯುತ್ತಾರೆ’ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.

ಗೋರಖ್‌ಪುರದಲ್ಲಿ ಶನಿವಾರ ‘ನಾಥ ಪಂಥ’ದ ಕುರಿತು ಆಯೋಜಿಸಿದ್ದ ವಿಚಾರಸಂಕಿರಣದಲ್ಲಿ ಆದಿ ಶಂಕರಾಚಾರ್ಯ ಅವರಿಗೆ ಸಂಬಂಧಿಸಿದ ಕಥೆಯನ್ನು ವಿವರಿಸುತ್ತಾ ಈ ಮಾತುಗಳನ್ನಾಡಿದ್ದಾರೆ.

ಗ್ಯಾನವಾಪಿ ಮಸೀದಿಯ ತೆಹಖಾನಾದ ಚಾವಣಿಯ ಮೇಲೆ ಮುಸ್ಲಿಮರು ನಮಾಜ್ ಮಾಡುವುದನ್ನು ತಡೆಯಬೇಕು ಎಂದು ಕೋರಿ ಹಿಂದೂಗಳು ಸಲ್ಲಿಸಿದ್ದ ಅರ್ಜಿಯನ್ನು ವಾರಾಣಸಿಯ ನ್ಯಾಯಾಲಯವೊಂದು ಶುಕ್ರವಾರ ವಜಾಗೊಳಿಸಿತ್ತು. ಅದರ ಬೆನ್ನಲ್ಲೇ, ಯೋಗಿ ಈ ಹೇಳಿಕೆ ನೀಡಿದ್ದಾರೆ.

ಗ್ಯಾನವಾಪಿ ವಿವಾದಕ್ಕೆ ಸಂಬಂಧಿಸಿದಂತೆ ಈ ಹಿಂದೆಯೂ ಹಿಂದೂ ಅರ್ಜಿದಾರರ ಪರವಾಗಿ ಮಾತನಾಡಿದ್ದ ಅವರು, ‘ಐತಿಹಾಸಿಕ ತಪ್ಪನ್ನು ಮುಸ್ಲಿಮರು ಸರಿಪಡಿಸಬೇಕು’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.