ನವದೆಹಲಿ: ಭಾರತೀಯ ಸೇನೆ ದೇಶದ್ದು, ಯಾವುದೇ ರಾಜಕೀಯ ಪಕ್ಷದ್ದಲ್ಲ.ಯಾರಾದರೂ ಭಾರತೀಯ ಸೇನೆಯನ್ನು ಮೋದಿ ಸೇನೆ ಎಂದರೆ ಅದು ತಪ್ಪು.ಅಷ್ಟೇ ಅಲ್ಲ ಹೀಗೆ ಹೇಳುವವರು ದೇಶದ್ರೋಹಿಗಳು ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ವಿ.ಕೆ.ಸಿಂಗ್, ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಗಾಜಿಯಾಬಾದ್ನಲ್ಲಿ ಭಾನುವಾರ ರ್ಯಾಲಿ ನಡೆಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಭಯೋತ್ಪಾದಕರಿಗೆ ಕಾಂಗ್ರೆಸ್ ಬಿರಿಯಾನಿ ಬಡಿಸಿತು.ಆದರೆ ಮೋದಿಯವರ ಸೇನೆ ಉಗ್ರರಿಗೆ ಬಾಂಬ್ ಮತ್ತು ಬುಲೆಟ್ನ ಹೊಡೆತ ನೀಡಿತು ಎಂದಿದ್ದರು.

ಆದಿತ್ಯನಾಥ ಅವರ ಹೇಳಿಕೆಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತ ಪಡಿಸಿದ್ದು, ಚುನಾವಣಾ ಆಯೋಗ ಆದಿತ್ಯನಾಥರಿಗೆ ನೋಟಿಸ್ ನೀಡಿತ್ತು.

ಇದನ್ನೂ ಓದಿ:ಭಾರತೀಯ ಸೇನೆಯನ್ನು 'ಮೋದಿಯವರ ಸೇನೆ' ಎಂದ ಯೋಗಿ ಆದಿತ್ಯನಾಥ

ಆದಿತ್ಯನಾಥ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದೆಬಿಬಿಸಿ ಜತೆ ಮಾತನಾಡಿದ ಸಿಂಗ್, ಅವರು ಏನು ಹೇಳುತ್ತಿದ್ದಾರೆ ಎಂಬುದು ಅವರಿಗೇ ಗೊತ್ತಿರುವುದಿಲ್ಲ.ಅವರಿಗೆ ಬೇರೇನೂ ಹೇಳಲು ಇಲ್ಲದಿರುವುದರಿಂದ ಒಬ್ಬರೋ ಅಥವಾ ಇಬ್ಬರೋ ಈ ರೀತಿ ಯೋಚನೆ ಮಾಡುತ್ತಿರುತ್ತಾರೆ.

ರಾಜಕಾರಣಿಗಳು ಸಶಸ್ತ್ರ ಸೇನೆಯ ಯೋಧರನ್ನು ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಬೆರೆಸಿ ಮಾತನಾಡಬಾರದು. ನೀವು ಭಾರತದ ಸೇನೆ ಬಗ್ಗೆ ಮಾತನಾಡುವುದಾದರ ಸೇನೆ ಬಗ್ಗೆಯೇ ಮಾತನಾಡಿ.ಅದು ಬಿಟ್ಟು ಪಕ್ಷದ ಕಾರ್ಯಕರ್ತರ ಬಗ್ಗೆ ಮಾತನಾಡುವಾಗ ಮೋದಿ ಸೇನೆ ಅಥವಾ ಬಿಜೆಪಿ ಸೇನೆ ಎಂದು ಹೇಳಿಬಿಡುತ್ತೀರಿ.ಇವೆರಡಕ್ಕೂ ವ್ಯತ್ಯಾಸವಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.