ಲಖನೌ: ಕೇಂದ್ರ ನಗರಾಭಿವೃದ್ದಿ ಖಾತೆ ರಾಜ್ಯ ಸಚಿವ ಕೌಶಲ್ ಕಿಶೋರ್ ಅವರಿಗೆ ಸೇರಿದ ಮನೆಯಲ್ಲಿ ವ್ಯಕ್ತಿಯೊಬ್ಬನನ್ನು ಗುಂಡಿಟ್ಟು ಹತ್ಯೆ ಮಾಡಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರ ಪುತ್ರನ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಶುಕ್ರವಾರ ನಸುಕಿನ ಜಾವ ವಿನಯ್ ಶ್ರೀವಾಸ್ತವ್ (30) ಎಂಬುವರನ್ನು ಪಿಸ್ತೂಲ್‌ನಿಂದ ಹತ್ಯೆ ಮಾಡಲಾಗಿತ್ತು. ಈ ಮನೆಯಲ್ಲಿ ಸಚಿವ ಕೌಶಲ್ ಕಿಶೋರ್ ಅವರ ಮಗ ವಿಕಾಸ್ ಕಿಶೋರ್ ವಾಸಿಸುತ್ತಿದ್ದರು.

ಕೊಲೆ ಕುರಿತು ಮೃತನ ಸಹೋದರ ದೂರು ನೀಡಿದ್ದು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸಚಿವ ಕೌಶಲ್ ಕಿಶೋರ್ ಅವರು, ಕೊಲೆ ಬಗ್ಗೆ ಮಾಹಿತಿ ತಿಳಿದಿದ್ದು ಆ ವೇಳೆ ಆ ಮನೆಯಲ್ಲಿ ನನ್ನ ಮಗ ಇರಲಿಲ್ಲ. ನಾನೂ ಇರಲಿಲ್ಲ. ಮಗ ನನ್ನೊಂದಿಗೆ ದೆಹಲಿಯಲ್ಲಿ ಇದ್ದ ಎಂದು ತಿಳಿಸಿದ್ದಾರೆ.

ಬಿಜೆಪಿ ಕೌಶಲ್ ಕಿಶೋರ್ ಅವರು ಲಖನೌ ವ್ಯಾಪ್ತಿಯ ಮೋಹನಲಾಲ್‌ಗಂಜ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.