ಗಾಜಿಯಾಬಾದ್: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಗಾಜಿಯಾಬಾದ್ ಜಿಲ್ಲೆಯಾದ್ಯಂತ ಪರವಾನಗಿ ಹೊಂದಿರುವ 10,500 ಶಸ್ತ್ರಾಸ್ತ್ರಗಳು ಪೊಲೀಸ್ ಠಾಣೆಗಳನ್ನು ಸೇರಿವೆ. ಚುನಾವಣಾ ಆಯೋಗದ ನಿರ್ದೇಶನದಂತೆ ಈ ಕ್ರಮಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಾಂತಿಯುತ ಮತದಾನದ ನಡೆಸಲು ಅನುವಾಗುವಂತೆ ಚುನಾವಣಾ ಆಯೋಗವು ಹೊರಡಿಸಿರುವ ಮಾರ್ಗಸೂಚಿಗಳ ಅನ್ವಯ ಗಾಜಿಯಾಬಾದ್ ಜಿಲ್ಲಾಡಳಿತವು ಪರವಾನಗಿ ಹೊಂದಿರುವ ಶಸ್ತ್ರಾಸ್ತ್ರಗಳನ್ನು ಜಮೆ ಮಾಡುವಂತೆ ಆದೇಶಿಸಿತ್ತು.

ಜಿಲ್ಲೆಯಲ್ಲಿ 25 ಶಸ್ತ್ರಾಸ್ತ್ರಗಳ ಪರವಾನಗಿಯನ್ನು ರದ್ದುಗೊಳಿಸುವ ಕ್ರಮ ಸಹ ಕೈಗೊಳ್ಳಲಾಗಿದೆ.

'ಚುನಾವಣಾ ಕರ್ತವ್ಯಗಳಿಗಾಗಿ ಪ್ಯಾರಾಮಿಲಿಟರಿ ಪಡೆಗಳ 81 ತುಕಡಿಗಳನ್ನು ನಿಯೋಜಿಸಲಾಗಿದೆ. ಆರು ಸಾವಿರ ಮಂದಿ ಹೋಂ ಗಾರ್ಡ್‌ಗಳು, ಐದು ಸಾವಿರ ಪೊಲೀಸ್ ಕಾನ್‌ಸ್ಟೆಬಲ್‌ಗಳನ್ನು ಚುನಾವಣಾ ಸೇವೆಗಳಿಗೆ ನಿಯೋಜಿಸಲಾಗುತ್ತದೆ' ಎಂದು ಎಸ್ಪಿ ಇರಾಜ್ ರಾಜಾ ಹೇಳಿದ್ದಾರೆ.

ಇದನ್ನೂ ಓದಿ: ಆಳ–ಅಗಲ: ಕುಬೇರ ರಾಜಕೀಯ ಪಕ್ಷ ಬಿಜೆಪಿ– ಕರಗುತ್ತಿದೆ ಪ್ರಾದೇಶಿಕ ಪಕ್ಷಗಳ ಗಂಟು

ಲೋನಿ ಮತ್ತು ದೌಲಾನಾ ಕ್ಷೇತ್ರದ ಕೆಲವು ಭಾಗಗಳನ್ನು 'ಸೂಕ್ಷ್ಮ ಪ್ರದೇಶಗಳು' ಎಂದು ಗುರುತಿಸಲಾಗಿದೆ. ಲೋನಿ ಕ್ಷೇತ್ರದಲ್ಲಿ 150 ಮತ ಕೇಂದ್ರಗಳು ಹಾಗೂ 560 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅಲ್ಲಿ ಆರು ಹಳ್ಳಿಗಳನ್ನು ಸೂಕ್ಷ್ಮ ಪ್ರದೇಶಗಳ ಸಾಲಿಗೆ ಸೇರಿಸಲಾಗಿದೆ.

ದೌಲಾನಾ ಕ್ಷೇತ್ರವು ಹಾಪುಡ್ ಜಿಲ್ಲೆಗೆ ಸೇರುತ್ತದಾದರೂ 40 ಮತ ಕೇಂದ್ರಗಳು ಮತ್ತು 145 ಮತಗಟ್ಟೆಗಳ ಭದ್ರತಾ ನಿಯೋಜನೆಯನ್ನು ಗಾಜಿಯಾಬಾದ್ ಆಡಳಿತ ನಿರ್ವಹಿಸುತ್ತಿದೆ. ಜಿಲ್ಲೆಯನ್ನು 200 ವಿಭಾಗಗಳು ಮತ್ತು 30 ವಲಯಗಳಾಗಿ ವರ್ಗೀಕರಿಸಲಾಗಿದೆ. ಐಎಎಸ್ ದರ್ಜೆಯ ಮೂವರು ಅಧಿಕಾರಿಗಳು ಹಾಗೂ ಒಬ್ಬ ಐಪಿಎಸ್ ಅಧಿಕಾರಿಯನ್ನು ಹೆಚ್ಚುವರಿಯಾಗಿ ಚುನಾವಣಾ ಕರ್ತವ್ಯಗಳ ನಿಗಾವಹಿಸಲು ನಿಯೋಜಿಸಲಾಗಿದೆ.

ಇದನ್ನೂ ಓದಿ: ಯುಪಿಯಲ್ಲಿ ಬಿಜೆಪಿ, ಪಂಜಾಬ್ನಲ್ಲಿ ಎಎಪಿ ಗೆಲ್ಲುವ ಸಾಧ್ಯತೆ: ಸಿ–ವೋಟರ್ ಸಮೀಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.