ಪ್ರಯಾಗ್ರಾಜ್ : ಉತ್ತರ ಪ್ರದೇಶ ಲೋಕಸೇವಾ ಆಯೋಗ (ಯುಪಿಪಿಎಸ್ಸಿ) ನಡೆಸಿದ ವಿವಿಧ ಪರೀಕ್ಷೆಗಳಿಗೆ ಸಂಬಂಧಿಸಿದಂತೆ, ತಪ್ಪು ಮಾಹಿತಿ ರವಾನಿಸಿ, ಕಾನೂನು ಹಾಗೂ ಸುವ್ಯವಸ್ಥೆಗೆ ಭಂಗ ತಂದ ಆರೋಪದ ಅಡಿಯಲ್ಲಿ ಟೆಲಿಗ್ರಾಂನ ನಾಲ್ಕು ಚಾನಲ್ಗಳ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.

‘ಪಿಸಿಎಂ ಅಭ್ಯಾಸ್, ಜನರಲ್ ಸ್ಟಡೀಸ್ ಎಜುಶಾಲಾ, ಮೇಕ್ ಐಎಎಸ್ ಹಾಗೂ ಪಿಸಿಎಸ್ ಮಂಥನ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಯುಪಿಪಿಎಸ್ಸಿಯ ಉಸ್ತುವಾರಿ ಕೃಷ್ಣ ಮುರಾರಿ ಚೌರಾಸಿಯಾ ನೀಡಿದ ದೂರಿನ ಪ್ರಕಾರ, ಇಲ್ಲಿನ ಸಿವಿಲ್ಲೈನ್ಸ್ ಪೊಲೀಸ್ ಠಾಣೆಯಲ್ಲಿ ಚಾನಲ್ಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 318(4) (ವಂಚನೆ) ಹಾಗೂ ಐಟಿ ಕಾಯ್ದೆ ಅಡಿಯಲ್ಲಿ ಗುರುವಾರ ಪ್ರಕರಣ ದಾಖಲಿಸಲಾಗಿತ್ತು.

‘ಟೆಲಿಗ್ರಾಂನ ಚಾನಲ್ಗಳ ಮೂಲಕ ಅಭ್ಯರ್ಥಿಗಳಿಗೆ ತಪ್ಪು ಮಾಹಿತಿ ರವಾನಿಸುವ ಮೂಲಕ ಪ್ರತಿಭಟನೆ ನಡೆಸುವಂತೆ ಪ್ರಚೋದಿಸಿ, ಕಾನೂನು ಹಾಗೂ ಸುವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನ ನಡೆಸಲಾಗಿತ್ತು’ ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ. ದೂರಿಗೆ ಸಂಬಂಧಿಸಿದಂತೆ ಸಾಕ್ಷಿಯಾಗಿ ಟೆಲಿಗ್ರಾಂ ಚಾನಲ್ನ ಸ್ಕ್ರೀನ್ಶಾಟ್ಗಳನ್ನು ಲಗತ್ತಿಸಲಾಗಿದೆ.

ಪ್ರಾಂತೀಯ ನಾಗರಿಕ ಸೇವೆಗಳು ಹಾಗೂ ತನಿಖಾಧಿಕಾರಿಗಳು(ಆರ್ಒ), ಸಹಾಯಕ ತನಿಖಾಧಿಕಾರಿಗಳು (ಎಆರ್ಒ) ಹುದ್ದೆಗಳಿಗೆ ಎರಡು ದಿನಗಳ ಕಾಲ ಪ್ರತ್ಯೇಕವಾಗಿ ಎರಡು ಪರೀಕ್ಷೆ ನಡೆಸಲು ನಿರ್ಧರಿಸಿದ್ದನ್ನು ವಿರೋಧಿಸಿ ಯುಪಿಪಿಎಸ್ಸಿ ಕಚೇರಿಯ ಮುಂದೆ ನ.11ರಂದು ಅಭ್ಯರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದ್ದರು. ಸತತ ನಾಲ್ಕು ದಿನ ನಡೆದ ಪ್ರತಿಭಟನೆಗೆ ಮಣಿದ ಯುಪಿಪಿಎಸ್ಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.