ಲಖನೌ: ಏಪ್ರಿಲ್‌ನಲ್ಲಿ ಉತ್ತರ ಪ್ರದೇಶದ ಪಂಚಾಯಿತಿ ಚುನಾವಣೆಗಳಲ್ಲಿ ಕರ್ತವ್ಯ ನಿರತರಾಗಿದ್ದ ಸರ್ಕಾರಿ ನೌಕರರ ಪೈಕಿ 2,097 ಸಿಬ್ಬಂದಿ ಕೋವಿಡ್–19 ಸಂಬಂಧಿತ ಕಾರಣಗಳಿಂದ ಮೃತಪಟ್ಟಿದ್ದಾರೆ. ಅವರಲ್ಲಿ ಹೆಚ್ಚಿನವರು ಶಿಕ್ಷಕರು ಎಂಬುದನ್ನು ರಾಜ್ಯ ಸರ್ಕಾರ ಬಹಿರಂಗ ಪಡಿಸಿದೆ.

ಪಂಚಾಯಿತಿಗಳಿಗೆ ಏಪ್ರಿಲ್ 15ರಿಂದ 29ರ ವರೆಗೂ ನಾಲ್ಕು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಮೇ 2ರಂದು ಮತ ಎಣಿಕೆ ಕಾರ್ಯ ನಡೆಸಲಾಗಿತ್ತು.

ಕೋವಿಡ್‌ನಿಂದ ಸಾವಿಗೀಡಾದ ಸರ್ಕಾರಿ ನೌಕರರ ಕುರಿತ ವಿವರವನ್ನು ಪಂಚಾಯಿತಿ ರಾಜ್‌ನ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಮನೋಜ್ ಕುಮಾರ್ ಸಿಂಗ್ ಅವರು ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿಯೊಂದಿಗೆ ಹಂಚಿಕೊಂಡಿದ್ದಾರೆ. ಮೃತರ ಕುಟುಂಬಗಳಿಗೆ ₹ 30 ಲಕ್ಷ ಪರಿಹಾರವನ್ನು ಶೀಘ್ರವಾಗಿ ತಲುಪಿಸಲು ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ– Covid-19 India Update: 27,254 ಹೊಸ ಕೋವಿಡ್ ಪ್ರಕರಣ, 219 ಸಾವು

ಚುನಾವಣೆ ಕರ್ತವ್ಯದ ವೇಳೆ 2,128 ಸರ್ಕಾರಿ ನೌಕರರು ಸಾವಿಗೀಡಾಗಿದ್ದು, ಅವರಲ್ಲಿ 2,097 ಮಂದಿ ಕೋವಿಡ್–19ನಿಂದ ಹಾಗೂ 31 ಜನ ಇತರೆ ಕಾರಣಗಳಿಂದ ಮೃತಪಟ್ಟಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.