ಡೆಹ್ರಾಡೂನ್: ಉತ್ತರಾಖಂಡದ 400 ಮದರಸಾಗಳಲ್ಲಿ ಮಕ್ಕಳಿಗೆ ಸಂಸ್ಕೃತ ಪಾಠ ಆರಂಭಿಸಲು ಅಲ್ಲಿನ ಮದರಸಾ ಮಂಡಳಿ ಉದ್ದೇಶಿಸಿದೆ. ಸಂಸ್ಕೃತ ಪಾಠವು ಐಚ್ಛಿಕವಾಗಿರಲಿದೆ’ ಎಂದೂ ಅದು ಹೇಳಿದೆ.

‘ಹಲವು ದಿನಗಳಿಂದ ಈ ಚಿಂತನೆ ನಡೆದಿದೆ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಈ ಕುರಿತು ಪ್ರಸ್ತಾವ ಸಲ್ಲಿಸಲು ತಯಾರಿಯನ್ನೂ ಮಾಡಿಕೊಳ್ಳಲಾಗುತ್ತಿದೆ. ಆಧುನಿಕ ಶಿಕ್ಷಣ ಪದ್ಧತಿಯೊಂದಿಗೆ ಸರಿಸಮನಾಗಿ ಮದರಸಾಗಳಲ್ಲೂ ಮಕ್ಕಳಿಗೆ ಶಿಕ್ಷಣ ದೊರೆಯಬೇಕು ಎನ್ನುವ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಆಶಯದಂತೆ ಈ ಯೋಜನೆ ರೂಪಿಸಲಾಗಿದೆ’ ಎಂದು ಮಂಡಳಿತ ಮುಖ್ಯಸ್ಥ ಮುಫ್ತಿ ಶಮೂನ್ ಖಾಸ್ಮಿ ಗುರುವಾರ ತಿಳಿಸಿದರು.

‘ಎನ್ಸಿಇಆರ್ಟಿ ಪಠ್ಯವನ್ನು ಮದರಸಾಗಳಲ್ಲಿ ಪರಿಚಯಿಸಿದ ಬಳಿಕ, ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣವು ಶೇ 96ರಷ್ಟಾಗಿದೆ. ಮದರಸಾಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳಲ್ಲಿ ಪ್ರತಿಭೆಗೆ ಕೊರತೆಯಿಲ್ಲ ಎನ್ನುವುದನ್ನು ಈ ಪ್ರಮಾಣವು ಸಾಬೀತು ಮಾಡಿದೆ. ಈಗ ಸಂಸ್ಕೃತವನ್ನು ಕಲಿಸಿದರೆ ಕೂಡ ನಮ್ಮ ಮಕ್ಕಳು ಅದನ್ನು ಸರಿಯಾಗಿ ಕಲಿತುಕೊಳ್ಳುತ್ತಾರೆ’ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.