ನವದೆಹಲಿ: ಉತ್ತರಪ್ರದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ನಿಯಂತ್ರಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರದಿಂದ ಸೋಮವಾರದವರೆಗೆ ಲಾಕ್‌ಡೌನ್ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.

ಈ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಸರಬರಾಜು ಹೊರತುಪಡಿಸಿ ಉಳಿದ ಎಲ್ಲಾ ವಹಿವಾಟನ್ನು ಬಂದ್ ಮಾಡಲಾಗುವುದು. ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಿಗ್ಗೆ 5ರವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ. ಇದು ಲಾಕ್‌ಡೌನ್ ಅಲ್ಲ, ಕೊರೊನಾ ಸೋಂಕು ಹೇಗೆ, ಎಲ್ಲಿ ಹರಡುತ್ತಿದೆ ಎಂಬುದನ್ನು ಪತ್ತೆ ಹಚ್ಚಿ ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳು ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.

ಈ ಲಾಕ್‌ಡೌನ್ ವೇಳೆಯಲ್ಲಿ ಯಾವುದು ನಿರ್ಬಂಧ ಇಲ್ಲ, ಯಾವುದಕ್ಕೆ ನಿರ್ಬಂಧ ಇದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ಇವುಗಳಿಗೆ ನಿರ್ಬಂಧ ಇಲ್ಲ

* ವೈದ್ಯಕೀಯ ಹಾಗೂ ಆರೋಗ್ಯ ಸೇವೆಗಳು, ಅಗತ್ಯ ಸೇವೆಗಳು ಮೊದಲಿನಂತೆ ಮುಂದುವರಿಯುತ್ತವೆ.

* ಪೆಟ್ರೋಲ್ ಪಂಪ್‌ಗಳು, ಹೆದ್ದಾರಿ ಡಾಬಾಗಳು (ಸಾಮಾನ್ಯವಾಗಿ ಹೆದ್ದಾರಿಗಳಲ್ಲಿರುವ ತಿನಿಸುಗಳು) ಸಹ ತೆರೆದಿರುತ್ತವೆ.

* ಅಗತ್ಯ ಸೇವೆಗಳಲ್ಲಿ ಕೆಲಸ ಮಾಡುವವರು, ಕೊರೋನಾ ಯೋಧರು, ನೈರ್ಮಲ್ಯ ಮತ್ತು ಮನೆ ಮನೆಗೆ ವಸ್ತುಗಳನ್ನು ವಿತರಣೆ ಮಾಡುವ ಸಿಬ್ಬಂದಿಗಳಿಗೆ ಯಾವುದೇ ನಿರ್ಬಂಧವಿಲ್ಲ.

* ರೈಲು ಸಂಚಾರ ಮುಂದುವರಿಯುತ್ತದೆ. ರೈಲು ನಿಲ್ದಾಣಗಳಿಗೆ ಬರುವ ಪ್ರಯಾಣಿಕರನ್ನು ಕರೆದೊಯ್ಯಲು ಉತ್ತರ ಪ್ರದೇಶ ರಸ್ತೆ ಸಾರಿಗೆ ನಿಗಮವು ಬಸ್ಸುಗಳ ವ್ಯವಸ್ಥೆ ಮಾಡಲಿದೆ.

* ವಿಮಾನ ಸೇವೆಗಳು (ದೇಶೀಯ ಮತ್ತು ಅಂತರರಾಷ್ಟ್ರೀಯ ಎರಡೂ) ಮೊದಲಿನಂತೆ ಮುಂದುವರಿಯುತ್ತವೆ. ವಿಮಾನ ನಿಲ್ದಾಣಗಳಿಂದ ಜನರು ತಮ್ಮ ಸ್ಥಾನಕ್ಕೆ ತೆರಳುವುದಕ್ಕೆ ಯಾವುದೇ ನಿರ್ಬಂಧಗಳಿಲ್ಲ.

*ಸರಕು ಸಾಗಾಣಿಕೆ ವಾಹನಗಳಿಗೆ ಯಾವುದೇ ನಿರ್ಬಂಧ ಇಲ್ಲ. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿನ ಸಂಚಾರವೂ ಮುಂದುವರಿಯುತ್ತದೆ.

* ವೈದ್ಯಕೀಯ ತಪಾಸಣೆ ಮತ್ತು ಕಣ್ಗಾವಲು ನಡೆಯುತ್ತಿರುವ ಅಭಿಯಾನವು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯುತ್ತದೆ.

*ಕೈಗಾರಿಕಾ ಘಟಕಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತವೆ, ಇದು ಗ್ರಾಮೀಣ ಪ್ರದೇಶಗಳಲ್ಲಿ ತೆರೆದಿರುತ್ತದೆ.

*ಎಕ್ಸ್‌ಪ್ರೆಸ್ ವೇ, ಸೇತುವೆಗಳು, ರಸ್ತೆಗಳು ಮತ್ತು ಖಾಸಗಿ ಯೋಜನೆಗಳ ಎಲ್ಲಾ ದೊಡ್ಡ ನಿರ್ಮಾಣ ಕಾರ್ಯಗಳು ಸಹ ಮುಂದುವರಿಯುತ್ತವೆ.

ಇವುಗಳಿಗೆ ನಿರ್ಬಂಧ

* ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಎಲ್ಲಾ ಕಚೇರಿಗಳು ಮತ್ತು ಮಾರುಕಟ್ಟೆಗಳು ಈ ಅವಧಿಯಲ್ಲಿ ಮುಚ್ಚಲ್ಪಡುತ್ತವೆ.

* ಪ್ರಯಾಣಿಕರನ್ನು ರೈಲ್ವೆ ನಿಲ್ದಾಣಗಳಿಗೆ ಕರೆದೊಯ್ಯುವುದನ್ನು ಹೊರತುಪಡಿಸಿ ಬಸ್ ಸೇವೆಗಳನ್ನು ಈ ಅವಧಿಯಲ್ಲಿ ನಿಷೇಧಿಸಲಾಗಿದೆ.

*ನಿರಂತರವಾಗಿ ಕೆಲಸ ಮಾಡುವ ಕೈಗಾರಿಕಾ ಘಟಕಗಳನ್ನು ಹೊರತುಪಡಿಸಿ, ನಗರ ಪ್ರದೇಶಗಳಲ್ಲಿನ ಇತರ ಘಟಕಗಳು ಬಂದ್ ಆಗಿರುತ್ತವೆ.

ಕೊರೊನಾ ಸೋಂಕು ತಡೆಯಲು ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಮುಂದುವರಿಯುತ್ತವೆ. ಮ್ಯಾಜಿಸ್ಟ್ರೇಟರು ಮತ್ತು ಪೊಲೀಸ್ ಅಧಿಕಾರಿಗಳು ಜಂಟಿ ಗಸ್ತು ತಿರುಗಲಿದ್ದು, ಯುಪಿ -112 ತಂಡಗಳು ಬಂದ್ ಉಸ್ತುವಾರಿ ವಹಿಸಲಿವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.