ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಲ್ಕ್ಯಾರಾ ಸುರಂಗ ಕುಸಿತ: ಎಲ್ಲಾ 41 ಕಾರ್ಮಿಕರ ರಕ್ಷಣೆ ಯಶಸ್ವಿ

Published : 28 ನವೆಂಬರ್ 2023, 11:28 IST
Last Updated : 28 ನವೆಂಬರ್ 2023, 17:17 IST
ಫಾಲೋ ಮಾಡಿ
11:2828 Nov 2023

ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯ ಅಂತಿಮ ಹಂತಕ್ಕೆ ಬಂದಿದೆ. ಕುಸಿದ ಸುರಂಗದಲ್ಲಿ 60 ಮೀಟರ್‌ಗಳಷ್ಟು ಉದ್ದದ ರಂಧ್ರ ಕೊರೆದಿರುವ ರಕ್ಷಣಾ ಕಾರ್ಯಾಚರಣೆ ಸಿಬ್ಬಂದಿ 17 ದಿನಗಳಿಂದ ಸಿಲುಕಿದ್ದ ಕಾರ್ಮಿಕರ ಸಂಕಷ್ಟವನ್ನು ಕೊನೆಗೊಳಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಕಾರ್ಮಿಕರ ಸಂಬಂಧಿಕರು, ಅಧಿಕಾರಿಗಳು ಹಾಗೂ ಕಳೆದ ಎರಡು ವಾರಗಳಿಂದ ನಿರಂತರವಾಗಿ ಶ್ರಮಿಸುತ್ತಿರುವ ಕಾರ್ಮಿಕರು ಸುರಂಗದತ್ತ ನಿರೀಕ್ಷೆಯ ನೋಟವನ್ನೇ ನೆಟ್ಟಿದ್ದಾರೆ.

11:3428 Nov 2023

ಸಿಲ್ಕ್ಯಾರಾದ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣೆಗೆ ರಿಷಿಕೇಶದಲ್ಲಿರುವ ಏಮ್ಸ್‌ (AIIMS) ವೈದ್ಯಕೀಯ ಸಿಬ್ಬಂದಿ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ತುರ್ತು ನಿಘಾ ಘಟಕ, ಹೃದ್ರೋಗ ಹಾಗೂ ಮಾನಸಿಕ ಆರೋಗ್ಯ ವೈದ್ಯರು ಹಾಗೂ ಶಸ್ತ್ರಚಿಕಿತ್ಸಕರು ಸ್ಥಳದಲ್ಲಿ ಸ್ಥಾಪಿಸಿರುವ ಆಸ್ಪತ್ರೆಗೆ ಧಾವಿಸಿದ್ದಾರೆ. ತುರ್ತು ಸೇವೆಗಾಗಿ ಮೂರು ಹೆಲಿಕಾಪ್ಟರ್‌ಗಳನ್ನು ಸ್ಥಳಕ್ಕೆ ಕರೆಯಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಕಾರ್ಮಿಕರನ್ನು ಹೆಲಿಕಾಪ್ಟರ್ ಮೂಲಕ ಹೆಚ್ಚಿನ ಚಿಕಿತ್ಸೆಗೆ ರವಾನಿಸುವ ಸಾಧ್ಯತೆ ಇದೆ. 

11:3828 Nov 2023
ಕಾರ್ಮಿಕರನ್ನು ಕರೆದೊಯ್ಯಲು ಸಿಲ್ಕ್ಯಾರಾದ ಸುರಂಗದೊಳಗೆ ಸಜ್ಜಾಗಿರುವ ಆಂಬುಲೆನ್ಸ್‌ಗಳು

ಕಾರ್ಮಿಕರನ್ನು ಕರೆದೊಯ್ಯಲು ಸಿಲ್ಕ್ಯಾರಾದ ಸುರಂಗದೊಳಗೆ ಸಜ್ಜಾಗಿರುವ ಆಂಬುಲೆನ್ಸ್‌ಗಳು

ಪಿಟಿಐ ಚಿತ್ರ

ಸುರಂಗದೊಳಗೆ ಆಂಬುಲೆನ್ಸ್‌ಗಳು ಪ್ರವೇಶಿಸಿವೆ. ಯಾವುದೇ ಕ್ಷಣದಲ್ಲಿ ಹೊರಬರುವ ಕಾರ್ಮಿಕರನ್ನು ಸಮೀಪದಲ್ಲಿ ಸ್ಥಾಪಿಸಿರುವ ಆಸ್ಪತ್ರೆಗೆ ಸಾಗಿಸಲು ಸಜ್ಜಾಗಿವೆ.

11:4228 Nov 2023

ಕಾರ್ಮಿಕರ ಸುರಕ್ಷಿತ ವಾಪಾಸಾತಿಗೆ ಅಂತರರಾಷ್ಟ್ರೀಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಅವರು ಬೆಟ್ಟತ ತಪ್ಪಲಿನಲ್ಲಿರುವ ದೇಗುದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು

11:4428 Nov 2023

ಸಿಲ್ಕ್ಯಾರಾದ ಸುರಂಗದೊಳಗೆ ಕಳೆದ 17 ದಿನಗಳಿಂದ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯ ಅಂತಿಮ ಹಂತ ತಲುಪಿರುವ ಹೊತ್ತಿಗೆ ಅವರ ನೆರವಿಗೆ ಅಧಿಕಾರಿಗಳ ತಂಡವನ್ನು ಕಳುಹಿಸಲಾಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಎಕ್ಸ್ ಖಾತೆಯಲ್ಲಿ ವಿಷಯ ಹಂಚಿಕೊಂಡಿದ್ದಾರೆ.

12:2128 Nov 2023

ಕಾರ್ಮಿಕರನ್ನು ತಲುಪಲು ಏಳು ಅಡಿಗಳು ಮಾತ್ರ ಬಾಕಿ ಇವೆ. ಈವರೆಗೂ ತೆಗೆದಿರುವ ಸುರಂಗದಲ್ಲಿನ ಮಣ್ಣನ್ನು ಹೊರಕ್ಕೆ ತೆಗೆಯಲಾಗಿದೆ. ಅನಿವಾರ್ಯ ಪರಿಸ್ಥಿತಿಯಲ್ಲಿ ನಿಷೇಧಿತ ಇಲಿ ಬಿಲ ತಂತ್ರಗಾರಿಕೆಯನ್ನು ಬಳಸಿ 2 ಅಡಿ ಅಗಲದ ಪೈಪ್ ಅಳವಡಿಸಲಾಗುತ್ತಿದೆ. ಇದರ ಮೂಲಕ ಕಾರ್ಮಿಕರನ್ನು ಹೊರಕ್ಕೆ ತರುವ ಪ್ರಯತ್ನ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

13:0028 Nov 2023

ಸಿಲ್ಕ್ಯಾರಾದಲ್ಲಿ ನಿರ್ಮಾಣ ಹಂತದ ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಸ್ಥಳದಿಂದ ನಿರ್ಗಮಿಸಿದ್ದಾರೆ. ಕಾರ್ಯಾಚರಣೆ ಅಂತಿಮ ಹಂತಕ್ಕೆ ತಲುಪಿದ ಸಂದರ್ಭದಲ್ಲಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಹಲವು ಗಂಟೆಗಳ ಕಾಲ ಇದ್ದು ಪ್ರಕ್ರಿಯೆ ವೀಕ್ಷಿಸಿದರು. ಈ ಸಂದರ್ಭದಲ್ಲಿ ಕಾರ್ಮಿಕರನ್ನು ಸ್ವಾಗತಿಸಲು ಹೂವಿನ ಹಾರಗಳನ್ನೂ ತರಿಸಲಾಯಿತು. ಸುರಂಗ ಕೊರೆಯುವ ಕಾರ್ಯ ಇನ್ನೂ ಎರಡು ಮೀಟರ್ ಬಾಕಿ ಇದ್ದು, ನಂತರ ಪೈಪ್ ಅಳವಡಿಸುವ ಕಾರ್ಯ ಆರಂಭವಾಗಬೇಕಿದೆ.

13:2728 Nov 2023

ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯ ಅಂತಿಮ ಹಂತದಲ್ಲಿದ್ದು, ಹೊರಬರುವ ಕಾರ್ಮಿಕರನ್ನು ಹೆಚ್ಚುವರಿ ಚಿಕಿತ್ಸೆಗೆ ಸಾಗಿಸಲು ಚಿನ್ಯಾಲಿಸೂರ್‌ ಹೆಲಿಪ್ಯಾಡ್ ಬಳಿ ವೈದ್ಯಕೀಯ ನೆರವಿಗಾಗಿ ಹೆಲಿಕಾಪ್ಟರ್ ಸಿದ್ಧಗೊಂಡಿದೆ.

14:2128 Nov 2023

ಸುರಂಗ ಕೊರೆಯುವ ಕಾರ್ಯ ಪೂರ್ಣಗೊಂಡಿದ್ದು, ಮುಂದಿನ 15ರಿಂದ 20 ನಿಮಿಷಗಳಲ್ಲಿ ಕಾರ್ಮಿಕರನ್ನು ಹೊರಕ್ಕೆ ತರುವ ಪ್ರಕ್ರಿಯೆ ಆರಂಭವಾಗಲಿದೆ. ಕೇಂದ್ರ ವಿಪತ್ತು ನಿರ್ವಹಣಾ ತಂಡವು ಕಾರ್ಮಿಕರನ್ನು ಹೊರಕ್ಕೆ ಕರೆತರಲಿದೆ. 41 ಕಾರ್ಮಿಕರನ್ನು ಹೊರತರಲು ಅರ್ಧ ಗಂಟೆ ಸಾಕು ಎಂದು ಅಧಿಕಾರಿಗಳು ಹೇಳಿದ್ದಾರೆ.

14:2728 Nov 2023

ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರಲ್ಲಿ ಮೊದಲ ಕಾರ್ಮಿಕ ಸುರಕ್ಷಿತವಾಗಿ ಹೊರಕ್ಕೆ ಕರೆತರುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗಿದೆ

ADVERTISEMENT
ADVERTISEMENT