ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಸ್ಮಾರಕಕ್ಕೆ, ಅವರಸುದೀರ್ಘ ಅವಧಿಯ ಗೆಳತಿ ವಿ.ಕೆ.ಶಶಿಕಲಾ ನಾಲ್ಕೂವರೆ ವರ್ಷಗಳ ತರುವಾಯ ಶನಿವಾರ ಭೇಟಿ ನೀಡಿದ್ದರು.

ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಪದಚ್ಯುತರಾಗಿರುವ ಅವರು, ಮರಳಿ ಸಕ್ರಿಯ ರಾಜಕಾರಣ ಪ್ರವೇಶಿಸಲು ಪ್ರಯತ್ನ ನಡೆಸಿದ್ದರು. ಹೀಗಾಗಿ ಈ ಭೇಟಿ ಮತ್ತಷ್ಟು ಕುತೂಹಲ ಮೂಡಿಸಿದೆ.

ಶಶಿಕಲಾ ಈ ಹಿಂದೆ ಫೆಬ್ರುವರಿ 15, 2017ರಲ್ಲಿ, ಬೆಂಗಳೂರಿನಲ್ಲಿ ಪರಪ್ಪನ ಅಗ್ರಹಾರದ ಕಾರಾಗೃಹದ ಅಧಿಕಾರಿಗಳ ಎದುರು ಶರಣಾಗಲು ತೆರಳುವ ಮೊದಲು, ಈ ಸ್ಥಾರಕ ಸ್ಥಳಕ್ಕೆ ಭೇಟಿ ನೀಡಿದ್ದರು. ಎಐಎಡಿಎಂಕೆ ಪಕ್ಷದ 50ನೇ ವರ್ಷಾಚರಣೆಯ ಒಂದು ದಿನ ಮೊದಲು ಅವರು ಭೇಟಿ ನೀಡಿರುವುದು ಗಮನಾರ್ಹವಾಗಿದೆ.

ಬೆಂಗಳೂರಿನ ಜೈಲಿನಿಂದ ಬಿಡುಗಡೆಯಾದ ಕೂಡಲೇ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಲು ಅವರು ಬಯಸಿದ್ದರು. ಆದರೆ, ಆಗ ಸ್ಮಾರಕ ಸ್ಥಳದ ನಿರ್ವಹಣೆ ಮತ್ತು ನಿರ್ಮಾಣ ಚಟುವಟಿಕೆಯ ನೆಪ ಹೇಳಿದ್ದ ಆಗಿನ ಮುಖ್ಯಮಂತ್ರಿ, ಒಂದು ಕಾಲದ ಅವರ ಆಪ್ತ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರು ಸ್ಮಾರಕಕ್ಕೆ ಪ್ರವೇಶವನ್ನು ನಿರ್ಬಂಧಿಸಿದ್ದರು.

ಟಿ.ನಗರದ ನಿವಾಸದಿಂದ ಬೆಳಿಗ್ಗೆ 10.30ಕ್ಕೆ, ‘ಅಶುಭ’ ಎಂದೇ ಭಾವಿಸುವ ರಾಹುಕಾಲದಲ್ಲಿ ನಿರ್ಗಮಿಸಿದ್ದ ಶಶಿಕಲಾಅವರು ಸ್ಮಾರಕದ ಸ್ಥಳಕ್ಕೆಬರುತ್ತಿದ್ದಂತೆ ಅಸಂಖ್ಯ ಬೆಂಬಲಿಗರು ಬರಮಾಡಿಕೊಂಡರು. ಜಯಲಲಿತಾಅವರುಬಳಸಿದ್ದ, ಎಐಡಿಎಂಕೆಬಾವುಟವನ್ನು ಅಳವಡಿಸಿದ್ದ ಕಾರಿನಲ್ಲೇ ಅವರು ಆಗಮಿಸಿದ್ದರು.

ಸ್ಮಾರಕ ಸ್ಥಳಕ್ಕೆ ಬರುತ್ತಿದ್ದಂತೆ ಭಾವುಕರಾದ ಶಶಿಕಲಾ, ಸ್ಮಾರಕಕ್ಕೆ ಪುಷ್ಪಗುಚ್ಛ ಇರಿಸುವ ವೇಳೆ ಕಣ್ಣೀರು ಒರೆಸಿಕೊಂಡರು.

‘ನಾನು ವಿಳಂಬವಾಗಿ ಏಕೆ ಬಂದಿದ್ದೇನೆ ಎಂಬುದು ಎಲ್ಲರಿಗೂ ತಿಳಿದಿದೆ. ಹಿಂದಿನದರ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಜಯಲಲಿತಾ ಅವರಿಗೆ ನಾನು ಮನಸ್ಸು ಧಾರೆ ಎರೆದಿದ್ದೇನೆ. ಐದು ವರ್ಷದಲ್ಲಿ ಏನಾಗಿತ್ತು ಎಂದು ಅವರಿಗೆ ತಿಳಿಸಿದೆ. ನಾಳೆಗಳು ಸುಂದರವಾಗಿವೆ’ ಎಂದು ಶಶಿಕಲಾ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.