ನವದೆಹಲಿ (ಪಿಟಿಐ): ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕುರಿತ ‘ವಾಜಪೇಯಿ: ದಿ ಆ್ಯಕ್ಸೆಂಟ್ ಆಫ್ ದಿ ಹಿಂದೂ ರೈಟ್’ ಆತ್ಮಕಥೆಯ ಮೊದಲನೇ ಆವೃತ್ತಿಯು ಮೇ 10ರಂದು ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ ಎಂದು ಪುಸ್ತಕದ ಪ್ರಕಾಶಕರು ತಿಳಿಸಿದ್ದಾರೆ.

ಈ ಪುಸ್ತಕವು ವಾಜಪೇಯಿ ಕುರಿತ ಜನಪ್ರಿಯ ಮಿಥ್ಯೆಗಳು ಮತ್ತು ಅವರ ಕುರಿತು ಯಾರಿಗೂ ತಿಳಿಯದ ಸಂಗತಿಗಳನ್ನು ಹೊಂದಿದೆ ಎನ್ನಲಾಗಿದೆ

ಅಭಿಷೇಕ್ ಚೌಧರಿ ಎಂಬ ಲೇಖಕರು ಈ ಪುಸ್ತಕವನ್ನು ರಚಿಸಿದ್ದಾರೆ. ಇದನ್ನು ನ್ಯೂ ಇಂಡಿಯಾ ಫೌಂಡೇಷನ್ ಸಹಕಾರದೊಂದಿಗೆ ಪಿಕಾಡೋರ್ ಇಂಡಿಯಾ ಸಂಸ್ಥೆಯು ಪ್ರಕಟಿಸಿದೆ.

‘ಸಂಘ ಪರಿವಾರದ ಜೊತೆ ವಾಜಪೇಯಿ ಅವರು ತಮ್ಮ ಆರಂಭಿಕ ದಿನಗಳಲ್ಲಿ ಹೊಂದಿದ್ದ ಒಡನಾಟದ ಕುರಿತು ಅರ್ಥ ಮಾಡಿಕೊಳ್ಳುವುದು ಭಾರತದ ಬಲಪಂಥದ ಇತಿಹಾಸವನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತಲೂ ಕಠಿಣ. 8 ವರ್ಷಗಳು ಗಂಭೀರವಾದ ಅಧ್ಯಯನ ನಡೆಸಲಾಗಿದೆ. ಭಾರತ, ಅಮೆರಿಕ, ಬ್ರಿಟನ್‌ನಲ್ಲಿ ದೊರಕಿದ ಮತ್ತು ಈವರೆಗೂ ಬಹಿರಂಗವಾಗದ ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿ ಕಲೆಹಾಕಲಾಗಿದೆ ಮತ್ತು ನೂರಾರು ಜನರ ಸಂದರ್ಶನ ಮಾಡಲಾಗಿದೆ’ ಎಂದು ಪ್ರಕಾಶಕರು ಪ್ರಕಟಣೆಯೊಂದರಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.