ನವದೆಹಲಿ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ 80 ಸದಸ್ಯರ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಲಾಗಿದೆ. ಸಂಸದ ವರುಣ್ ಗಾಂಧಿ ಮತ್ತು ಮಾಜಿ ಸಚಿವೆ ಮೇನಕಾ ಗಾಂಧಿ ಅವರನ್ನು ಕಾರ್ಯಕಾರಿಣಿಯಿಂದ ಹೊರಗಿಡಲಾಗಿದೆ.

ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೇಶದಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಪಿಲಿಬಿಟ್ ಕ್ಷೇತ್ರದ ವರುಣ್ ಗಾಂಧಿ ಬೆಂಬಲಿಸಿದ್ದರು. ಅಲ್ಲದೇ, ಇತ್ತೀಚೆಗೆ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ದುರ್ಘಟನೆಯ ವಿಡಿಯೊವನ್ನು ವರುಣ್ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದರು. ಆ ಘಟನೆಯಲ್ಲಿ ನಾಲ್ವರು ರೈತರು ಮೃತಪಟ್ಟಿದ್ದರು.

ಇನ್ನು ಸರ್ಕಾರದ ನಿರ್ಧಾರ ಮತ್ತು ಮೋದಿ ಅವರ ವಿರುದ್ಧ ಸದಾ ಹೇಳಿಕೆ ನೀಡುವ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರನ್ನು ಕಾರ್ಯಕಾರಿಣಿಯಿಂದ ಹೊರಗಿಡಲಾಗಿದೆ.

ಇನ್ನುಳಿದಂತೆ ಎಸ್ ಎಸ್ ಅಹ್ಲುವಾಲಿಯಾ, ಬೀರೇಂದರ್ ಸಿಂಗ್, ಕೇಂದ್ರ ಸಚಿವ ರಾವ್ ಇಂದ್ರಜಿತ್ ಸಿಂಗ್, ಪ್ರಹ್ಲಾದ್ ಪಟೇಲ್, ಸುರೇಶ್ ಪ್ರಭು, ರಾಜಸ್ಥಾನ ಮಾಜಿ ಮುಖ್ಯಮಂತ್ರಿ ವಸುಂದರಾ ರಾಜೆ ಪುತ್ರ ದುಷ್ಯಂತ್ ಸಿಂಗ್, ವಿಜಯ್ ಗೊಯೆಲ್, ವಿನಾಯಕ್ ಕಟಿಯಾರ್, ಅವರೂ ಕಾರ್ಯಕಾರಿಣಿಯಿಂದ ಹೊರಗುಳಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.