ಲಖನೌ: ರಾಜತಾಂತ್ರಿಕ ಬಿಕ್ಕಟ್ಟು, ಉಗ್ರವಾದದಂತಹ ಗಂಭೀರ ಸಮಸ್ಯೆಗಳ ಕಾರಣದಿಂದಾಗಿ ಭಾರತ ಹಾಗೂ ಪಾಕಿಸ್ತಾನ ನಡುವೆ ಸಂಘರ್ಷ ತೀವ್ರಗೊಳ್ಳುತ್ತಿರುವ ನಡುವೆ, ಉಭಯ ದೇಶಗಳ ವಧು ಹಾಗೂ ವರ ಆನ್ಲೈನ್ ಮೂಲಕ ಮದುವೆಯಾಗಿರುವುದು ಸುದ್ದಿಯಾಗಿದೆ.

ಉತ್ತರ ಪ್ರದೇಶದ ಜೌನ್ಪುರ ಜಿಲ್ಲೆಯ ನಿವಾಸಿ ಹಾಗೂ ಬಿಜೆಪಿ ಕಾರ್ಪೊರೇಟರ್ ತೆಹಸಿನ್ ಶಾಹಿದ್ ಅವರ ಮಗ ಮೊಹಮ್ಮದ್ ಅಬ್ಬಾಸ್ ಹೈದರ್ ಅವರು ವೀಸಾ ದೊರೆಯುವುದು ವಿಳಂಬವಾದ ಕಾರಣ, ಪಾಕಿಸ್ತಾನ ಯುವತಿಯನ್ನು ಆನ್ಲೈನ್ ಮೂಲಕವೇ ವಿವಾಹವಾಗಿದ್ದಾರೆ.

ವರದಿಗಳ ಪ್ರಕಾರ, ಲಾಹೋರ್ನಲ್ಲಿ ನೆಲೆಸಿರುವ ಸಂಬಂಧಿಕರ ಪುತ್ರಿ ಅಂದಲೀಬ್ ಜಹಾರ ಅವರೊಂದಿಗೆ ತಮ್ಮ ಮಗನ ವಿವಾಹವನ್ನು ತೆಹಸಿನ್ ಅವರು ಕಳೆದ ವರ್ಷವೇ ಗೊತ್ತು ಮಾಡಿದ್ದರು. ವರನ ಕುಟುಂಬ ವೀಸಾಕ್ಕಾಗಿ ವರ್ಷದ ಹಿಂದೆಯೇ ಅರ್ಜಿ ಸಲ್ಲಿಸಿತ್ತಾದರೂ, ಈವರೆಗೆ ದೊರೆತಿಲ್ಲ ಎನ್ನಲಾಗಿದೆ.

ವಧುವಿನ ತಾಯಿ ರಾಣಾ ಯಾಸ್ಮಿನ್ ಜೈದಿ ಅವರು ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೊಳಗಾಗಿದ್ದರು. ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿತ್ತು. ಅವರು ತಮ್ಮ ಮಗಳ ಮದುವೆ ನೋಡುವ ಬಯಕೆ ವ್ಯಕ್ತಪಡಿಸಿದ್ದರಿಂದ ಎರಡೂ ಕುಟುಂಬಗಳು ಆನ್ಲೈನ್ ಮೂಲಕ ತಕ್ಷಣವೇ ಮದುವೆ ಮಾಡಲು ನಿಶ್ಚಯಿಸಿದ್ದವು.

ವರ ಹಾಗೂ ಅವರ ಕುಟುಂಬದವರು, ಅತಿಥಿಗಳು ಶುಕ್ರವಾರ 'ಇಮಾಂಬರ'ಕ್ಕೆ (ಶಿಯಾ ಸಮುದಾಯದವರ ಪವಿತ್ರ ಮಂದಿರ) ತಲುಪಿದ್ದರು. ಆನ್ಲೈನ್ ಮೂಲಕವೇ ನಡೆದ ಮದುವೆಯನ್ನು ಅವರೆಲ್ಲ ಟಿವಿ ಸ್ಕ್ರೀನ್ ಮೂಲಕ ಕಣ್ತುಂಬಿಕೊಂಡು, ನವ ದಂಪತಿಗೆ ಹಾರೈಸಿದ್ದಾರೆ. ಸಮಾರಂಭಕ್ಕೆ ಜಿಲ್ಲೆಯ ಬಿಜೆಪಿ ನಾಯಕರೂ ಬಂದಿದ್ದರು. ಬಳಿಕ, ಅದ್ದೂರಿ ಭೋಜನಕೂಟ ನಡೆದಿದೆ.

ಮದುವೆಯಾದ ನಂತರ ಹೈದರ್ ಅವರು, ತಮ್ಮ ಪತ್ನಿಗೆ ಕೂಡಲೇ ವೀಸಾ ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
.ಚುನಾವಣೆ: BJP ಟಿಕೆಟ್ ಕೊಡಿಸುವುದಾಗಿ ಹೇಳಿ ಪ್ರಲ್ಹಾದ ಜೋಶಿ ಹೆಸರಿನಲ್ಲಿ ವಂಚನೆ.IND vs NZ: ಭಾರತ 462ಕ್ಕೆ ಆಲೌಟ್; ನ್ಯೂಜಿಲೆಂಡ್ಗೆ 107 ರನ್ ಗೆಲುವಿನ ಗುರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.