ತಿರುವನಂತಪುರ: ಕೇರಳದ ವಯನಾಡು ಸಮೀಪದ ಮೆಪ್ಪಾಡಿಯಲ್ಲಿ ಸಂಭವಿಸಿದ ಭೀಕರ ಭೂಕುಸಿತ ದುರಂತದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎರಡು ದಿನಗಳ ಶೋಕಾಚರಣೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ ಆದೇಶಿಸಿದ್ದಾರೆ.

ಭಾರೀ ಮಳೆಯಿಂದಾಗಿ ಸಂಭವಿಸಿದ ಭೂಕುಸಿತದಲ್ಲಿ ಈವರೆಗೂ 84 ಜನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇನ್ನೂ ಹಲವರು ನಾಪತ್ತೆಯಾಗಿದ್ದಾರೆ. ದುರಂತಕ್ಕೆ ತೀವ್ರ ಕಂಬನಿ ಮಿಡಿದಿರುವ ಮುಖ್ಯಮಂತ್ರಿ, ‘ದುರಂತದಲ್ಲಿ ಹಲವರು ತಮ್ಮವರನ್ನು, ಮನೆ ಹಾಗೂ ಆಸ್ತಿಪಾಸ್ತಿಯನ್ನು ಕಳೆದುಕೊಂಡಿದ್ದಾರೆ. ಇದೊಂದು ದೊಡ್ಡ ದುರಂತ’ ಎಂದಿದ್ದಾರೆ.
.ವಯನಾಡು ದುರಂತ: ಭಾರತದಲ್ಲಿ ಈವರೆಗೂ ಸಂಭವಿಸಿವೆ 3 ಸಾವಿರಕ್ಕೂ ಅಧಿಕ ಭೂಕುಸಿತ.ವಯನಾಡು ಭೂಕುಸಿತ ದುರಂತ: ದೇಶದ ಶೇ 4.3ರಷ್ಟು ಭೂಭಾಗಕ್ಕೆ ಕುಸಿತದ ಭೀತಿ.
ಶೋಕಾಚರಣೆಗೆ ಸಂಬಂಧಿಸಿದಂತೆ ಅಧಿಸೂಚನೆ ಪ್ರಕಟಿಸಿರುವ ಮುಖ್ಯ ಕಾರ್ಯದರ್ಶಿ ವಿ. ವೇಣು, ‘ಜುಲೈ 30 ಹಾಗೂ 31ರಂದು ರಾಜ್ಯದಲ್ಲಿ ಶೋಕಾಚರಣೆ ಜಾರಿಯಲ್ಲಿರುತ್ತದೆ. ರಾಷ್ಟ್ರಧ್ವಜವನ್ನು ಅರ್ಧ ಮಟ್ಟಕ್ಕೆ ಹಾರಿಸಬೇಕು. ಸಾರ್ವಜನಿಕ ಸಭೆ ಹಾಗೂ ಸಮಾರಂಭಗಳನ್ನು ರದ್ದುಪಡಿಸಲಾಗಿದೆ’ ಎಂದಿದ್ದಾರೆ.

‘ಘಟನಾ ಸ್ಥಳದಲ್ಲಿ ನೀರು ಹಾಗೂ ಕೆಸರಿನಲ್ಲಿ ಸಿಲುಕಿರುವ ಹಲವು ಮೃತದೇಹಗಳನ್ನು ರಕ್ಷಣಾ ತಂಡ ಹೊರಕ್ಕೆ ತೆಗೆದಿದೆ. ಈ ಹಂತದಲ್ಲಿ ಮೃತರಾದವರ ನಿಖರ ಸಂಖ್ಯೆಯನ್ನು ಹೇಳುವುದು ಕಷ್ಟ’ ಎಂದಿದ್ದಾರೆ.
.ವಿಡಿಯೊ ನೋಡಿ: ವಯನಾಡು ಭೂಕುಸಿತ, ಭರದಿಂದ ಸಾಗಿದ NDRF ರಕ್ಷಣಾ ಕಾರ್ಯಾಚರಣೆ.Wayanad landslides | ಚಿತ್ರಗಳಲ್ಲಿ ನೋಡಿ: ವಯನಾಡು ಭೂಕುಸಿತದ ಭೀಕರತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.