ಕೊಯಮತ್ತೂರು: ‘ದಾಳಿಯಲ್ಲಿ ಎಷ್ಟು ಮಂದಿ ಸತ್ತರು ಎನ್ನುವುದನ್ನು ಲೆಕ್ಕಹಾಕಲು ಭಾರತೀಯ ವಾಯುಪಡೆಗೆ ಸಾಧ್ಯವಿಲ್ಲ’ ಎಂದು ಏರ್ ಚೀಫ್ ಮಾರ್ಷಲ್ ಬಿ.ಎಸ್.ಧನೋವಾ ಸೋಮವಾರ ಟೀಕಾಕಾರರಿಗೆ ತಿರುಗೇಟು ನೀಡಿದರು.

ಫೆ.26ರಂದು ಬಾಲಾಕೋಟ್‌ನಲ್ಲಿ ವಾಯುಪಡೆ ನಡೆಸಿದ ದಾಳಿಯಲ್ಲಿ ಎಷ್ಟುಮಂದಿ ಸತ್ತರು ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಟ್ಟಡದಲ್ಲಿ ಎಷ್ಟು ಜನ ಇರುತ್ತಾರೋ, ಅಷ್ಟು ಜನ ಸತ್ತಿರುತ್ತಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ನೇರ ಉತ್ತರ ನೀಡಿದರು.‘ಸತ್ತವರನ್ನು ಲೆಕ್ಕಹಾಕುವ ಸ್ಥಿತಿಯಲ್ಲಿ ವಾಯುಪಡೆ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ವಿಶ್ವದ ಪ್ರಮುಖ ಮಾಧ್ಯಮಗಳು ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಸ್ಥಳೀಯರನ್ನು ಉಲ್ಲೇಖಿಸಿ ಪ್ರಕಟಿಸುತ್ತಿರುವ ಸುದ್ದಿಗಳ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನಿರ್ದಿಷ್ಟವಾಗಿ ಇಂಥ ಸ್ಥಳಕ್ಕೆಬಾಂಬ್ ಹಾಕಬೇಕು ಎಂಬಗುರಿ ನಮಗೆ ಇತ್ತು. ನಮ್ಮ ವಿಮಾನಗಳು ಆ ಗುರಿಗಳ ಮೇಲೆ ಬಾಂಬುಗಳನ್ನು ಹಾಕಿವೆಯೇಅಥವಾ ಇಲ್ಲವೇ, ಬಾಂಬ್ ಸ್ಫೋಟ ಪರಿಣಾಮಕಾರಿಯಾಗಿ ಗುರಿಯನ್ನು ನಾಶಪಡಿಸಿತೆಎಂಬುದಷ್ಟೇ ವಾಯುಪಡೆಗೆ ಮುಖ್ಯ. ಸತ್ತವರ ಸಂಖ್ಯೆಯನ್ನು ನಾವು ಲೆಕ್ಕಹಾಕಲು ಸಾಧ್ಯವಿಲ್ಲ. ಎಷ್ಟು ಸತ್ತಿರಬಹುದು ಎಂಬುದನ್ನು ಸರ್ಕಾರವೇ ಹೇಳಬೇಕು’ ಎಂದರು.

‘ನಮ್ಮ ಗುರಿ ಏನಾಗಿತ್ತು ಎಂಬುದನ್ನು ವಿದೇಶಾಂಗ ವ್ಯವಹಾರಗಳ ಖಾತೆಯ ಕಾರ್ಯದರ್ಶಿಯೇ ವಿಶ್ವದೆದುರು ಸ್ಪಷ್ಟಪಡಿಸಿದ್ದಾರೆ. ನಮ್ಮ ಯೋಜನೆಯಂತೆ ನಾವು ಗುರಿಗಳಿಗೆ ಬಾಂಬ್ ಹಾಕಿದ್ದೇವೆ. ಇಲ್ಲದಿದ್ದರೆ ಅವರೇಕೆ (ಪಾಕಿಸ್ತಾನ) ಪ್ರತಿಕ್ರಿಯಿಸುತ್ತಿದ್ದರು? ಅಲ್ಲಿಯವರೆಗೆ ಹೋಗಿದ್ದ ನಮ್ಮ ವಿಮಾನಗಳು ಕಾಡಿನ ಮೇಲೆ ಬಾಂಬ್ ಹಾಕಿ ಬಂದಿದ್ದರೆ ಅವರಿಗೆ ಪ್ರತಿಕ್ರಿಯಿಸುವ ಅಗತ್ಯವಾದರೂ ಏನಿರುತ್ತಿತ್ತು’ ಎಂದು ಭಾರತೀಯ ವಾಯುಪಡೆ ಗುರಿಗಳತ್ತ ಬಾಂಬ್ ಎಸೆಯುವಲ್ಲಿ ವಿಫಲವಾಗಿವೆ ಎಂಬ ಆರೋಪವನ್ನು ನಿರಾಕರಿಸಿದರು.

ಗಡಿಯಲ್ಲಿ ಇದೀಗ ನಡೆಯುತ್ತಿರುವ ಕಾರ್ಯಾಚರಣೆಗಳ ಬಗ್ಗೆ ಪ್ರತಿಕ್ರಿಯಿಸಲು ಆಗದು ಎಂದು ಸ್ಪಷ್ಟಪಡಿಸಿದರು.

‘ಪಾಕಿಸ್ತಾನದ ಬಳಿಯಿರುವ ಅತ್ಯಾಧುನಿಕ ಎಫ್–16 ಯುದ್ಧವಿಮಾನಗಳಿಗೆಹಳೆಯ ಮಿಗ್–21 ವಿಮಾನಗಳು ಸರಿಸಾಟಿಯಾಗಬಲ್ಲವೇ’ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,‘ಮಿಗ್ 21 ಬೈಸನ್ಸ್’ ಯುದ್ಧ ವಿಮಾನಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಅವುಗಳಲ್ಲಿ ಈಗ ಉತ್ತಮ ಶಸ್ತ್ರಾಸ್ತ್ರ ವ್ಯವಸ್ಥೆ, ರಾಡಾರ್ ವ್ಯವಸ್ಥೆ ಇದೆ. ಎಫ್–16 ವಿರುದ್ಧದ ಹೋರಾಟಕ್ಕೆ ಮಿಗ್–21 ಕೂಡ ನಮ್ಮ ಆಯ್ಕೆಯಾಗಿಯೇ ಉಳಿದುಕೊಂಡಿದೆ. ನಮ್ಮ ಸುಪರ್ದಿಯಲ್ಲಿರುವ ವಿಮಾನಗಳನ್ನು ಬಳಸಿಯೇ ನಾವು ಹೋರಾಡಬೇಕಲ್ಲವೇ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.