ಲಖನೌ: 1857ರಲ್ಲಿ ನಡೆದಿದ್ದ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಳಕೆಯಾಗಿದ್ದ ಹಲವು ಶಸ್ತ್ರಾಸ್ತ್ರಗಳು ಉತ್ತರಪ್ರದೇಶದ ಶಹಜಹಾನ್ಪುರದಲ್ಲಿ ಪತ್ತೆಯಾಗಿವೆ.

‘ಧಕಿಯತೆವಾರಿ ಗ್ರಾಮದ ರೈತ ಬಾಬು ರಾಮ್ ಅವರು ಕೆಲವು ದಿನಗಳ ಹಿಂದೆ ತಮ್ಮ ಹೊಲದಲ್ಲಿ ಉಳುಮೆ ಮಾಡುತ್ತಿದ್ದಾಗ ತುಕ್ಕು ಹಿಡಿದಿರುವ 20 ಕತ್ತಿಗಳು, 10 ಬಂದೂಕುಗಳ ನಳಿಕೆಗಳು, ಎರಡು ದೇಶಿ ನಿರ್ಮಿತ ಪಿಸ್ತೂಲ್ಗಳು ಮತ್ತು ಒಂದು ಈಟಿ ಪತ್ತೆಯಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘2011ರಲ್ಲಿ ಇದೇ ಗ್ರಾಮದ ಕುಟುಂಬವೊಂದರಿಂದ ಜಮೀನನ್ನು ಖರೀದಿಸಿದ್ದೆ, ಆ ವೇಳೆ ಅಲ್ಲಿ ದಿಬ್ಬಗಳಿದ್ದವು’ ಎಂದು ರೈತ ಬಾಬು ರಾಮ್ ತಿಳಿಸಿದ್ದಾರೆ.

‘ಪತ್ತೆಯಾಗಿರುವ ಆಯುಧಗಳು 150ರಿಂದ 200 ವರ್ಷ ಹಳೆಯದಾಗಿರಬಹುದು’ ಎಂದು ಸ್ಥಳೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ‘ಕತ್ತಿಗಳಿಗೆ ಬೆಳ್ಳಿಯ ಹಿಡಿಕೆಗಳಿವೆ. ಬಂದೂಕುಗಳ ನಳಿಕೆಗಳು ಮಾತ್ರ ಪತ್ತೆಯಾಗಿವೆ. ಅದರ ಮರದ ಭಾಗಗಳನ್ನು ಗೆದ್ದಲು ಹುಳುಗಳು ತಿಂದಿರಬಹುದು’ ಎಂದು ಸ್ಥಳೀಯ ಕಾಲೇಜಿನ ಇತಿಹಾಸ ಉಪನ್ಯಾಸಕ ಡಾ.ದೀಪಕ್ ಸಿಂಗ್ ಅವರು ಹೇಳಿದ್ದಾರೆ.

'ಸಮೀಪದ ಪ್ರದೇಶಗಳಲ್ಲಿ ಹರಪ್ಪ ನಾಗರಿಕತೆಯ ಕೆಲ ಆಯುಧಗಳು ಇತ್ತೀಚೆಗೆ ಪತ್ತೆಯಾಗಿದ್ದವು. ಅಧ್ಯಯನಕ್ಕಾಗಿ ಕೆಲ ಕತ್ತಿಗಳನ್ನು ನೀಡುವಂತೆ ಸ್ಥಳೀಯಾಡಳಿತಕ್ಕೆ ಮನವಿ ಮಾಡಿದ್ದೇವೆ’ ಎಂದು ತಜ್ಞರು ತಿಳಿಸಿದ್ದಾರೆ.

‘ಆಯುಧಗಳು ಪತ್ತೆಯಾಗಿರುವ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಕಳುಹಿಸಲಾಗಿದ್ದು, ಈ ಬಗ್ಗೆ ಶೀಘ್ರದಲ್ಲೇ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ವರದಿ ನೀಡಲಾಗುವುದು’ ಎಂದು ತಿಹಾರ್ನ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಜೀತ್ ಸಿಂಗ್ ರೈ ಅವರು ಹೇಳಿದ್ದಾರೆ.

ಪತ್ತೆಯಾಗಿರುವ ಆಯುಧಗಳನ್ನು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.