ಬೆಂಗಳೂರು: ವಿಶ್ವ ಆರೋಗ್ಯ ಸಂಸ್ಥೆ ಇದೇ ಮೊದಲ ಬಾರಿಗೆ ಸಾಂಪ್ರದಾಯಿಕ ಔಷಧಿಗಳ ಬಗೆಗಿನ ಜಾಗತಿಕ ಶೃಂಗಸಭೆಯನ್ನು ಕೇಂದ್ರ ಆಯುಷ್ ಸಚಿವಾಲಯದ ಸಹಯೋಗದಲ್ಲಿ ಗುಜರಾತ್‌ನ ಗಾಂಧಿನಗರದಲ್ಲಿ ನಾಳೆಯಿಂದ (ಆ.17, 18) ಎರಡು ದಿನ ಹಮ್ಮಿಕೊಂಡಿದೆ.

ಈ ಕಾರ್ಯಕ್ರಮದ ಉದ್ಘಾಟಕರಾಗಿ ಗಾಂಧಿನಗರಕ್ಕೆ ಬಂದಿಳಿದಿರುವ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಡಾ. ಟೆಡ್ರೋಸ್ ಗೆಬ್ರಿಯಾಸಸ್ ಅವರಿಗೆ ಆಯೋಜಕರು ಸಾಂಪ್ರದಾಯಿಕ ಸ್ವಾಗತ ನೀಡಿದರು.

ಈ ವೇಳೆ ಟೆಡ್ರೋಸ್ ಅವರು ಗುಜರಾತಿನ ಗಾರ್ಬಾ ನೃತ್ಯ ಮಾಡಿ ಗಮನ ಸೆಳೆದರು. ವೇದಿಕೆ ಮೇಲೆ ಸುಮಾರು ಮೂರು ನಿಮಿಷ ಟೆಡ್ರೋಸ್ ತಮ್ಮ ಸಹೋದ್ಯೋಗಿಗಳ ಜೊತೆ ನೃತ್ಯ ಮಾಡಿದರು. ಈ ವಿಡಿಯೊವನ್ನು ಆಯುಷ್ ಸಚಿವಾಲಯ ಎಕ್ಸ್ ತಾಣದಲ್ಲಿ ಹಂಚಿಕೊಂಡಿದೆ.

ಈ ವಿಡಿಯೊಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ‘ಈ ವಿಡಿಯೊ ನೋಡಿದರೆ ನನ್ನ ಗೆಳೆಯ ಟೆಡ್ರೋಸ್ ಈ ನವರಾತ್ರಿಗೆ ಗಾರ್ಬಾ ನೃತ್ಯ ಮಾಡಲು ಈಗಲೇ ತಯಾರಿ ನಡೆಸಿದಂತೆ ಕಾಣುತ್ತದೆ. ಭಾರತಕ್ಕೆ ನಿಮಗೆ ಸ್ವಾಗತ’ ಎಂದು ಹೇಳಿದ್ದಾರೆ.

ಆ.17 ರಂದು ಬೆಳಿಗ್ಗೆ ಗಾಂಧಿನಗರದಲ್ಲಿ ಸಾಂಪ್ರದಾಯಿಕ ಔಷಧಿಗಳ ಬಗೆಗಿನ ಜಾಗತಿಕ ಶೃಂಗಸಭೆ ಉದ್ಘಾಟನೆಯಾಗಲಿದ್ದು, ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಹಾಗೂ ಆಯುಷ್ ಸಚಿವ ಸರ್ಬಾನಂದ್ ಸೋನುವಾಲಾ ಅವರು ಉಪಸ್ಥಿತರಿರಲಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಆರು ವಿಭಾಗಗಳ ರಾಷ್ಟ್ರಗಳ ಪ್ರತಿನಿಧಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.