ನವದೆಹಲಿ: ಅಮೆರಿಕದ ಖ್ಯಾತ ನಿಯತಕಾಲಿಕ ಟೈಮ್, ಮುಖಪುಟದಲ್ಲಿ ನರೇಂದ್ರ ಮೋದಿಯವರ ಚಿತ್ರ ಪ್ರಕಟಿಸಿ ಭಾರತದ ಡಿವೈಡರ್ ಇನ್ ಚೀಫ್ ಎಂಬ ಲೇಖನ ಪ್ರಕಟಿಸಿದೆ.ಮೋದಿಯನ್ನು ಭಾರತದ ಮುಖ್ಯ ವಿಭಜಕ ಎಂದು ಕರೆದಿರುವುದು ಮೋದಿ ಅಭಿಮಾನಿಗಳನ್ನು ಕೆರಳಿಸಿದೆ.

ಟೈಮ್ ಮ್ಯಾಗಜಿನ್ ಮುಖಪುಟದ ಬಗ್ಗೆ ಸುದ್ದಿಯಾದ ಬೆನ್ನಲ್ಲೇ ಆ ಲೇಖನ ಬರೆದ ಲೇಖಕ ಯಾರು? ಅವರ ಹಿನ್ನೆಲೆ ಏನು ಎಂಬ ವಿಷಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗಿದೆ.

ಸಾಮಾಜಿಕತಾಣದಲ್ಲಿ ಹರಿದಾಡಿದ ಎಡಿಟ್ ಮಾಡಿದ ಸ್ಕ್ರೀನ್ಶಾಟ್

ಆತ ಆತಿಶ್ ತಸೀರ್,ಭಾರತೀಯ ಕಾಂಗ್ರೆಸ್ ಪಕ್ಷದ ಪಿಆರ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಟೈಮ್ ಮ್ಯಾಗಜಿನ್ ತಮ್ಮ ನಂಬಿಕೆಯನ್ನು ಕಳೆದುಕೊಂಡಿದ್ದು, ಎಡಪಂಥೀಯರ ಮುಖವಾಣಿಯಾಗಿದ್ದರಲ್ಲಿ ಸಂದೇಹವಿಲ್ಲ.-ಹೀಗೆ ಟ್ವೀಟ್ ಮಾಡಿದ್ದು ಬಿಜೆಪಿ ಅನುಯಾಯಿ, ನೆಟಿಜನ್ ಚೌಕೀದಾರ್ ಶಾಶ್.ಇವರನ್ನು ಟ್ವಿಟರ್ನಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಫಾಲೋ ಮಾಡುತ್ತಿದ್ದಾರೆ.

ಇದೇ ಟ್ವೀಟ್ 500ಕ್ಕಿಂತಲೂ ಹೆಚ್ಚು ಬಾರಿ ರಿಟ್ವೀಟ್ ಆಗಿದೆ. ಈ ಟ್ವೀಟ್ ಮಾಡಿದ ಶಾಶ್ ತಮ್ಮ ಟ್ವೀಟ್ನೊಂದಿಗೆ ಆತಿಶ್ ತಸೀರ್ ಅವರ ವಿಕಿಪೀಡಿಯಾ ಪುಟದ ಸ್ಕ್ರೀನ್ಶಾಟ್ನ್ನೂ ಲಗತ್ತಿಸಿದ್ದಾರೆ.

ತಸೀರ್ ಬ್ರಿಟಿಷ್ ಮೂಲದ ಪತ್ರಕರ್ತ, ಲೇಖಕರು, ಆದರೆ ಸ್ಕ್ರೀನ್ಶಾಟ್ನಲ್ಲಿರುವುದು ತಸೀರ್ ಕಾಂಗ್ರೆಸ್ ಪಕ್ಷದಪಿಆರ್ ಮ್ಯಾನೇಜರ್ ಎಂದು.ಅಂದರೆ ಕಾಂಗ್ರೆಸ್ ಪಕ್ಷಕ್ಕಾಗಿ ತಸೀರ್ ದುಡಿಯುತ್ತಿರುವುದರಿಂದ ಈ ರೀತಿ ಮಾಡಿದ್ದಾರೆ ಎಂಬುದು ಟ್ವೀಟ್ ಮರ್ಮ.ಆಸಕ್ತಿಕರ ವಿಷಯ ಎಂದರೆ ಈ ಸ್ಕ್ರೀನ್ಶಾಟ್ನಲ್ಲಿ ಮ್ಯಾನೇಜರ್ ಎಂದು ಬರೆದಿರುವುದೇ ತಪ್ಪು. Manager ಎಂದು ಬರೆಯುವ ಬದಲು ‘manger’ ಎಂದು ಬರೆಯಲಾಗಿದೆ

ವಿಕಿಪಿಡಿಯಾ ಪುಟದಲ್ಲಿ ತಿದ್ದುಪಡಿ
ಟ್ವಿಟರ್ನಲ್ಲಿ ಶೇರ್ ಮಾಡಿರುವ ಈ ಸ್ಕ್ರೀನ್ಶಾಟ್ ವಿಕಿಪಿಡಿಯಾದಲ್ಲಿ ಎಡಿಟ್ ಮಾಡಿದ ಪುಟದ್ದಾಗಿದೆ.ವಿಕಿಪೀಡಿಯಾದಲ್ಲಿ ಯಾರು ಬೇಕಾದರೂ ನೋಂದಣಿ ಮಾಡಿಕೊಂಡು ಆಮೇಲೆ ಲಾಗಿನ್ ಆಗಿ ಲೇಖನ/ ಪುಟಗಳನ್ನು ಎಡಿಟ್ ಮಾಡಬಹುದು.

ಟೈಮ್ ನಿಯತಕಾಲಿಕದಲ್ಲಿ ಮೋದಿ ಬಗ್ಗೆ ಲೇಖನ ಪ್ರಕಟವಾದ ಕೂಡಲೇ ಆತಿಶ್ ತಸೀರ್ ಅವರ ವಿಕಿಪೀಡಿಯಾ ಪುಟಗಳನ್ನು ಎಡಿಟ್ ಮಾಡಲಾಗಿದೆ.

ಆಲ್ಟ್ ನ್ಯೂಸ್ ವರದಿ ಪ್ರಕಾರ ಆತಿಶ್ ತಸೀರ್ ಅವರ ಪುಟ ಮೇ 10ರಂದು ಹಲವು ಬಾರಿ ಎಡಿಟ್ ಆಗಿದೆ.ಮೊದಲ ಬಾರಿ ಎಡಿಟ್ ಆಗಿದ್ದು ಬೆಳಗ್ಗೆ 7.59ಕ್ಕೆ. ಇಲ್ಲಿ ವೃತ್ತಿ (Career) ವಿಭಾಗದಲ್ಲಿ “the PR manger for the Congress” ಎಂದು ಎಡಿಟ್ ಮಾಡಿ ಸೇರಿಸಲಾಗಿದೆ.

ಆದಾಗ್ಯೂ, ಇದೀಗ ತಸೀರ್ ಪೇಜ್ ‘protected’ ಆಗಿದ್ದು, ಯಾರಿಗೂ ಎಡಿಟ್ ಮಾಡಲು ಸಾಧ್ಯವಾಗದಂತೆ ನಿರ್ಬಂಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.