ಗಾಂಧಿನಗರ: ‘ಜಾಗತಿಕ ಬೆಳವಣಿಗೆಯ ಎಂಜಿನ್ ಆಗಿರುವ ಭಾರತವನ್ನು ವಿಶ್ವಾಸಾರ್ಹ ಸ್ನೇಹಿತನಾಗಿ ಮತ್ತು ಸ್ಥಿರತೆಯ ಆಧಾರಸ್ತಂಭವಾಗಿ ಪರಿಗಣಿಸಲಾಗುತ್ತಿದೆ. ತಂತ್ರಜ್ಞಾನದ ಕೇಂದ್ರ ಹಾಗೂ ಪ್ರತಿಭಾವಂತ ಯುವ ಸಮೂಹದ ಶಕ್ತಿ ಕೇಂದ್ರವಾಗಿಯೂ ಭಾರತ ಹೊರಹೊಮ್ಮಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವೈಬ್ರೆಂಟ್ ಗುಜರಾತ್ ಜಾಗತಿಕ ಸಮಾವೇಶದ 10ನೇ ಆವೃತ್ತಿಯನ್ನು ಉದ್ಘಾಟಿಸಿ ಬುಧವಾರ ಅವರು ಮಾತನಾಡಿದರು.

‘ಜಗತ್ತಿನ ಮುಂಚೂಣಿ ರಾಷ್ಟ್ರಗಳ ಪಟ್ಟಿ ಕ್ಷಿಪ್ರವಾಗಿ ಬದಲಾಗುತ್ತಿದೆ. ಈಗ ಭಾರತ ವಿಶ್ವ ಮಿತ್ರನಾಗಿ ಮುಂಚೂಣಿಗೆ ಬರುತ್ತಿದೆ. ಇನ್ನು ಕೆಲವೇ ವರ್ಷಗಳಲ್ಲಿ ಅತಿ ದೊಡ್ಡ ಆರ್ಥಿಕತೆಯ ವಿಶ್ವದ ಮೂರು ಪ್ರಮುಖ ರಾಷ್ಟ್ರಗಳ ಸ್ಥಾನಕ್ಕೇರಲಿದೆ ಎಂದು ಪ್ರಮುಖ ಸಂಸ್ಥೆಗಳು ಹೇಳುತ್ತಿವೆ’ ಎಂದಿದ್ದಾರೆ.

‘ಇಡೀ ಜಗತ್ತು ಒಂದೇ ಗುರಿಯತ್ತ ಸಾಗುತ್ತಿರುವ ಹಾಗೂ ಅದನ್ನು ಸಾಕಾರಗೊಳಿಸುವ ಭರವಸೆಯನ್ನು ವಿಶ್ವ ಮಿತ್ರನಾಗಿರುವ ಭಾರತ ನೀಡುತ್ತಿದೆ. ಉತ್ತಮ ಸ್ನೇಹಿತ ಹಾಗೂ ಪ್ರಮುಖ ಆಧಾರಸ್ತಂಭವಾಗಿರುವ ಭಾರತವು ಜಗತ್ತಿನ ಹಿತದೃಷ್ಟಿಯಿಂದ ಜನಕೇಂದ್ರಿತ ಅಭಿವೃದ್ಧಿಯತ್ತ ತನ್ನ ಗಮನ ಹರಿಸಿದೆ’ ಎಂದು ಹೇಳಿದ್ದಾರೆ.

‘ಭಾರತ ಸ್ವಾತಂತ್ರ್ಯ ಪಡೆದ 75ನೇ ವರ್ಷಾಚರಣೆಯನ್ನು ಇತ್ತೀಚೆಗೆ ಆಚರಿಸಿದ್ದೇವೆ. ಮುಂದಿನ 25 ವರ್ಷಗಳಲ್ಲಿ ನಾವು 100 ವರ್ಷ ಪೂರೈಸಲಿದ್ದೇವೆ. ಮುಂದಿನ 25 ವರ್ಷಗಳು ಭಾರತದ ಪಾಲಿಗೆ ಅಮೃತ ಕಾಲ. ಈ ಅವಧಿಯಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಹೊಂದಲಾಗಿದೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ಸಮಾವೇಶದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.