ಕೋಲ್ಕತ್ತ: ಈ ಬಾರಿ ಮೊಹರಂ ಮತ್ತು ದುರ್ಗಾ ಪೂಜೆ ಒಂದೇ ದಿನ ಬರುತ್ತದೆ. ಉತ್ತರ ಪ್ರದೇಶದ ಅಧಿಕಾರಿಗಳು ನನ್ನಲ್ಲಿ ಕೇಳಿದರು, ದುರ್ಗಾ ಪೂಜೆಯ ಸಮಯ ಬದಲಿಸಬಹುದೇ? ಎಂದು. ಅದಕ್ಕೆ ನಾನು ಹೇಳಿದೆ 'ದುರ್ಗಾ ಪೂಜೆಯ ಸಮಯ ಬದಲಿಸಲುಆಗುವುದಿಲ್ಲ, ಅಷ್ಟಕ್ಕೂ ಸಮಯ ಬದಲಿಸಬೇಕೆಂದಿದ್ದರೆ ಮೊಹರಂ ಮೆರವಣಿಗೆಯ ಸಮಯ ಬದಲಿಸಿ'- ಹೀಗೆ ಹೇಳಿದ್ದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ.

ಪಶ್ಚಿಮ ಬಂಗಾಳದ ಬರಾಸತ್ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಆದಿತ್ಯನಾಥ,ಪಶ್ಚಿಮ ಬಂಗಾಳ ಸರ್ಕಾರ ಅಲ್ಪಸಂಖ್ಯಾತರ ಓಲೈಸುವ ತಂತ್ರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಕೋಲ್ಕತ್ತದ ಫೂಲ್ ಬಗಾನ್ ಪ್ರದೇಶದಲ್ಲಿ ಆದಿತ್ಯನಾಥ ರ್ಯಾಲಿ ನಡೆಸಲು ತೀರ್ಮಾನಿಸಿದ್ದ ಜಾಗದಲ್ಲಿ ಕಿಡಿಗೇಡಿಗಳು ವೇದಿಕೆ ಧ್ವಂಸ ಮಾಡಿದ್ದರಿಂದ ಆ ರ್ಯಾಲಿ ರದ್ದಾಗಿತ್ತು. ವೇದಿಕೆ ಅಲಂಕಾರ ಮಾಡಿದವರ ಮೇಲೆ ಹಲ್ಲೆ ನಡೆದಿದೆ ಎಂದು ಬಿಜೆಪಿ ಆರೋಪಿಸುತ್ತಿದೆ.

ಏತನ್ಮಧ್ಯೆ, ರ್ಯಾಲಿಯ ವೇದಿಕೆ ಧ್ವಂಸಗೊಳಿಸಿದ ಪ್ರಕರಣದ ನಂತರ ಬಂಗಾಳದಲ್ಲಿ ನಡೆಸಲು ನಿರ್ಧರಿಸಿದ್ದ ಎಲ್ಲ ರ್ಯಾಲಿಗಳಲ್ಲಿ ಭಾಗವಹಿಸುವಂತೆ ಆದಿತ್ಯನಾಥರಿಗೆಅಮಿತ್ ಶಾ ನಿರ್ದೇಶನ ನೀಡಿದ್ದರು ಎಂದು ಬಿಜೆಪಿ ಮೂಲಗಳು ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.