ಹೈದರಾಬಾದ್ (ಪಿಟಿಐ): ‘ಭಯೋತ್ಪಾದನೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಶೂನ್ಯ ಸಹಿಷ್ಣು ನೀತಿಯು ಮುಂದುವರೆಯಲಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಹೇಳಿದರು.

ತೆಲಂಗಾಣದ ಹಕೀಂಪೇಟ್ನಲ್ಲಿಯ ರಾಷ್ಟ್ರೀಯ ಕೈಗಾರಿಕಾ ಭದ್ರತಾ ಅಕಾಡೆಮಿಯಲ್ಲಿ ನಡೆದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್ಎಫ್) 54ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಆಂತರಿಕ ಭದ್ರತೆಗೆ ಸಂಬಂಧಿಸಿದ ಹಲವಾರು ಸವಾಲುಗಳನ್ನು ಕಳೆದ ಒಂಬತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರವು ಯಶಸ್ವಿಯಾಗಿ ನಿರ್ವಹಿಸಿದೆ. ಪ್ರತ್ಯೇಕತಾವಾದ, ಭಯೋತ್ಪಾದನೆ ಮತ್ತು ದೇಶ ವಿರೋಧಿ ಚಟುವಟಿಕೆಗಳು ದೇಶದ ಯಾವುದೇ ಭಾಗದಲ್ಲಿ ನಡೆದರೂ ಅದನ್ನು ದೃಢವಾಗಿ ನಿಭಾಯಿಸಲಾಗುತ್ತದೆ’ ಎಂದು ಹೇಳಿದರು.

ಭಯೋತ್ಪಾದನೆ ವಿರುದ್ಧ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಮತ್ತು ರಾಜ್ಯ ಪೊಲೀಸರು ‘ಮಹತ್ವ’ದ ಪಾತ್ರ ವಹಿಸುತ್ತಿದ್ದಾರೆ ಎಂದು ಒತ್ತಿ ಹೇಳಿದ ಅವರು, ಕಳೆದ ಒಂಬತ್ತು ವರ್ಷಗಳಲ್ಲಿ ಭದ್ರತೆ ವಿಚಾರದಲ್ಲಿ ಅವರ ಪಾತ್ರ ರುಜವಾತಾಗಿದೆ ಎಂದರು.

ದೇಶದ ವಿವಿಧ ಭಾಗಗಳ ಭದ್ರತಾ ಪರಿಸ್ಥಿತಿ ಕುರಿತು ಮಾತನಾಡಿದ ಅವರು, ಕಾಶ್ಮೀರದಲ್ಲಿಯ ಹಿಂಸಾಚಾರ, ಈಶಾನ್ಯ ರಾಜ್ಯಗಳಲ್ಲಿಯ ಬಂಡುಕೋರತೆ ಮತ್ತು ಕೆಲ ಭಾಗಗಳಲ್ಲಿದ್ದ ಎಡಪಂಥೀಯ ತೀವ್ರಗಾಮಿತ್ವವು ಈಗ ತಗ್ಗುತ್ತಿದೆ. ಜನರ ಆತ್ಮವಿಶ್ವಾಸ ಹೆಚ್ಚಾಗುತ್ತಿದೆ ಎಂದರು.

ದೇಶದ ಆರ್ಥಿಕತೆಗೆ ಸಿಐಎಸ್ಎಫ್ ಬಹುದೊಡ್ಡ ಕೊಡುಗೆ ನೀಡಿದೆ ಎಂಬುದನ್ನು ಅದರ 53 ವರ್ಷಗಳ ಇತಿಹಾಸವೇ ಹೇಳುತ್ತದೆ. ಮೋದಿ ಅವರು ನಿಗದಿಪಡಿಸಿರುವ 5 ಲಕ್ಷ ಕೋಟಿ ಡಾಲರ್ ಆರ್ಥಿಕತೆಯ ಗುರಿಯನ್ನು ಮುಟ್ಟಲು ವಿಮಾನ ನಿಲ್ದಾಣಗಳು, ಬಂದರುಗಳು ಮತ್ತು ಕೈಗಾರಿಕಾ ಸ್ಥಾಪನೆಗಳಲ್ಲಿಯ ಭದ್ರತೆಯು ತುಂಬಾ ಮಹತ್ವದ್ದಾಗಿದೆ. ಸಿಐಎಸ್ಎಫ್ ಅನ್ನು ತಾಂತ್ರಿಕವಾಗಿ ಭದ್ರಗೊಳಿಸುವ ನಿಟ್ಟಿನಲ್ಲಿ ಯಾವುದೇ ಅವಕಾಶವನ್ನೂ ಕೇಂದ್ರ ಗೃಹ ಸಚಿವಾಲಯವು ಕೈಚೆಲ್ಲುವುದಿಲ್ಲ. ಸಿಐಎಸ್ಎಫ್ ಅನ್ನು ಬಲಗೊಳಿಸಲು ಯೋಜನೆ ರೂಪಿಸಲಾಗಿದೆ. ಮುಂದಿನ 10 ವರ್ಷಗಳಲ್ಲಿ ಹಲವಾರು ಅವಕಾಶಗಳು ಸಂಸ್ಥೆಗೆ ಒದಗಿ ಬರಲಿವೆ ಎಂದು ಅಮಿತ್ ಶಾ ಹೇಳಿದರು.

ಕರ್ತವ್ಯದಲ್ಲಿದ್ದ ವೇಳೆ ಹುತಾತ್ಮರಾದ ಸಿಐಎಸ್ಎಫ್ ಸಿಬ್ಬಂದಿಗೆ ಅವರು ಗೌರವ ಸಲ್ಲಿಸಿದರು. ಇದೇ ಮೊದಲ ಬಾರಿಗೆ ಸಿಐಎಸ್ಎಫ್ ಸಂಸ್ಥಾಪನಾ ದಿನಾಚರಣೆಯನ್ನು ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶದ (ಎಸ್ಸಿಆರ್) ಹೊರಗೆ ಆಚರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.