ರೂ. ಚೆನ್ನೈ (ಪಿಟಿಐ): ತಮಿಳು ನಟ- ರಾಜಕಾರಣಿ ವಿಜಯಕಾಂತ್ ಅವರು ಸ್ಥಿರ ಮತ್ತು ಚರಾಸ್ತಿ ಸೇರಿದಂತೆ ಒಟ್ಟು 47 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಮ್ಮ ಆಸ್ತಿ ವಿವರಗಳನ್ನು ವಿಜಯಕಾಂತ್ ನಮೂದಿಸಿದ್ದಾರೆ.
ಡಿಎಂಡಿಕೆ ಪಕ್ಷದ ಸಂಸ್ಥಾಪಕರಾಗಿರುವ ವಿಜಯಕಾಂತ್ ಅವರ ಬಳಿ 6 ಲಕ್ಷ ನಗದು ಸೇರಿದಂತೆ 9.04 ಕೋಟಿ ಮೌಲ್ಯದ ಚರಾಸ್ತಿ, ಕೃಷಿ ಭೂಮಿ ಸೇರಿದಂತೆ 10.83 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಅವರ ಪತ್ನಿ ಪ್ರೇಮಲತಾ ಹೆಸರಿನಲ್ಲಿ 1.2 ಕೋಟಿ ರೂಪಾಯಿ ಚರಾಸ್ತಿ, 5.28 ಕೋಟಿ ರೂಪಾಯಿ ಮೌಲ್ಯದ ಸ್ಥರಾಸ್ತಿ ಇದೆ.

ರಿಷಿವಂತಿಯಂ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ವಿಜಯಕಾಂತ್ ಅವರ ವಾರ್ಷಿಕ ಆದಾಯ 53.77 ಲಕ್ಷ ರೂಪಾಯಿಗಳು. ತಮ್ಮ ವಿರುದ್ಧ ಹೂಡಿರುವ ಮಾನನಷ್ಟ ಪ್ರಕರಣವೊಂದು ಇನ್ನೂ ಇತ್ಯರ್ಥವಾಗದೇ ಉಳಿದಿದೆ ಎಂದೂ ವಿಜಯಕಾಂತ್ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.