ಬೆಳಗಾವಿ: ಆರೋಗ್ಯ ಕವಚ–108ರ ಸೇವೆಯನ್ನು ಸಮರ್ಪಕವಾಗಿ ಒದಗಿಸಲು ಆರೋಗ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಆಕ್ರೋಶದಿಂದ ಹೇಳಿದೆ.

ಕೃಷ್ಣಬೈರೇಗೌಡಅಧ್ಯಕ್ಷತೆಯಪಿಎಸಿಯುಭಾರತೀಯಮಹಾಲೇಖಪಾಲರ ವರದಿಯಲ್ಲಿನಆರೋಗ್ಯ ಇಲಾಖೆಯ ಆರೋಗ್ಯ ಕವಚ–108ರ ಯೋಜನೆಯ ಕುರಿತು ಪರಿಶೀಲನೆ ನಡೆಸಿತ್ತು. ಈ ವರದಿಯನ್ನು ಮಂಗಳವಾರ ಸದನದಲ್ಲಿ ಮಂಡಿಸಲಾಯಿತು.

2017ರಲ್ಲೇ ಮರು ಟೆಂಡರ್‌ಗೆ ಆದೇಶವಾಗಿದೆ. ಹಾಗಿದ್ದರೂ, ಟೆಂಡರ್ ಪ್ರಕ್ರಿಯೆಗಳ ಅಂಶಗಳ ಪರಿಶೀಲನೆಗೆ ಹಲವಾರು ಸಮಿತಿ ರಚನೆ ಮಾಡಿದ್ದಲ್ಲದೇ, ಕ್ಷುಲ್ಲಕ ಕಾರಣ ನೀಡಿ ಟೆಂಡರ್ ರದ್ದುಗೊಳಿಸಿರುವುದು ಹಾಗೂ ಹೊಸ ಟೆಂಡರ್ ಕರೆಯದೇ ಇರುವುದಕ್ಕೆ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.

ಇಲಾಖೆಯು ಪಿಎಸಿಗೆ ಸಲ್ಲಿಸಿದ ಉತ್ತರದಲ್ಲಿ, ಪರಿಣಿತರ ಸಮಿತಿ ಶಿಫಾರಸಿನಂತೆ ಟೆಂಡರ್ ರದ್ದುಗೊಳಿಸಿರುವುದಾಗಿನ್ಯಾಯಾಲಯಕ್ಕೆಪ್ರಮಾಣ ಪತ್ರ ಸಲ್ಲಿಸಿದೆಎಂದು ಹೇಳಿದೆ. ಆದರೆ, ಯಾವುದೇ ಶಿಫಾರಸನ್ನುಪರಿಣಿತರ ಸಮಿತಿ ನೀಡದಿರುವುದನ್ನು ನ್ಯಾಯಾಲಯವು ಗಮನಿಸಿ, ಇಲಾಖೆಯಿಂದ ಸ್ಪಷ್ಟೀಕರಣ ಕೋರಿದ್ದನ್ನು ಸಮಿತಿ ಗಮನಿಸಿದೆ. ಪಿಎಸಿಯನ್ನೇ ತಪ್ಪುದಾರಿಗೆ ಎಳೆದಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದೆ.

ಪಿಎಸಿ ಮಾಡಿರುವ ಆಕ್ಷೇಪಗಳೇನು?

l108 ಸೇವೆ ಒದಗಿಸುತ್ತಿರುವ ಜಿವಿಕೆ–ಇಎಂಆರ್‌ಐ ಸಂಸ್ಥೆಯು ಕಳಪೆ ಗುಣಮಟ್ಟದ ಸೇವೆಗಳನ್ನು ಒದಗಿಸುತ್ತಿದ್ದು, ಆಂಬುಲೆನ್ಸ್‌ಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಂಡಿಲ್ಲ ಎಂದು ಇಲಾಖೆಯೇ ಹೇಳಿದೆ. ಹೀಗಿದ್ದರೂ ಇಲ್ಲಿಯವರೆಗೂ ಸಂಸ್ಥೆಯ ಸೇವೆಯನ್ನು ಮುಂದುವರಿಸಿರುವುದು ತೀವ್ರ ಕಳವಳಕಾರಿ

lಸೇವೆ ಒದಗಿಸುತ್ತಿರುವ ಸಂಸ್ಥೆ ಉತ್ತಮ ಮೈಲೇಜ್ ಖಾತರಿಪಡಿಸಿಕೊಳ್ಳಲು ಆಂಬುಲೆನ್ಸ್‌ನಲ್ಲಿ ಹವಾನಿಯಂತ್ರಣ ವ್ಯವಸ್ಥೆ ಕಿತ್ತುಹಾಕಿ ಅನುದಾನ ಉಳಿತಾಯ ಮಾಡಿಕೊಂಡಿದೆ ಎಂಬುದು ಇಲಾಖೆಯ ಗಮನಕ್ಕೆ ಬಂದಿದೆ. ಇದನ್ನು ಸಿಎಜಿ ವರದಿಯಲ್ಲಿ ಇಲಾಖೆಯ ಗಮನಕ್ಕೆ ತಂದಿದ್ದರೂ ಸೇವಾದಾರರಿಗೆ ನೋಟಿಸ್ ನೀಡಲಾಗಿದೆ ಎಂದು ಹಾರಿಕೆ ಉತ್ತರ ನೀಡಿರುವ ಇಲಾಖೆ ಧೋರಣೆ ಸರಿಯಲ್ಲ

lಎರಡು ಪ್ರಕರಣಗಳಲ್ಲಿ 18–23 ಕರೆಗಳನ್ನು ಮಾಡಿದ್ದರೂ ಆಂಬುಲೆನ್ಸ್ ಬರಲೇ ಇಲ್ಲ. ಹೀಗಾಗಿ, ಒಂದು ಪ್ರಕರಣದಲ್ಲಿ ಗರ್ಭಿಣಿ, ಮತ್ತೊಂದು ಪ್ರಕರಣದಲ್ಲಿ ಮಗುವಿನ ಪ್ರಾಣ ಹೋಯಿತು. ರೋಗಿಗಳಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಗಮನಕ್ಕೆ ಬಂದಿದ್ದರೂ ಇಲಾಖೆಯು ಯಾವುದೇ ಕ್ರಮವನ್ನೂ ಕೈಗೊಳ್ಳದೇ ಇರುವುದು ಆಕ್ಷೇಪಾರ್ಹ

lಬಳಕೆಯಲ್ಲಿರುವ ಆಂಬ್ಯುಲೆನ್ಸ್‌ಗಳು 12ರಿಂದ 15 ವರ್ಷ ಹಳೆಯದಾಗಿವೆ. ಇದನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ಟೆಂಡರ್‌ನಲ್ಲಿ ಆಂಬುಲೆನ್ಸ್‌ಗಳು ಹಾಗೂ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಲು ಸೂಕ್ತ ಕ್ರಮವಹಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.