ನಾಗರಹೊಳೆಯಲ್ಲಿ ಇತ್ತೀಚೆಗೆ ಅರಣ್ಯಾಧಿಕಾರಿಗಳ ಕ್ಯಾಮೆರಾಕ್ಕೆ ಸೆರೆಸಿಕ್ಕ ಹುಲಿ ಹಾಗೂ ಅದರ ಮರಿ
ದೇಶದಲ್ಲಿ ಅತ್ಯುತ್ತಮ ಹುಲಿ ಸಂರಕ್ಷಿತ ಪ್ರದೇಶಗಳ ಪೈಕಿ ನಾಗರಹೊಳೆ 3ನೇ ಸ್ಥಾನದಲ್ಲಿದೆ. ಇಲ್ಲಿ ಹುಲಿ ಬೇಟೆ ಇಲ್ಲ. ಬೇಟೆ ತಡೆ ಶಿಬಿರಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ.
-ಹರ್ಷವರ್ಧನ್, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ.
ಮಡಿಕೇರಿ ವಲಯದಲ್ಲಿ ಹುಲಿ ಸಾವು ಪ್ರಕರಣಗಳು ಇತ್ತೀಚಿನ ತಿಂಗಳುಗಳಲ್ಲಿ ಸಂಭವಿಸಿಲ್ಲ. ಜನರು ಹುಲಿ ಕುರಿತು ಅನಗತ್ಯವಾಗಿ ಪ್ಯಾನಿಕ್‌ಗೆ ಒಳಗಾಗಬಾರದು. ಹುಲಿ ಹೆಜ್ಜೆಗುರುತು ಕಂಡು ಬಂದಲ್ಲಿ ಇಲಾಖೆಗೆ ಮಾಹಿತಿ ನೀಡಬೇಕು.
-ಭಾಸ್ಕರ್, ಮಡಿಕೇರಿ ವನ್ಯಜೀವಿ ವಲಯದ ಡಿಸಿಎಫ್.
ಹುಲಿಗಳ ಸಾಂದ್ರತೆ ಹೆಚ್ಚಳವೊಂದೇ ಹುಲಿ– ಮಾನವ ಸಂಘರ್ಷಕ್ಕೆ ಕಾರಣವಲ್ಲ. ಇದಕ್ಕಿಂತಲೂ ಹುಲಿಗಳ ಆವಾಸಸ್ಥಾನದಲ್ಲಿ ಅದರ ಆಸುಪಾಸಿನಲ್ಲಿ ಮಾನವನ ಅವೈಜ್ಞಾನಿಕ ಚಟುವಟಿಕೆಗಳ ಹೆಚ್ಚಳವೂ ಕಾರಣವಾಗಿದೆ.