ಬಂಡಿಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ಮರಿಯಾನೆಯನ್ನು ಬೇಟೆಯಾಡಲು ಹೊಂಚು ಹಾಕಿ ಕುಳಿತಿದ್ದ ಹುಲಿಯನ್ನು ತಾಯಿ ಆನೆ ಹಿಮ್ಮೆಟ್ಟಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಭಯಾರಣ್ಯದ ಸಫಾರಿ ವಲಯದಲ್ಲಿ ತಾಯಿ ಆನೆಯ ಜೊತೆ ಮರಿಯಾನೆ ಮೇವು ಸೇವಿಸುವಾಗ ಸಮೀಪದಲ್ಲಿ ಹುಲಿಯೊಂದು ಬೇಟೆಗೆ ಹೊಂಚು ಹಾಕಿ ಕುಳಿತಿರುತ್ತದೆ. ಹುಲಿ ದಾಳಿ ಮಾಡುವ ಮುನ್ಸೂಚನೆ ಅರಿತ ತಾಯಿ ಆನೆ ಪ್ರತಿದಾಳಿಗೆ ಮುಂದಾಗಿದ್ದು ಹುಲಿಯು ಸ್ಥಳದಿಂದ ಕಾಲ್ಕಿತ್ತಿದೆ. ಈ ದೃಶ್ಯಗಳನ್ನು ಸಫಾರಿಗೆ ತೆರಳಿದ ಪ್ರವಾಸಿಗರು ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.