ಬೆಂಗಳೂರು: ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಬರೆದ ಅಭ್ಯರ್ಥಿಯೊಬ್ಬರ ಹಾಲ್ಟಿಕೆಟ್ನಲ್ಲಿ ಅವರ ಭಾವಚಿತ್ರದ ಬದಲು ನಟಿ ಸನ್ನಿಲಿಯೊನ್ ಇರುವ ಅಶ್ಲೀಲ ಚಿತ್ರ ಪ್ರಕಟವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಕೆಲ ಮಾಧ್ಯಮಗಳಲ್ಲೂ ಈ ಸುದ್ದಿ ಪ್ರಸಾರವಾಗಿದ್ದು, ಈ ಕುರಿತು ಸೂಕ್ತ ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಇಲಾಖೆಯ ದೂರು ಆಧರಿಸಿ ಶಿವಮೊಗ್ಗದಲ್ಲಿ ಎಫ್ಐಆರ್ ದಾಖಲಾಗಿದೆ.

‘ಈ ಪ್ರಮಾದ ಇಲಾಖೆಯಿಂದ ಆದ ಲೋಪವಲ್ಲ. ಪರೀಕ್ಷೆ ತೆಗೆದುಕೊಂಡ ಪ್ರತಿ ಅಭ್ಯರ್ಥಿಯೂ ಸ್ವತಃ ಯೂಸರ್ ಐಡಿ, ಪಾಸ್ವರ್ಡ್ ಬಳಸಿ ನೋಂದಣಿ ಮಾಡಿಕೊಳ್ಳುತ್ತಾರೆ. ಎಲ್ಲ ಮಾಹಿತಿ, ಪೋಟೊ ಅವರೇ ಅಪ್ಲೋಡ್ ಮಾಡುತ್ತಾರೆ. ಎಲ್ಲ ಮಾಹಿತಿ ಸರಿ ಇದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಅವಕಾಶವಿರುತ್ತದೆ. ನಂತರವೇ ನಿಗದಿತ ಅರ್ಜಿ ಶುಲ್ಕ ಪಾವತಿಸಬಹುದು. ಅರ್ಜಿಯ ಮುದ್ರಿತ ಪ್ರತಿ ಪಡೆಯಬಹುದು. ಇಲಾಖೆಯ ತಂತ್ರಾಂಶ ಸಂಪೂರ್ಣ ಸುರಕ್ಷತೆ ಹೊಂದಿದೆ. ಹಾಗಾಗಿ, ಯಾವುದೇ ಲೋಪವಾಗಿಲ್ಲ’ ಎಂದು ಆಯುಕ್ತರ ಕಚೇರಿ ಸ್ಪಷ್ಟನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.