ಹಾಸನ: ಶ್ರವಣಬೆಳಗೊಳ ದಿಗಂಬರ ಜೈನ ಮಠದ ಪೀಠಾಧಿಪತಿಯಾಗಿ ಶಿವಮೊಗ್ಗ ಜಿಲ್ಲೆಯ ಸಾಗರದ ಆಗಮ ಕೀರ್ತಿ ಅವರ ಪಟ್ಟಾಭಿಷೇಕ ಮಹೋತ್ಸವ ಮಾರ್ಚ್ 27 ರಂದು ಬೆಳಿಗ್ಗೆ 9.15ಕ್ಕೆ ಶ್ರೀಜೈನ ಮಠದ ಬಸದಿಯಲ್ಲಿ ನಡೆಯಲಿದೆ.

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ
ಯವರಿಗೆ ಮಠದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಹೊಂಬುಜ ಜೈನ ಮಠದ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಈ ವಿಷಯ ತಿಳಿಸಿದರು.

‘ಪೂರ್ವಾಶ್ರಮದಲ್ಲಿ ಆಗಮ ಇಂದ್ರ ಆಗಿದ್ದ ಅವರು ಅಭಿನವ ಸ್ವಸ್ತಿಶ್ರೀ ಆಗಮ ಕೀರ್ತಿ ಭಟ್ಟಾರಕ ಸ್ವಾಮೀಜಿಯಾಗಿ ಪೀಠಾ
ರೋಹಣ ಮಾಡುವರು. ನಾಲ್ಕು ತಿಂಗಳ ಹಿಂದೆಯೇ ಅವರಿಗೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ವಿಚಾರಪಟ್ಟ ಕ್ಷುಲ್ಲಕ ದೀಕ್ಷೆ ನೀಡಿದ್ದು, ಆಗಮ ಕೀರ್ತಿ ಎಂದು ನಾಮಕರಣ ಮಾಡಿದ್ದರು. ತಮ್ಮ ಜೊತೆಗೆ ಇರಿಸಿಕೊಂಡು ಮಠದ ಪರಂಪರೆ, ಸಂಸ್ಕಾರ, ಕ್ಷೇತ್ರದ ಪರಿಚಯ ಮಾಡಿಸಿದ್ದರು’ ಎಂದರು.

‘ಚಾರುಕೀರ್ತಿ ಸ್ವಾಮೀಜಿ ಅವರು ಉತ್ತರಾಧಿಕಾರಿಯಾಗಿ ಆಗಮ ಕೀರ್ತಿಗಳ ಹೆಸರು ವಿಲ್ ಮಾಡಿದ್ದರು. ಸಮಾಜದ ಪ್ರಮುಖರು, ಆಡಳಿತ ಮಂಡಳಿಯ ಸದಸ್ಯರ ಸಭೆ ಕರೆದು ಲಿಖಿತ ರೂಪದಲ್ಲಿಯೂ ತಿಳಿಸಿದ್ದರು. ಪಟ್ಟಾಭಿಷೇಕದ ನಂತರವೇ ಕ್ಷೇತ್ರದ ಆಡಳಿತ ಜಾರಿಗೆ ಬರಲಿದ್ದು, ಅಲ್ಲಿಯವರೆಗೆ ಕ್ಷೇತ್ರದ ನಿರ್ವಹಣೆಯ ಖರ್ಚುವೆಚ್ಚಗಳನ್ನು ಶಿಷ್ಯವರ್ಗ ಮತ್ತು ಭಕ್ತರು ನಿರ್ವಹಿಸುವರು. ಪಟ್ಟಾಭಿಷೇಕದ ನಿರ್ವಹಣೆಗೆ ತಾತ್ಕಾಲಿಕ ಬ್ಯಾಂಕ್ ಖಾತೆ ತೆರೆಯಲಾಗಿದೆ. ನಂತರ ಸಾರ್ವಜನಿಕ ಸಮಾರಂಭ ಆಯೋಜಿಸಲಾಗುವುದು’ ಎಂದರು.

ಆಗಮ ಇಂದ್ರ ಅವರ ಪರಿಚಯ

2001ರ ಫೆಬ್ರುವರಿ 2 ರಂದು ಜನಿಸಿರುವ ಆಗಮ ಇಂದ್ರ ಅವರು, ಸಾಗರದ ಅಶೋಕ್ಕುಮಾರ್ ಇಂದ್ರ ಹಾಗೂ ಅನಿತಾ ದಂಪತಿಯ ಪುತ್ರ.

ಪ್ರಾಥಮಿಕ, ಪ್ರೌಢಶಿಕ್ಷಣ ಹಾಗೂ ಪದವಿ ಶಿಕ್ಷಣವನ್ನು ಸಾಗರದಲ್ಲಿ, ಪದವಿಪೂರ್ವ ಶಿಕ್ಷಣವನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ ಪಡೆದಿದ್ದಾರೆ.

ಅವರು ಇಂಗ್ಲಿಷ್, ಕನ್ನಡ, ಹಿಂದಿ ಬಲ್ಲವರಾಗಿದ್ದು, ಎನ್ಸಿಸಿ ಕೆಡೆಟ್ ಬಿ ಮತ್ತು ಸಿ. ಪ್ರಮಾಣಪತ್ರವನ್ನು ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.