ಮೈಸೂರು: ‘ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ಗಳಲ್ಲಿ ಬೆಳೆಸಾಲ ಪಡೆದಿದ್ದು, ಕೋವಿಡ್ನಿಂದ ಮೃತಪಟ್ಟಿರುವ ರೈತರ ಸಾಲಮನ್ನಾಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಿಂತಿಸಿದ್ದಾರೆ. ಇಂತಹ ರೈತರ ಮಾಹಿತಿ ನೀಡಲು ಅಪೆಕ್ಸ್ ಬ್ಯಾಂಕ್ಗೆ ಸೂಚಿಸಲಾಗಿದೆ’ ಎಂದುಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಂಗಳವಾರ ತಿಳಿಸಿದರು.

ನಗರದಲ್ಲಿ ನಡೆದ ‘ರೈತ ಸ್ಪಂದನೆ’ ಸಮಾರಂಭ ಉದ್ಘಾಟಿಸಿ ಮಾತನಾಡಿ, ‘ರೈತರ ಮಾಹಿತಿ ಸಂಗ್ರಹಿಸಿದ ಬಳಿಕ ಮುಖ್ಯಮಂತ್ರಿ ಜೊತೆ ಚರ್ಚಿಸಿ, ಈ ಬಗ್ಗೆ ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದರು.

‘ವಿಜಯಪುರ ಡಿಸಿಸಿ ಬ್ಯಾಂಕ್ನ ಶತಮಾನೋತ್ಸವಕ್ಕಾಗಿ ಮೀಸಲಿಟ್ಟಿದ್ದ ನಿಧಿಯನ್ನೇ ಬಳಸಿ ಕೋವಿಡ್ನಿಂದ ಮೃತಪಟ್ಟ ಸಾಲಗಾರ ರೈತರ ಕುಟುಂಬಗಳಿಗೆ ವಿತರಿಸಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

‘ರಾಜ್ಯದ 21 ಡಿಸಿಸಿ ಬ್ಯಾಂಕ್ಗಳು ಲಾಭದಲ್ಲಿವೆ. ಶಿವಮೊಗ್ಗ, ಕಲಬುರ್ಗಿ ಡಿಸಿಸಿ ಬ್ಯಾಂಕ್ಗಳ ಸಮಸ್ಯೆ ಬಗೆಹರಿದಿದೆ. ಶಿವಮೊಗ್ಗದಲ್ಲಿ ಅಧಿಕಾರಿ ವರ್ಗವನ್ನೇ ಬದಲಿಸಲಾಗಿದೆ. ಕಲಬುರ್ಗಿಯಲ್ಲಿ ಸ್ಥಗಿತವಾಗಿದ್ದ ₹ 195 ಕೋಟಿ ಸಾಲವನ್ನು ಮರುಪಾವತಿಸಿದ್ದು, ಜುಲೈ 10ರಂದು ಹೊಸದಾಗಿ ₹ 50 ಕೋಟಿ ಸಾಲ ಕೊಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.