ಶಿರಸಿ: ಬನವಾಸಿಯಲ್ಲಿರುವ ಪ್ರಸಿದ್ಧ ಮಧುಕೇಶ್ವರ ದೇವಸ್ಥಾನ ಸೋರುತ್ತಿದ್ದು, ದುರಸ್ತಿ ಮಾಡುವಂತೆ ಭಕ್ತರೊಬ್ಬರು ಕಳಕಳಿಯಿಂದ ಪುರಾತತ್ವ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದ್ದರು. ಆದರೆ ಅದಕ್ಕೆ ಇಲಾಖೆ ನೀಡಿದ ಉತ್ತರ ಮಾತ್ರ ಎಂಥವರನ್ನೂ ತಬ್ಬಿಬ್ಬು ಮಾಡುವಂತಿದೆ.

ಬನವಾಸಿ ಮಧುಕೇಶ್ವರ ದೇವಸ್ಥಾನ ಎಂದರೆ ಅತ್ಯಂತ ಪ್ರಾಚೀನ ಹಾಗೂ ಕದಂಬರ ಕಾಲದ ಪ್ರತಿಷ್ಠಿತ ದೇವಸ್ಥಾನಗಳಲ್ಲಿ ಒಂದು. ದೇವಸ್ಥಾನದ ನಂದಿ ಹಾಗೂ ಆನೆಯ ವಿಗ್ರಹಗಳ ಸವಕಳಿ ಜೊತೆ ಮಳೆಗಾಲದಲ್ಲಿ ಈ ದೇವಸ್ಥಾನ ಸೋರುತ್ತಿದೆ. ಅದನ್ನು ದುರಸ್ತಿ ಪಡಿಸಬೇಕೆಂದು ಶಿರಸಿಯ ವೈದ್ಯ ಡಾ. ರವಿಕಿರಣ ಪಟವರ್ಧನ್ ಧಾರವಾಡದ ಪುರಾತತ್ವ ಇಲಾಖೆಗೆ 2023ರ ಫೆಬ್ರವರಿಯಲ್ಲಿ ಪತ್ರ ಬರೆದಿದ್ದರು. ಇದಕ್ಕೆ ಉತ್ತರಿಸಿರುವ ಪುರಾತತ್ವ ಇಲಾಖೆ ಧಾರವಾಡ ವಿಭಾಗವು, 2017-18ನೇ ಸಾಲಿನಲ್ಲಿ ಪಾರ್ವತಿ ದೇವಸ್ಥಾನ ಸೋರಿಕೆ ದುರಸ್ತಿ ಮಾಡಿದ್ದೇವೆ ಎಂದು ಉತ್ತರ ನೀಡಿದೆ. ಈ ಉತ್ತರ ಸಾಮಾಜಿಕ ಜಾಲತಾಣದಲ್ಲಿ ನಗೆಪಾಟಲಿಗೆ ಈಡಾಗಿದೆ. ಅಲ್ಲದೇ, ಸಾಕಷ್ಟು ಟ್ರೋಲ್ ಆಗಿದೆ.

'ಪಾರ್ವತಿ ದೇವಸ್ಥಾನ ಸೋರಿಕೆ ನಿಲ್ಲಿಸಲು ದುರಸ್ತಿ ಮಾಡಿದರೆ ಮಧುಕೇಶ್ವರ ದೇವಸ್ಥಾನದಲ್ಲಿ ಸೋರಿಕೆ ನಿಲ್ಲುವುದು ಹೇಗೆ' ಎನ್ನುತ್ತಾರೆ ವೈದ್ಯ ಡಾ. ರವಿಕಿರಣ ಪಟವರ್ಧನ್. ಏಕೆಂದರೆ, ಮಧುಕೇಶ್ವರ ದೇವಸ್ಥಾನದ ಪಕ್ಕದಲ್ಲಿ ಪಾರ್ವತಿ ದೇವಸ್ಥಾನ ಪ್ರತ್ಯೇಕವಾಗಿಯೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.