"ತೊಗಲು ಗೊಂಬೆಯಾಟ" ಎಂಬ ಜಾನಪದ ಕಲೆಗೆ ಹೊಸ ಸ್ಪರ್ಶ ನೀಡಿ, ಹೊಸ ವೈಭವವನ್ನು ಸೃಷ್ಟಿಸಿದ ಖ್ಯಾತ ರಂಗಭೂಮಿ ಮತ್ತು ಜಾನಪದ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣನವರು ರಸ್ತೆ ಅಪಘಾತಕ್ಕೀಡಾಗಿ ಇಹಲೋಕ ತ್ಯಜಿಸಿದರು ಎಂಬ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು. ಮೃತರ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತೇನೆ. 1/2 pic.twitter.com/6EI7H0E68y
ಕಲೆ ಸಂಸ್ಕೃತಿಯನ್ನು ತಮ್ಮ ಜೀವನದ ಉಸಿರಂತೆ ಬದುಕಿ ತೊಗಲು ಗೊಂಬೆಯಾಟಕ್ಕೆ ಹೊಸ ಆಯಾಮವನ್ನು ತಂದುಕೊಟ್ಟ ರಾಷ್ಟ್ರಪ್ರಶಸ್ತಿ ವಿಜೇತ ನಾಡೋಜ ಶ್ರೀ ಬೆಳಗಲ್ಲು ವೀರಣ್ಣ ಅವರು ನಮ್ಮನ್ನಗಲಿದ್ದಾರೆ. ಇತ್ತೀಚೆಗಷ್ಟೆ ಅವರನ್ನು ಭೇಟಿಯಾಗಿದ್ದೆ,ಅವರನ್ನು ಕಳೆದುಕೊಂಡ ಅವರ ಕುಟುಂಬದವರಿಗೆ, ಬಂಧುಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ಆ ದೇವರು ಕರುಣಿಸಲಿ. pic.twitter.com/xw6GIwi0eF
ರಾಜ್ಯದ ಹಿರಿಯ ರಂಗ ಕಲಾವಿದರಲ್ಲಿ ಒಬ್ಬರು, "ತೊಗಲು ಬೊಂಬೆ ಆಟ" ಕಲೆಯ ಮೂಲಕ ಜನಪ್ರಿಯರಾದ ನಾಡೋಜ ಬೆಳಗಲ್ಲು ವೀರಣ್ಣ ಅವರು ರಸ್ತೆ ಅಪಘಾತದಲ್ಲಿ ನಿಧನರಾದ ಸುದ್ಧಿ ಕೇಳಿ ಮನಸ್ಸಿಗೆ ಆಘಾತವಾಯಿತು. pic.twitter.com/oU71B3TDDD
ರಾಜ್ಯದ ಹಿರಿಯ ರಂಗ ಕಲಾವಿದರಲ್ಲಿ ಒಬ್ಬರು,"ತೊಗಲು ಬೊಂಬೆ ಆಟ" ಕಲೆಯ ಮೂಲಕ ಜನಪ್ರಿಯರಾದ ನಾಡೋಜ ಬೆಳಗಲ್ಲು ವೀರಣ್ಣ ಅವರು ರಸ್ತೆ ಅಪಘಾತದಲ್ಲಿ ನಿಧನರಾದ ಸುದ್ಧಿ ಕೇಳಿ ಮನಸ್ಸಿಗೆ ನೋವಾಯಿತು. ಮೃತರ ಕುಟುಂಬಸ್ಥರಿಗೆ ನೋವು ತಡೆದುಕೊಳ್ಳುವ ಶಕ್ತಿ ನೀಡಲಿ ಹಾಗೂ ಹಿರಿಯ ದಿವ್ಯಾತ್ಮಕ್ಕೆ ಸದ್ಗತಿ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. pic.twitter.com/meajsTIafC