ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಸುಸ್ಥಿರ ನಗರಗಳ ಸವಾಲು’ ಸ್ಪರ್ಧೆಯಲ್ಲಿ ಬೆಂಗಳೂರು

ಜಾಗತಿಕವಾಗಿ ಆಯ್ಕೆಯಾದ 10 ನಗರಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನ
Published : 11 ನವೆಂಬರ್ 2023, 0:00 IST
Last Updated : 11 ನವೆಂಬರ್ 2023, 0:00 IST
ಫಾಲೋ ಮಾಡಿ
Comments
ಬೆಂಗಳೂರಿಗೆ ತಜ್ಞರ ತಂಡ: ‘ಸುಸ್ಥಿರ ನಗರಗಳ ಸವಾಲು’ ಸ್ಪರ್ಧೆಯಲ್ಲಿ ಸುಗಮ ಸಂಚಾರಕ್ಕೆ ಬೆಂಗಳೂರು ಅಳವಡಿಸಿಕೊಳ್ಳುವ ಯೋಜನೆಗಳ ಮಾಹಿತಿ ವಿಶ್ಲೇಷಣೆ ಹಾಗೂ ಸಲಹೆಗಳನ್ನು ನೀಡಲು ಟೊಯೊಟಾ ಮೊಬಿಲಿಟಿ ಫೌಂಡೇಷ‌ನ್‌ ತಜ್ಞರ ತಂಡ ಬೆಂಗಳೂರಿಗೆ ಬರಲಿದೆ’ ಎಂದು ಬಿಬಿಎಂಪಿ ಪ್ರಧಾನ ಎಂಜಿನಿಯರ್‌ ಬಿ.ಎಸ್. ಪ್ರಹ್ಲಾದ್‌ ಹೇಳಿದರು ‘ನ.13ರಿಂದ 15ರವರೆಗೆ ಅಮೆರಿಕದ ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ನಡೆಯಲಿರುವ ಕಾರ್ಯಾಗಾರದಲ್ಲಿ ಯೋಜನೆಯ ವಿನ್ಯಾಸ ಸಮಸ್ಯೆ ನಿರ್ವಹಣೆ ಬಗ್ಗೆ ತಜ್ಞರೊಂದಿಗೆ ನಗರದ ಪ್ರತಿನಿಧಿಗಳು ಭಾಗವಹಿಸಬೇಕಿತ್ತು. ದೀಪಾವಳಿ ಸಂದರ್ಭವಾಗಿದ್ದರಿಂದ ಅಲ್ಲಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಂಸ್ಥೆಯ ತಂಡ ಬೆಂಗಳೂರಿಗೆ ನ.21ರಂದು ಬರುತ್ತಿದ್ದು ನಮ್ಮ ನಗರದೊಂದಿಗೆ ವಾರಾಣಸಿ ನಗರದ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಲಿದೆ. ಅಂತಿಮವಾಗಿ ಮೂರು ನಗರಗಳಲ್ಲಿ ಬೆಂಗಳೂರು ಆಯ್ಕೆಯಾದರೆ ಸಂಚಾರ ವ್ಯವಸ್ಥೆಯ ಆಧುನೀಕರಣಕ್ಕೆ ಟೊಯೊಟಾ ಮೊಬಿಲಿಟಿ ಫೌಂಡೇಷನ್ ಮುಂದಿನ 5 ವರ್ಷಗಳವರೆಗೆ ಅನುದಾನ ನೀಡಲಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT