ಮೈಸೂರು: ‘ಐದಾರು ವಾರಗಳಿಂದ ವೀಳ್ಯದೆಲೆ ಕೊಯ್ದಿಲ್ಲ. ಈಗ ಮಳೆ–ಗಾಳಿ ಆರಂಭವಾಗಿದೆ. ಎಲೆ ಕೊಯ್ಯದಿದ್ದರೆ ಹಂಬು ಮುರಿದು ಬೀಳಲಿವೆ. ಒಮ್ಮೆ ನೆಲಕ್ಕೆ ಬಿದ್ದರೆ, ನಾವು ಚೇತರಿಸಿಕೊಳ್ಳಲು ಐದಾರು ವರ್ಷಗಳೇ ಬೇಕು...’

ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ಉದ್ಭೂರು, ಮಾರ್ಬಳ್ಳಿ, ಟಿ.ಕಾಟೂರು, ಗುಮಚನಹಳ್ಳಿ, ಕೆಲ್ಲಹಳ್ಳಿ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿರುವ ‘ಮೈಸೂರು ವೀಳ್ಯದೆಲೆ’ ಬೆಳೆಗಾರರ ಸಂಕಟವಿದು.

‘ಲಾಕ್‌ಡೌನ್ ಕಾರಣ ಉದ್ಭೂರಿನ ಏಕೈಕ ಮಾರುಕಟ್ಟೆ ಸ್ಥಗಿತವಾಗಿದೆ. ಹೊರಗಿನ ವ್ಯಾಪಾರಿಗಳು ಬರುತ್ತಿಲ್ಲ. ತುರ್ತು ಮಾರುಕಟ್ಟೆ ಸಿಗದಿದ್ದರೆ ನಮ್ಮ ಬದುಕು ಮೂರಾಬಟ್ಟೆಯಾಗುತ್ತದೆ’ ಎಂಬುದು ಬೆಳೆಗಾರರ ಆತಂಕ.

‘ನಾವು ಸಣ್ಣ ಹಿಡುವಳಿದಾರರು. ವೀಳ್ಯದೆಲೆಯೇ ನಮಗೆ ಜೀವನಾಧಾರ. ತಿಂಗಳಿಂದಲೂ ಎಲೆಯನ್ನು ಕೊಯ್ದಿಲ್ಲ. ನಯಾಪೈಸೆಯೂ ಸಿಕ್ಕಿಲ್ಲ. ಕೂಲಿಯನ್ನು ಕೊಡಲಾಗದೇ ಮನೆ ಮಂದಿಯೇ ಎಲೆ ಕೊಯ್ಯಲು ಮುಂದಾದರೂ, ಕೇಳೋರಿಲ್ಲ. ಯಾರ ಮುಂದೆ ಸಂಕಟ ಹೇಳುವುದು?’ ಎಂದು ಬೆಳೆಗಾರರಾದ ರೇವಣ್ಣ, ಚೌಡಯ್ಯ, ಕೆಂಪಚೌಡ, ಹೇಮಾವತಿ, ಕೆಂಪದೇವಮ್ಮ, ಸಿಳ್ಳಪ್ಪ, ಪುರುಷೋತ್ತಮ ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

ಸಂಕಷ್ಟ ಹೇಳಿಕೊಂಡರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಜಿಲ್ಲಾಧಿಕಾರಿ ಬಳಿ ಹೇಳಿಕೊಳ್ಳಲು ಅವಕಾಶವೂ ಸಿಗುತ್ತಿಲ್ಲ
-ಮಹೇಶ್, ಎಲೆ ಬೆಳೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.