ನವದೆಹಲಿ: ಡಿಸೆಂಬರ್ 5ರಂದು ಉಪಚುನಾವಣೆ ನಡೆಯಲಿರುವ ರಾಜ್ಯ ವಿಧಾನಸಭೆಯ 15 ಕ್ಷೇತ್ರಗಳ ಪೈಕಿ, 8 ಕ್ಷೇತ್ರಗಳ ಅಭ್ಯರ್ಥಿಗಳನ್ನು ಕಾಂಗ್ರೆಸ್ ಪಕ್ಷ ಗುರುವಾರ ಘೋಷಿಸಿದೆ. ವಿಧಾನ ಪರಿಷತ್ನ 2 ಕ್ಷೇತ್ರಗಳ ಅಭ್ಯರ್ಥಿಗಳನ್ನೂ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅಂತಿಮಗೊಳಿಸಿದ್ದಾರೆ.

ರಾಣೆಬೆನ್ನೂರು, ಹಿರೇಕೆರೂರು ಮತ್ತು ಹುಣಸೂರು ಕ್ಷೇತ್ರಗಳಲ್ಲಿ ಮಾಜಿ ಶಾಸಕರಿಗೆ ಅವಕಾಶ ನೀಡಿದ್ದರೆ, ಒಕ್ಕಲಿಗರ ಪ್ರಾಬಲ್ಯ ಇರುವ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಿಂದ ಪಾಲಿಕೆ ಸದಸ್ಯ, ಕುರುಬ ಸಮುದಾಯದ ಎಂ. ಶಿವರಾಜ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಉಪಚುನಾವಣೆ ನಡೆಯಲಿರುವ 15 ಕ್ಷೇತ್ರಗಳ ಪೈಕಿ ಗೋಕಾಕ, ಕಾಗವಾಡ, ಅಥಣಿ, ಯಶವಂತ
ಪುರ, ಶಿವಾಜಿನಗರ, ಕೆ.ಆರ್.ಪೇಟೆ ಮತ್ತು ವಿಜಯನಗರ (ಹೊಸಪೇಟೆ) ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿಲ್ಲ.

ಬಿಜೆಪಿ ಅಭ್ಯರ್ಥಿಗಳಿಗೆ ಪ್ರತಿಸ್ಪರ್ಧೆ ಒಡ್ಡುವ ಸಮರ್ಥರ ಹುಡುಕಾಟದಲ್ಲಿರುವ ಪಕ್ಷ, ಈ 7 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆಗಾಗಿ ಕೊನೆಯವರೆಗೆ ಕಾದು ನೋಡಲು ನಿರ್ಧರಿಸಿದೆ. ಬಿಜೆಪಿ ಬಂಡಾಯ ಅಭ್ಯರ್ಥಿಗಳನ್ನು ಸೆಳೆಯುವ ನಿಟ್ಟಿನಲ್ಲಿ ಪ್ರಯತ್ನ ನಡೆಸುವ ಸಾಧ್ಯತೆ ಇದೆ. ಈಗ ಅಭ್ಯರ್ಥಿ ಘೋಷಿಸಿರುವ ಕ್ಷೇತ್ರಗಳಲ್ಲಿ ಬಿಜೆಪಿಯ ಸಂಭವನೀಯ ಬಂಡಾಯ ಅಭ್ಯರ್ಥಿಗಳನ್ನು ಸೆಳೆದು ಕಣಕ್ಕಿಳಿಸುವ ಪ್ರಯತ್ನ ಮಾಡದೆ ಪಕ್ಷದಲ್ಲಿದ್ದವರಿಗೇ ಆದ್ಯತೆ ನೀಡಲಾಗಿದೆ.

ಅನರ್ಹ ಶಾಸಕರ 17 ಕ್ಷೇತ್ರಗಳ ಪೈಕಿ ರಾಜರಾಜೇಶ್ವರಿ ನಗರ ಮತ್ತು ಮಸ್ಕಿ ಕ್ಷೇತ್ರಗಳ ಉಪಚುನಾವಣೆ ಘೋಷಣೆ
ಯಾಗಿಲ್ಲ. ಈ ಕ್ಷೇತ್ರಗಳಿಗೆ ಸಂಬಂಧಿಸಿದ ಚುನಾವಣೆ ತರಕಾರು ಅರ್ಜಿ ವಿಚಾರಣೆ ಹೈಕೋರ್ಟ್ನಲ್ಲಿ ಬಾಕಿ ಇದೆ.

ಉಪಚುನಾವಣೆ ಅಭ್ಯರ್ಥಿಗಳು

ಕ್ಷೇತ್ರ;ಅಭ್ಯರ್ಥಿ

ಯಲ್ಲಾಪುರ;ಭೀಮಣ್ಣ ನಾಯ್ಕ
ಹಿರೇಕೆರೂರು;ಬಿ.ಎಚ್.ಬನ್ನಿಕೋಡ
ರಾಣೆಬೆನ್ನೂರು;ಕೆ.ಬಿ.ಕೋಳಿವಾಡ
ಚಿಕ್ಕಬಳ್ಳಾಪುರ;ಎಂ.ಅಂಜನಪ್ಪ
ಕೆ.ಆರ್.ಪುರ;ಎಂ.ನಾರಾಯಣಸ್ವಾಮಿ
ಮಹಾಲಕ್ಷ್ಮಿ ಲೇಔಟ್;ಎಂ.ಶಿವರಾಜ್
ಹೊಸಕೋಟೆ;ಪದ್ಮಾವತಿ ಸುರೇಶ
ಹುಣಸೂರು;ಎಚ್.ಪಿ.ಮಂಜುನಾಥ್

ವಿಧಾನ ಪರಿಷತ್ ಚುನಾವಣೆ

ಕ್ಷೇತ್ರ;ಅಭ್ಯರ್ಥಿ

ಪಶ್ಚಿಮ ಪದವೀಧರ ಕ್ಷೇತ್ರ;ಡಾ.ಆರ್.ಎಂ.ಕುಬೇರಪ್ಪ

ಈಶಾನ್ಯ ಶಿಕ್ಷಕರ ಕ್ಷೇತ್ರ;ಶರಣಪ್ಪ ಮಟ್ಟೂರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.