ಬೆಂಗಳೂರು: ‘ರಾಜ್ಯದ ಜನರಿಗೆ ಶೇ 40 ಲಂಚದ ಕುರಿತು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಈಗ ಶೇ 100 ರಷ್ಟು ಭ್ರಷ್ಟರಾಗಿದ್ದಾರೆ’ ಎಂದು ವಿರೋಧಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ.

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಅಂಬಿಕಾಪತಿ ಮತ್ತು ಕಾಂಗ್ರೆಸ್ ಟೂಲ್ಕಿಟ್ ಚುನಾವಣೆ ಮೊದಲು ಸುಳ್ಳಿನ ಗೋಪುರ ಕಟ್ಟಿದ್ದರು. ಅದು ಈಗ ಕುಸಿದು ಹೋಗಿದೆ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾಂಗ್ರೆಸ್ ಸರ್ಕಾರದ 18 ತಿಂಗಳ ಅವಧಿಯಲ್ಲಿ ದಿನ ನಿತ್ಯ ಒಬ್ಬರಲ್ಲ ಒಬ್ಬ ಮಂತ್ರಿ ಲೂಟಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ತಮ್ಮ 40 ವರ್ಷದ ಜೀವನವು ತೆರೆದ ಪುಸ್ತಕ ಎಂದಿದ್ದರು. ಇವತ್ತು ಅವರ ತೆರೆದ ಪುಸ್ತಕದ ಪುಟಗಳನ್ನು ತಿರುವಿದರೆ ಲೂಟಿಯ ಕಪ್ಪು ಚುಕ್ಕೆಗಳೇ ಎದ್ದು ಕಾಣುತ್ತಿವೆ ಎಂದು ಅಶೋಕ ಹೇಳಿದರು.

ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಬಿಬಿಎಂಪಿಗೆ ಸಂಬಂಧಿಸಿದಂತೆ ಮಾಡಿದ್ದ ಶೇ 40 ಲಂಚದ ಆರೋಪ ಶುದ್ಧ ಸುಳ್ಳು ಎಂದು ಲೋಕಾಯುಕ್ತ ತನಿಖಾ ಅಧಿಕಾರಿಗಳು ಸಲ್ಲಿಸಿರುವ ವರದಿಯಲ್ಲಿ ಬಹಿರಂಗವಾಗಿದೆ. ಶೇ 40 ಲಂಚದ ಆರೋಪ ಕಾಂಗ್ರೆಸ್ನ ಟೂಲ್ಕಿಟ್ ಎಂಬುದು ಈಗ ಸಾಕ್ಷಿ ಸಮೇತ ಋಜುವಾತಾಗಿದೆ. ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡಿದ್ದ ಗುತ್ತಿಗೆದಾರ ಅಂಬಿಕಾಪತಿ ಗುತ್ತಿಗೆ ಕೆಲಸ ಮಾಡುವುದನ್ನು ಬಿಟ್ಟು ಆರು ವರ್ಷಗಳೇ ಕಳೆದಿವೆ. ಇದರಿಂದ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರು ಕಟ್ಟಿದ ಸುಳ್ಳಿನ ಮಹಲು ಸಂಪೂರ್ಣ ಕುಸಿದು ಬಿದ್ದಿದೆ ಎಂದರು.

ವಕ್ಫ್ ಹೆಸರಿನಲ್ಲಿ ರೈತರ ಜಮೀನಿನ ಮೇಲೆ, ಸರ್ಕಾರಿ ಆಸ್ತಿ– ಪಾಸ್ತಿಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಮಿತಿ ಮೀರುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ಉಳುಮೆ ಮಾಡಲು ಬಂದಿದ್ದ ರೈತರ ಮೇಲೆ ಮತಾಂಧರು ಹಲ್ಲೆ ಮಾಡಿ, ಬೇಲಿ ಕಿತ್ತು ಹಾಕಿದ್ದಾರೆ. ಅಲ್ಲಿಗೆ ನಾನು ಮಂಗಳವಾರ ಭೇಟಿ ನೀಡುತ್ತಿದ್ದೇನೆ. ಸಿದ್ದರಾಮಯ್ಯ ಈಗ ಅಹಿಂದ ಚಾಂಪಿಯನ್ ಅಲ್ಲ, ಮುಸ್ಲಿಮರ ಚಾಂಪಿಯನ್. ವಕ್ಫ್ ಹೆಸರಿನಲ್ಲಿ ಲೂಟಿ ಆಗುತ್ತಿರುವುದು ಬಹುತೇಕ ದಲಿತರು, ಹಿಂದುಳಿದ ಸಮುದಾಯಗಳಿಗೆ ಸೇರಿದ ಭೂಮಿ ಎಂದು ಹೇಳಿದರು.

ಕಾರಜೋಳ ಅಸಮಾಧಾನ:

ವಕ್ಫ್ ವಿರುದ್ಧದ ಹೋರಾಟದಲ್ಲಿ ತಮ್ಮ ಹೆಸರನ್ನು ಶನಿವಾರ ಸೇರಿಸಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಂಸದ ಗೋವಿಂದ ಕಾರಜೋಳ, ಪಟ್ಟಿ ಮಾಡುವವರಿಗೆ ಅನುಭವದ ಕೊರತೆ ಇದೆ ಎಂದರು.

ರಾಜಕೀಯಕ್ಕೆ ಅನುಭವ ಅತಿ ಮುಖ್ಯ. ಆಫೀಸ್ನಲ್ಲಿ ಕುಳಿತು ಪಟ್ಟಿ ಮಾಡುವವರಿಗೆ ಅನುಭವ ಇರಲ್ಲ. ರಾಜಕೀಯಕ್ಕೆ ಅನುಭವ ಇದ್ದವರು ಬೇಕು ಎಂದು ಹೇಳಿದರು.

‘ಅಬಕಾರಿ ಭ್ರಷ್ಟಾಚಾರ ತನಿಖೆಗೆ ಎಸ್ಐಟಿ ರಚಿಸಿ’

ಅಬಕಾರಿ ಇಲಾಖೆಯಲ್ಲಿನ ₹700 ಕೋಟಿ ಭ್ರಷ್ಟಾಚಾರ ಆರೋಪಕ್ಕೆ ಸಾಕ್ಷಿ ಬೇಕಾದರೆ ಎಸ್ಐಟಿ ರಚನೆ ಮಾಡಿ ತನಿಖೆ ನಡೆಸಲಿ ಎಂದು ಅಶೋಕ ಒತ್ತಾಯಿಸಿದರು. ಪ್ರಧಾನಿಯವರು ಸಾಕ್ಷಿ ನೀಡಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಕರ್ನಾಟಕ ಮದ್ಯ ಮಾರಾಟಗಾರರ ಸಂಘ ಈ ಆರೋಪ ಮಾಡಿದೆ. ಮದ್ಯ ಮಾರಾಟಗಾರರ ಸಂಘ ಬರೆದಿರುವ ಪತ್ರವನ್ನು ಒಮ್ಮೆ ಮುಖ್ಯಮಂತ್ರಿಯವರು ತರಿಸಿಕೊಂಡು ಓದಬೇಕು. ಮದ್ಯ ಮಾರಾಟಗಾರರು ಮಾಡುತ್ತಿರುವ ಆರೋಪ ಸುಳ್ಳಾದರೆ ಅವರ ಲೈಸೆನ್ಸ್ ರದ್ದು ಮಾಡಿ ಅಂಗಡಿಗಳಿಗೆ ಬೀಗ ಹಾಕಿಸಿ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.