ಬೆಂಗಳೂರು: ಕರ್ನಾಟಕದ ವೈದ್ಯಕೀಯ ಎಂಜಿನಿಯರಿಂಗ್ ಮತ್ತು ದಂತ ಕಾಲೇಜುಗಳ ಒಕ್ಕೂಟದ (ಕಾಮೆಡ್–ಕೆ) ನಡೆಸಿದ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅರ್ಹತಾ ಪಟ್ಟಿಯಲ್ಲಿ ಸ್ಥಾನ ಪಡೆದ ಒಬ್ಬ ವಿದ್ಯಾರ್ಥಿಯೂ 33 ಕಾಲೇಜುಗಳಿಗೆ ಪ್ರವೇಶ ಪಡೆದಿಲ್ಲ.

ಹಿಂದಿನ ಶೈಕ್ಷಣಿಕ ಸಾಲಿನಲ್ಲಿ ಈ ರೀತಿ ಶೂನ್ಯ ಪ್ರವೇಶ ಹೊಂದಿದ ಕಾಲೇಜುಗಳ ಸಂಖ್ಯೆ 29 ಇತ್ತು. ಈ ಬಾರಿ ಆ ಪಟ್ಟಿಗೆ ಮತ್ತೆ ನಾಲ್ಕು ಕಾಲೇಜುಗಳು ಸೇರ್ಪಡೆಯಾಗಿವೆ. ಶೇ 25ಕ್ಕಿಂತ ಕಡಿಮೆ ಪ್ರವೇಶ ಪಡೆಯುತ್ತಿರುವ ಕಾಲೇಜುಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. 2023–24ನೇ ಸಾಲಿನಲ್ಲಿ 20 ಕಾಲೇಜುಗಳು ಮಾತ್ರ ಶೇ 80ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಸಾಧ್ಯವಾಗಿತ್ತು.

‘ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಇಟಿ ಸೀಟುಗಳ ಹಂಚಿಕೆ ವಿಳಂಬ ಮಾಡುತ್ತಿರುವ ಕಾರಣ ಕಾಮೆಡ್–ಕೆ ಮೇಲೂ ಪರಿಣಾಮ ಬೀರುತ್ತಿದೆ. ಇದರಿಂದ ಹೊರ ರಾಜ್ಯದ ವಿದ್ಯಾರ್ಥಿಗಳು ಕರ್ನಾಟಕದ ಕಾಲೇಜುಗಳಲ್ಲಿ ಪ್ರವೇಶ ಪಡೆಯುತ್ತಿಲ್ಲ’ ಎಂದು ಖಾಸಗಿ ಕಾಲೇಜುಗಳು ದೂರಿವೆ.

ಕೆಇಎ ನೀಡುವ ಪ್ರವೇಶದಲ್ಲಿ ಯಾವುದೇ ಕಾಲೇಜಿನಲ್ಲಿ ಶೂನ್ಯ ಪ್ರವೇಶ ಇಲ್ಲದಿದ್ದರೂ, ಸಿವಿಲ್ ಮತ್ತು ಮೆಕ್ಯಾನಿಕಲ್ ಸೇರಿದಂತೆ ಕೆಲವು ಕೋರ್ಸ್ಗಳಿಗೆ ಬೇಡಿಕೆ ಕುಸಿದಿದೆ. ಈ ವರ್ಷ ಸರ್ಕಾರಿ ಕೋಟಾದಲ್ಲಿ ಲಭ್ಯವಿರುವ 79,907 ಸೀಟುಗಳಲ್ಲಿ 13,653 ಸೀಟುಗಳು ಖಾಲಿ ಉಳಿದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.