ಬೆಂಗಳೂರು: ರಾಜ್ಯದಲ್ಲಿ ಸೋಮವಾರ 8,244 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕೋವಿಡ್ಗೆ ಚಿಕಿತ್ಸೆ ಪಡೆಯುತ್ತಿದವರ ಪೈಕಿ 8,865 ಮಂದಿ ಗುಣಮುಖರಾಗಿದ್ದಾರೆ.

ಹತ್ತುಸಾವಿರದ ಸಮೀಪಕ್ಕೆ ತೆರಳಿದ್ದ ಸೋಂಕು ಪ್ರಕರಣಗಳು, ಸೋಂಕು ಪರೀಕ್ಷೆ ಕಡಿಮೆಯಾದ ಪರಿಣಾಮ ಮತ್ತೆ 8 ಸಾವಿರಕ್ಕೆ ಇಳಿದಿವೆ. ಭಾನುವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು 22 ಸಾವಿರದಷ್ಟು ಕಡಿಮೆಯಾಗಿದ್ದು, ಹೊಸ ಸೋಂಕು ಪ್ರಕರಣಗಳು ಕೂಡಾ 1,650ರಷ್ಟು ಕಡಿಮೆಯಾಗಿವೆ.

ಗುಣಮುಖರ ಸಂಖ್ಯೆ 463, ಸೋಂಕಿರ ಸಾವು 15 ಹೆಚ್ಚಳವಾಗಿದೆ. ಸೋಮವಾರ 45,916 ಸೋಂಕು ಪರೀಕ್ಷೆಗಳು ನಡೆಸಿದ್ದು, 8,244 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಪಾಸಿಟಿವಿಟಿ ದರ ಶೇ.18 ಇದೆ. ಅಂದರೆ ಸೋಂಕು ಪರೀಕ್ಷೆಗೊಳಪಟ್ಟ 100 ಜನರ ಪೈಕಿ 18 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

199 ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಸೆ.14ರಂದು ಸಾವಿಗೀಡಾಗುವ ಮೂಲಕ, ಕೋವಿಡ್ನಿಂದ ಮೃತಪಟ್ಟವರ ಸಂಖ್ಯೆ 7,384ಕ್ಕೆ ಏರಿದೆ. 800 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿಹೊಸದಾಗಿ 2,966 ಪ್ರಕರಣಗಳು ವರದಿಯಾಗಿದ್ದು 37 ಜನ ಸತ್ತಿದ್ದಾರೆ. ಮೈಸೂರು 12,ಧಾರವಾಡ 9,ಬಳ್ಳಾರಿ 7, ತುಮಕೂರು 6, ದಕ್ಷಿಣ ಕನ್ನಡದಲ್ಲಿ 5 ಜನರು ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.