ಬೆಂಗಳೂರು: ಒಂದು ವಾರದ ಅವಧಿಯಲ್ಲಿ ಕರ್ನಾಟಕದಲ್ಲಿ ಕೋವಿಡ್-19 ಪ್ರಕರಣಗಳು ಶೇಕಡಾ 130 ರಷ್ಟು ಏರಿಕೆಯಾಗಿವೆ ಎಂಬುದು ಸರ್ಕಾರದ ಅಂಕಿಅಂಶಗಳಿಂದ ದೃಢವಾಗಿದೆ.

ಎರಡು ವಾರಗಳ ಹಿಂದೆ ರಾಜ್ಯದಲ್ಲಿ 2,160 ಪ್ರಕರಣಗಳು ದಾಖಲಾಗಿದ್ದವು. ಆದರೆ, ಡಿಸೆಂಬರ್ 27 ಮತ್ತು ಜನವರಿ 2 ರ ನಡುವಿನ ಒಂದು ವಾರದ ಅವಧಿಯಲ್ಲಿ 4,970 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಶೇ 76ರಷ್ಟು ಬೆಂಗಳೂರು ನಗರದಲ್ಲೇ ಪತ್ತೆಯಾಗಿವೆ.

ಬೆಂಗಳೂರಿನಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಶೇ 166ರಷ್ಟು ಏರಿದೆ.

ಭಾನುವಾರ ಪತ್ತೆಯಾದ 1,187 ಹೊಸ ಪ್ರಕರಣಗಳೊಂದಿಗೆ, ರಾಜ್ಯದ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 10,292 ಕ್ಕೆ ಏರಿವೆ.

ಕಳೆದ ವಾರ ರಾಜ್ಯವು ಪರೀಕ್ಷೆ ಪ್ರಮಾಣವನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸಿತ್ತು. ಎರಡು ವಾರಗಳ ಹಿಂದೆ 6.74 ಲಕ್ಷ ಪರೀಕ್ಷೆಗಳು ನಡೆದಿದ್ದವು, ಕಳೆದ ವಾರ ಆ ಸಂಖ್ಯೆ 6.99 ಲಕ್ಷಗಳಿಗಷ್ಟೆ ಏರಿಕೆಯಾಗಿತ್ತು. ಆದರೂ, ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ.

ಸೋಮವಾರದಿಂದ ರಾಜ್ಯದಲ್ಲಿ ಕೋವಿಡ್ ಪತ್ತೆ ಪರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸುವುದಾಗಿಯೂ, ಮಾಸ್ಕ್ ಧರಿಸುವಿಕೆ ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ಮಾಡುವುದಾಗಿಯೂ ಸರ್ಕಾರದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.