ಬೆಂಗಳೂರು: ಬೆಂಗಳೂರು: ಕೋವಿಡ್ ಅವಧಿಯಲ್ಲಿ ರಾಜ್ಯದ ವೈದ್ಯಕೀಯ ಶಿಕ್ಷಣ ನಿರ್ದೇಶ ನಾಲಯವು ಸ್ಥಳೀಯವಾಗಿ ಒಟ್ಟು ₹203.66 ಕೋಟಿ ಮೌಲ್ಯದಷ್ಟು ಪಿಪಿಇ ಕಿಟ್ಗಳನ್ನು ಖರೀದಿಸಿದ್ದು, ಅಷ್ಟೂ ವಹಿವಾಟು ಸಂಪೂರ್ಣವಾಗಿ ಅಕ್ರಮ. ಇದರಲ್ಲಿ ಭಾಗಿಯಾದ ಅಂದಿನ ಸರ್ಕಾರದ ಮುಖ್ಯಸ್ಥರು ಹಾಗೂ ಅಧಿಕಾರಿಗಳ ವಿರುದ್ಧ ಅಪರಾಧ ಪ್ರಕರಣ ದಾಖಲಿಸಬೇಕು ಎಂದು ನ್ಯಾಯಮೂರ್ತಿ ಜಾನ್ ಮೈಕಲ್ ಡಿಕುನ್ಹ ಆಯೋಗವು ಶಿಫಾರಸು ಮಾಡಿದೆ.

ಆಯೋಗವು ಸಲ್ಲಿಸಿರುವ ಮಧ್ಯಂತರ ವರದಿಯ ಮೂರನೇ ಭಾಗದಲ್ಲಿ ಈ ಮಾಹಿತಿಗಳು ಇವೆ.

ಪಿಪಿಇ ಕಿಟ್ ಖರೀದಿಯಲ್ಲಿನ ಅಕ್ರಮವನ್ನು 21 ಪುಟಗಳಲ್ಲಿ ವಿವರಿಸಿದೆ. 2020ರ ಆಗಸ್ಟ್ನಿಂದ 2021ರ ಮೇ ನಡುವೆ ಟೆಂಡರ್ ಪ್ರಕ್ರಿಯೆ, ಪೂರೈಕೆ ಆದೇಶ, ಪೂರೈಕೆ ಮತ್ತು ಬಿಲ್ ಪಾವತಿಗಳು ನಡೆದಿವೆ. ಕೋವಿಡ್ ಕಾರ್ಯಪಡೆ ಸಮಿತಿ ಈ ವಹಿವಾಟುಗಳಿಗೆ ಸಂಬಂಧಿಸಿದ ಅನುಮೋದನೆಗಳಿಗೆ ಸಹಿ ಮಾಡಿದೆ. ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಪ ಮುಖ್ಯಮಂತ್ರಿಯಾಗಿದ್ದ ಸಿ.ಎನ್. ಅಶ್ವತ್ಥ ನಾರಾಯಣ, ಆರೋಗ್ಯ ಸಚಿವರಾಗಿದ್ದ ಬಿ.ಶ್ರೀರಾಮುಲು ಈ ಕಾರ್ಯಪಡೆ ಸಮಿತಿ ಮತ್ತು ಸಭೆಗಳಲ್ಲಿ ಇದ್ದರು. ಸ್ಥಳೀಯವಾಗಿ ಪಿಪಿಇ ಕಿಟ್ ಮತ್ತು ಎನ್95 ಮಾಸ್ಕ್ ಖರೀದಿಯ ಎಲ್ಲ ವಹಿವಾಟುಗಳಲ್ಲಿ ಅಕ್ರಮ ನಡೆದಿದೆ. ಖರೀದಿಯಲ್ಲಿ ಭಾಗಿಯಾದ ನಿರ್ದೇಶನಾಲಯದ ಅಧಿಕಾರಿಗಳು ಹಣ ಮಾಡಿಕೊಳ್ಳುವ ಉದ್ದೇಶದಿಂದಲೇ ಸಾಲು–ಸಾಲು ಅಕ್ರಮ ಎಸಗಿದ್ದಾರೆ.

ಈ ಅಕ್ರಮದ ವ್ಯಾಪ್ತಿಯನ್ನು ಪತ್ತೆಮಾಡಲು ಕೂಲಂಕಷ ತನಿಖೆಯ ಅಗತ್ಯವಿದೆ ಎಂದು ಆಯೋಗ ಹೇಳಿದೆ. ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಬೇಕು. ಖರೀದಿಗೆ ಅನುಮೋದನೆ ನೀಡಿದವ ರನ್ನು ತನಿಖೆಗೆ ಒಳಪಡಿಸಬೇಕು. ತನಿಖೆಯನ್ನು ಲೋಕಾಯುಕ್ತ ಅಥವಾ ರಾಜ್ಯ ಅಥವಾ ರಾಷ್ಟ್ರಮಟ್ಟದ ತನಿಖಾ ಸಂಸ್ಥೆಗೆ ವಹಿಸಬೇಕು ಎಂದು ಆಯೋಗ ಶಿಫಾರಸು ಮಾಡಿದೆ.

ಬೇಡಿಕೆ ಇಲ್ಲದೇ ಇದ್ದರೂ ಆಸ್ಪತ್ರೆಗಳಿಗೆ ಪಿಪಿಇ ಕಿಟ್ಗಳ ಪೂರೈಕೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ (45,000 ಕಿಟ್ಗಳು) ಮತ್ತು ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (30,994 ಕಿಟ್ಗಳು) ತಮ್ಮಲ್ಲಿ ಒಟ್ಟು 75,394 ಕಿಟ್ಗಳು ವ್ಯರ್ಥವಾಗಿ ಬಿದ್ದಿವೆ ಎಂದು 2022ರಲ್ಲಿ ನಿರ್ದೇಶನಾಲಯಕ್ಕೆ ಪತ್ರ ಬರೆದಿವೆ

ಬೇಡಿಕೆ ಇಲ್ಲದೇ ಇದ್ದರೂ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವು ಕೆಎಸ್ಎಂಎಸ್ಸಿಎಲ್ಗೆ 2.67 ಲಕ್ಷ ಕಿಟ್ಗಳನ್ನು ಪೂರೈಸಿದೆ

ಎಲ್ಲ ವಹಿವಾಟುಗಳ ಬಗ್ಗೆ ವಿವರಣೆ ನೀಡುವಂತೆ ನಿರ್ದೇಶನಾಲಯದ ಹಿಂದಿನ ನಿರ್ದೇಶಕರು, ನಿರ್ದೇಶನಾಲಯಕ್ಕೆ ಸೂಚಿಸಿದ್ದರೂ ಪ್ರತಿಕ್ರಿಯೆ ಬಂದಿಲ್ಲ

ನಿಯಮ ಬಾಹಿರ ಖರೀದಿಗೆ ₹81.68 ಕೋಟಿ ಪಾವತಿ

2020ರ ಡಿಸೆಂಬರ್ನಿಂದ 2021ರ ಮಾರ್ಚ್ ನಡುವೆ ಒಟ್ಟು 6.22 ಲಕ್ಷ ಪಿಪಿಇ ಕಿಟ್ಗಳ ಪೂರೈಕೆಗೆ ಟೆಂಡರ್ ಕರೆಯದೆಯೇ, ಲಾಜ್ ಎಕ್ಸ್ಪೋರ್ಟ್ಸ್ಗೇ ಆದೇಶಗಳನ್ನು ನೀಡಲಾಗಿದೆ. ಈ ಹಿಂದಿನ ದರದಲ್ಲೇ (ತಲಾ ಒಂದಕ್ಕೆ ₹1,312) ಪಿಪಿಇ ಕಿಟ್ ಪೂರೈಸುವಂತೆ ಆದೇಶಿಸಲಾಗಿದೆ.

‘ಜಿಇಎಂ ಪೋರ್ಟಲ್ನಲ್ಲಿ ಟೆಂಡರ್ ನಡೆಸಿದಾಗ ನಿಗದಿಯಾದ ದರವು ಒಂದು ವರ್ಷದವರೆಗೆ ಅನ್ವಯವಾಗುತ್ತದೆ. ಹೀಗಾಗಿ ಹಿಂದಿನ ಟೆಂಡರ್ನಲ್ಲಿ ಇದ್ದ ದರದಲ್ಲೇ ಪೂರೈಕೆ ಆದೇಶ ನೀಡಲಾಗಿದೆ’ ಎಂದು ನಿರ್ದೇಶನಾಲಯವು ದಾಖಲೆಗಳಲ್ಲಿ ವಿವರಿಸಿದೆ. ಆದರೆ ನಿರ್ದೇಶನಾಲಯವು ಈ ಹಿಂದೆ ಟೆಂಡರ್ ಕರೆದದ್ದು ‘ಇ–ಪೋರ್ಟಲ್’ನಲ್ಲಿ. ದಾಖಲೆಗಳಲ್ಲಿ ‘ಜಿಇಎಂ’ ಪೋರ್ಟಲ್ ಎಂದು ವಿವರಿಸಿದೆ. ಪೂರ್ವಾನುಮತಿ ಪಡೆಯದೆ, ಹಣ ಬಿಡುಗಡೆ ಮಾಡಿಸಿಕೊಳ್ಳದೆ ಕಿಟ್ಗಳನ್ನು ಖರೀದಿಸಲಾಗಿದೆ. ಹೀಗಾಗಿ ಇಡೀ ಪ್ರಕ್ರಿಯೆಯೇ ಅಕ್ರಮವಾಗಿದೆ. ಇದರಲ್ಲಿ ₹81.68 ಕೋಟಿ ಪಾವತಿಯಾಗಿದೆ.

ಇದೇ ಕಂಪನಿ ಮತ್ತೆ 6.28 ಲಕ್ಷ ಕಿಟ್ಗಳನ್ನು ₹82 ಕೋಟಿ ವೆಚ್ಚದಲ್ಲಿ ಪೂರೈಕೆ ಮಾಡಿದೆ. ಆದರೆ ಇದಕ್ಕೆ ಯಾವುದೇ ಹಣ ಪಾವತಿ ಆಗಿಲ್ಲ. ಪೂರ್ವಾನುಮತಿ, ಪೂರೈಕೆ ಆದೇಶ ಇಲ್ಲದಿದ್ದರೂ ನಿರ್ದೇಶನಾಲಯವು ಕಿಟ್ಗಳನ್ನು ಪಡೆದುಕೊಂಡಿದೆ. ಇದಕ್ಕೆ ಪಾವತಿಸಲು ನಿರ್ದೇಶನಾಲಯದ ಬಳಿ ಹಣವೇ ಇರಲಿಲ್ಲ. ಈವರೆಗೂ ಹಣ ಪಾವತಿಯಾಗಿಲ್ಲ. ₹78 ಕೋಟಿ ಮತ್ತು ಅದಕ್ಕೆ ವಾರ್ಷಿಕ ಶೇ 18ರಷ್ಟು ಬಡ್ಡಿ ನೀಡುವಂತೆ ನಿರ್ದೇಶನ ನೀಡಿ ಎಂದು ಪೂರೈಕೆದಾರರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.ಈ ಎರಡು ವಹಿವಾಟುಗಳಲ್ಲಿ ಒಟ್ಟಾರೆ ₹160 ಕೋಟಿ ಅಕ್ರಮ ನಡೆದಿದೆ.

ಟೆಂಡರ್ ಒಬ್ಬರಿಗೆ, ಬಿಲ್ ಪಾವತಿ ಮತ್ತೊಬ್ಬರಿಗೆ

ಪಿಪಿಇ ಕಿಟ್ಗಳ ಪೂರೈಕೆಗೆ ಟೆಂಡರ್ ಪಡೆದಿದ್ದು ಲಾಜ್ ಎಕ್ಸ್ಪೋರ್ಟ್ಸ್ ಲಿಮಿಟೆಡ್. ಬೆಂಗಳೂರಿನ ಯಶವಂತಪುರದ ಕೈಗಾರಿಕಾ ಪ್ರದೇಶದ ಸಣ್ಣ ಶೆಡ್ನಲ್ಲಿರುವ ಈ ಕಂಪನಿ ಹೆಸರಿನಲ್ಲೇ ₹203 ಕೋಟಿಯಷ್ಟು ವಹಿವಾಟು ನಡೆದಿದೆ. ಆದರೆ ಕಿಟ್ ಪೂರೈಸಿದ್ದು, ಬಿಲ್ ಸಲ್ಲಿಸಿದ್ದು, ಹಣ ಪಡೆದು ಕೊಂಡಿದ್ದು ಮಾತ್ರ ಮುಂಬೈನ ‘ಪ್ರುಡೆಂಟ್ ಮ್ಯಾನೇಜ್ಮೆಂಟ್ ಲಿಮಿಟೆಡ್’.

ಈ ಬಗ್ಗೆ ವಿವರಣೆ ನೀಡುವಂತೆ ಲಾಜ್ ಎಕ್ಸ್ಪೋರ್ಟ್ಸ್ಗೆ ಸಮನ್ಸ್ ನೀಡಲಾಗಿತ್ತು. ಕಂಪನಿಯ ನಿರ್ದೇಶಕ ಬಿ.ವಿ.ರೆಡ್ಡಿ ಪತ್ರ ಬರೆದು, ‘ಟೆಂಡರ್ ನಮಗೆ ದೊರೆತಿದ್ದರೂ ಪೂರೈಕೆ, ಬಿಲ್ ಸಲ್ಲಿಕೆ ಮತ್ತು ಹಣ ಪಡೆದುಕೊಳ್ಳುವ ಅಧಿಕಾರವನ್ನು ನಮ್ಮ ಅಧಿಕೃತ ಡೀಲರ್ಗಳಾದ ಪ್ರುಡೆಂಟ್ ಮ್ಯಾನೇಜ್ಮೆಂಟ್ಗೆ ವರ್ಗಾಯಿಸಿದ್ದೇವೆ’ ಎಂದು ವಿವರಿಸಿದ್ದರು.

ಟೆಂಡರ್ ಷರತ್ತುಗಳ ಪ್ರಕಾರ ಪೂರೈಕೆ ಗುತ್ತಿಗೆಯನ್ನು ಲಾಜ್ ಎಕ್ಸ್ಪೋರ್ಟ್ಸ್ ಮತ್ತೊಂದು ಕಂಪನಿಗೆ ವರ್ಗಾಯಿಸಲು ಬರುವುದಿಲ್ಲ. ಈ ರೀತಿ ವರ್ಗಾವಣೆಗೆ ಟೆಂಡರ್ ತಾಂತ್ರಿಕ ಸಮಿತಿಯ ಅನುಮೋದನೆ ಪಡೆದುಕೊಂಡಿಲ್ಲ. ಪಿಪಿಇ ಕಿಟ್ ತಯಾರಿಸುವ ಮತ್ತು ಲಕ್ಷಗಟ್ಟಲೆ ಪೂರೈಸುವ ಸಾಮರ್ಥ್ಯ ಲಾಜ್ ಎಕ್ಸ್ಪೋರ್ಟ್ಸ್ಗೆ ಇಲ್ಲ. ಮೊದಲೇ ಗುರುತು ಮಾಡಿಕೊಳ್ಳಲಾಗಿದ್ದ ಮುಂಬೈನ ಕಂಪನಿಗೇ ಗುತ್ತಿಗೆ ದೊರೆಯುವಂತೆ ಮಾಡುವ ಉದ್ದೇಶದಿಂದ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ಅದರಲ್ಲಿ ಲಾಜ್ ಎಕ್ಸ್ಪೋರ್ಟ್ಸ್ ಅನ್ನು ಡಮ್ಮಿಯಂತೆ ಭಾಗಿ ಮಾಡಲಾಗಿದೆ. ನಂತರ ಟೆಂಡರ್ ವರ್ಗಾವಣೆಯಾಗಿದೆ. ಹೀಗೆ ಪ್ರುಡೆಂಟ್ ಮ್ಯಾನೇಜ್ಮೆಂಟ್ ಜತೆಗೆ ನಡೆದ ₹203 ಕೋಟಿ ವಹಿವಾಟಿನಲ್ಲಿ ಹಲವರು ಅಕ್ರಮ ಲಾಭ ಮಾಡಿಕೊಂಡಿದ್ದಾರೆ. ಹೀಗಾಗಿ ಇಡೀ ವಹಿವಾಟೇ ಅಕ್ರಮ.

₹41.35 ಕೋಟಿ ಮೌಲ್ಯದ ಕಿಟ್ ನಾಪತ್ತೆ

2020ರ ಆಗಸ್ಟ್ನಲ್ಲಿ ಪಿಪಿಇ ಕಿಟ್ ಖರೀದಿಗೆ ಇ–ಪೋರ್ಟಲ್ ಮೂಲಕ ಟೆಂಡರ್ ಕರೆಯಲಾಗಿದ್ದು, ಕಡಿಮೆ ದರ ನಮೂದಿಸಿದ್ದ ಲಾಜ್ ಎಕ್ಸ್ಪೋರ್ಟ್ಸ್ ಲಿಮಿಟೆಡ್ ಎಂಬ ಕಂಪನಿಗೆ ಟೆಂಡರ್ ನೀಡಲಾಗಿದೆ. ಮೂರು ಪ್ರತ್ಯೇಕ ಆದೇಶಗಳಲ್ಲಿ 2.59 ಲಕ್ಷ ಪಿಪಿಇ ಕಿಟ್ಗಳನ್ನು (ತಲಾ ಒಂದಕ್ಕೆ ₹1,312ರಂತೆ) ಪೂರೈಸಲು ಲಾಜ್ ಎಕ್ಸ್ಪೋರ್ಟ್ಗೆ ಆದೇಶಿಸಲಾಗಿದೆ.

2.59 ಲಕ್ಷ ಕಿಟ್ಗಳನ್ನು ಕಂಪನಿ ಪೂರೈಸಿದೆ ಮತ್ತು ಅದಕ್ಕೆ ₹41.35 ಕೋಟಿ ಪಾವತಿಸಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವು ದಾಖಲೆ ಸಲ್ಲಿಸಿದೆ. ಯಾವ ಆಸ್ಪತ್ರೆಗಳಿಗೆ ಕಿಟ್ ಪೂರೈಸಲಾಗಿದೆ ಎಂಬ ದಾಖಲೆ ಅದರಲ್ಲಿಲ್ಲ. ಒಂದು ಬಿಳಿ ಹಾಳೆಯಲ್ಲಿ, ಆಸ್ಪತ್ರೆಗಳ ಹೆಸರು ಮತ್ತು ಕಿಟ್ಗಳ ಸಂಖ್ಯೆಯ ಇರುವ ಪಟ್ಟಿಯನ್ನು ನೀಡಿದೆ. ಕಿಟ್ ಪೂರೈಕೆ ಮಾಡಿದವರ ಮತ್ತು ಪಡೆದುಕೊಂಡವರ ಸಹಿ ಹಾಗೂ ಮೊಹರು ಅದರಲ್ಲಿಲ್ಲ.

ಈ ಸಂಬಂಧ ನಿರ್ದೇಶನಾಲಯ ಅಥವಾ ಲಾಜ್ ಎಕ್ಸ್ಪೋರ್ಟ್ಸ್ನಿಂದಾಗಲಿ ವಿವರಣೆ ದೊರೆತಿಲ್ಲ. ವಾಸ್ತವದಲ್ಲಿ 2.59 ಲಕ್ಷ ಕಿಟ್ಗಳು ಪೂರೈಕೆಯಾಗಿರುವ ಬಗ್ಗೆಯೇ ಸಂದೇಹವಿದೆ.
.ಕೋವಿಡ್ ಅಕ್ರಮ ತನಿಖೆಯ ಹೂರಣ– 1 | ಸಿ.ಟಿ ಸ್ಕ್ಯಾನ್: ₹15.83 ಕೋಟಿ ಅಕ್ರಮ.ಕೋವಿಡ್ ಅಕ್ರಮ ತನಿಖೆಯ ಹೂರಣ– 2 | ₹181 ಕೋಟಿ ಖರೀದಿ; ₹125 ಕೋಟಿ ಅಕ್ರಮ!.ಕೋವಿಡ್ ಅಕ್ರಮ ತನಿಖೆಯ ಹೂರಣ–3 | ₹98 ಸಾವಿರದ ಐಸಿಯು ಕಾಟ್ಗೆ ₹1.91 ಲಕ್ಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.