ಬೆಂಗಳೂರು: ರೈಲ್ವೆ ಇಲಾಖೆಯ ನಿವೃತ್ತ ಅಧಿಕಾರಿಯೂ ಆಗಿದ್ದ ಶ್ರವಣ ತಜ್ಞ ದಾವಣಗೆರೆಯ ಟಿ. ನಾರಾಯಣ ಶೆಟ್ಟಿ (92) ಅವರು ಸೆ. 29ರಂದು ನಿಧನರಾದರು.

ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.

‘ಮೂವರು ಮಕ್ಕಳಲ್ಲಿ ಶ್ರವಣ ದೋಷವಿತ್ತು. ಅದಕ್ಕೆ ಪರಿಹಾರ ಕಂಡುಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಮುಂದಾಗಿದ್ದ ನಾರಾಯಣ ಶೆಟ್ಟಿ ಅವರು ವಾಕ್ ಹಾಗೂ ಶ್ರವಣ ವಿಷಯದಲ್ಲಿ ಲಾಸ್ ಏಂಜಲೀಸ್‌ನಲ್ಲಿ ಉನ್ನತ ವ್ಯಾಸಂಗ ಮಾಡಿದ್ದರು. ತಮ್ಮದೇ ಶೈಲಿಯಲ್ಲಿ ಮಕ್ಕಳಿಗೆ ತರಬೇತಿ ನೀಡಿ ಸಂವಹನಕಾರರಾಗಿ ರೂಪಿಸಿದ್ದರು’ ಎಂದು ಕುಟುಂಬಸ್ಥರು ತಿಳಿಸಿದರು.

‘ದಾವಣಗೆರೆಯಲ್ಲಿ ಕ್ವೆಸ್ ವಾಕ್ ಮತ್ತು ಶ್ರವಣ ಕೇಂದ್ರ ಸ್ಥಾಪಿಸಿದ್ದ ನಾರಾಯಣ ಶೆಟ್ಟಿ, 35 ವರ್ಷಗಳಿಂದ ಶ್ರವಣ ದೋಷವಿರುವ ಮಕ್ಕಳಿಗೆ ಚಿಕಿತ್ಸೆ ಕೊಡುತ್ತಿದ್ದರು. ದಾವಣಗೆರೆ ಲಯನ್ಸ್ ಕ್ಲಬ್ ಮೂಲಕ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸಿದ್ದರು. ಅವರ ಕೆಲಸಕ್ಕೆ ಅಂತರಾಷ್ಟ್ರೀಯ ಮಟ್ಟದ ಪುರಸ್ಕಾರ ಲಭಿಸಿತ್ತು’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.