ಬೆಂಗಳೂರು: ‘ದೇವರಾಜು ಅರಸು ಅವರು ಜಾರಿಗೆ ತಂದಿದ್ದ ಭೂಸುಧಾರಣೆ ಕಾಯ್ದೆಗೆ ತರಲಾಗಿರುವ ತಿದ್ದುಪಡಿಯನ್ನು ರದ್ದುಪಡಿಸಬೇಕು’ ಎಂದು ಮಧ್ಯಪ್ರದೇಶದ ಕಿಸಾನ್ ಸಂಘರ್ಷ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಸುನಿಲಂ ಆಗ್ರಹಿಸಿದರು.

‘ಸಂಯುಕ್ತ ಕಿಸಾನ್ ಮೋರ್ಚಾ’ ವತಿಯಿಂದ ಸೋಮವಾರ ಆಯೋಜಿಸಿದ್ದ ದಕ್ಷಿಣ ಭಾರತ ರೈತ ಮುಖಂಡರ ಸಭೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅರಸು ಅವರ ಭೂಸುಧಾರಣೆ ಕಾಯ್ದೆ ಇತರೆ ರಾಜ್ಯಗಳಿಗೂ ಮಾದರಿ. ಆದರೆ ಅದಕ್ಕೆ ತಿದ್ದುಪಡಿ ತರಲಾಗಿರುವುದರಿಂದ ರೈತರ ಭೂಮಿ ಉಳಿಯುತ್ತಿಲ್ಲ. ಆದ್ದರಿಂದ ಈ ಕಾಯ್ದೆಯನ್ನು ಹಿಂದಿನಂತೆಯೇ ಉಳಿಸಿಕೊಳ್ಳಬೇಕು’ ಎಂದರು.

ಕೇಂದ್ರ ಸರ್ಕಾರ ಎಂಎಸ್ಪಿ ಜಾರಿಗೊಳಿಸಿ ರೈತರ ಎಲ್ಲ ಸಾಲಗಳನ್ನು ಮನ್ನಾ ಮಾಡಬೇಕು. ರೈತರಿಗೆ ತಿಂಗಳಿಗೆ ₹10 ಸಾವಿರ ಪಿಂಚಣಿ ನೀಡಬೇಕು ಎಂದು ಆಗ್ರಹಿಸುವ ಹೋರಾಟಗಳನ್ನು ನಾವು ಹಮ್ಮಿಕೊಂಡಿದ್ದೇವೆ.
ದರ್ಶನ ಪಾಲ್, ಸಂಯುಕ್ತ ಕಿಸಾನ್ ಮೋರ್ಚಾದ ಸಂಚಾಲಕ

‘ಕರ್ನಾಟಕದಲ್ಲಿ ಹೊಸ ವಿಮಾನ ನಿಲ್ದಾಣಕ್ಕೆ ಏಳು ಸಾವಿರ ಎಕರೆ, ಜಿಂದಾಲ್ ಸಂಸ್ಥೆಗೆ ಮೂರು ಸಾವಿರ ಎಕರೆ ನೀಡುವ ಯೋಜನೆ ಇದೆ. ಇದರ ವಿರುದ್ಧ ರೈತ ಮುಖಂಡರು ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಿದ್ದಾರೆ’ ಎಂದು ಸುನಿಲಂ ಹೇಳಿದರು.

‘2022ರಲ್ಲಿ ನಡೆದ ರೈತರ ಚಳವಳಿ ಸಂದರ್ಭದಲ್ಲಿ ಪೂರ್ವಸಿದ್ಧತೆಯಾಗಿರಲಿಲ್ಲ. ಆ ಸಂದರ್ಭದಲ್ಲಿ ವಿರೋಧ ಪಕ್ಷವೂ ಅತ್ಯಂತ ದುರ್ಬಲವಾಗಿತ್ತು. ಈಗ ನಾವು ಸರ್ವ ರೀತಿಯಲ್ಲೂ ಸಜ್ಜಾಗಿದ್ದು, ದೇಶದ ಎಲ್ಲೆಡೆಯೂ ಹೋರಾಟ ಮಾಡಲು ಸನ್ನದ್ಧರಾಗಿದ್ದೇವೆ’ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಸಂಚಾಲಕ ದರ್ಶನ ಪಾಲ್ ಹೇಳಿದರು.

ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಹಾಗೂ ಕರ್ನಾಟಕದ ಸುಮಾರು 250 ರೈತ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಕಿಸಾನ್ ಮೋರ್ಚಾದ ನಾಯಕರು ತಮ್ಮ ಪ್ರಾಂತ್ಯದಲ್ಲಿನ ಹೋರಾಟ ಹಾಗೂ ಸಂಕಷ್ಟಗಳನ್ನು ವಿವರಿಸಿದರು. ‘ರೈತ ಮುಖಂಡರ ಸಭೆ ಮಂಗಳವಾರ ಮುಗಿಯಲಿದೆ. ಅಂದು ಸಂಜೆ, ಮುಂದಿನ ಹೋರಾಟದ ನಿರ್ಣಯ ಕೈಗೊಳ್ಳಲಾಗುತ್ತದೆ’ ಎಂದು ನಾಯಕರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.