ಬೆಂಗಳೂರು: ಸಾರಿಗೆ ಇಲಾಖೆಯಲ್ಲಿ ವಾಹನಗಳಿಗೆ ಫ್ಯಾನ್ಸಿ ನೋಂದಣಿ ಸಂಖ್ಯೆ ನೀಡುವ ವಿಭಾಗದ ಪ್ರಥಮ ದರ್ಜೆ ಸಹಾಯಕನಾಗಿದ್ದ (ಎಫ್ಡಿಎ) ಆರೋಪಿ ಬಿ.ಕೆ.ರವಿಶಂಕರ್, ನಟಿ ರಾಗಿಣಿ ದ್ವಿವೇದಿ ಜೊತೆ ಹಲವು ಬಾರಿ ‘ಡ್ರಗ್ಸ್ ಪಾರ್ಟಿ’ ಮಾಡಿದ್ದ. ಅದಕ್ಕಾಗಿ ಆತ, ನೈಜೀರಿಯಾ ಪ್ರಜೆ ಲೂಮ್ ಪೆಪೆ ಸಾಂಬ ಅಲಿಯಾಸ್ ಸೈಮನ್ ಕಡೆಯಿಂದ 2020ರಲ್ಲಿ 30 ಬಾರಿ ಡ್ರಗ್ಸ್ ಖರೀದಿಸಿದ್ದನೆಂಬ ಮಾಹಿತಿಯನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದಾರೆ.

‘ಪ್ರತಿಷ್ಠಿತ ಹೋಟೆಲ್, ವಿಲ್ಲಾ, ಕ್ಲಬ್ಗಳಲ್ಲಿ ನಡೆಯುತ್ತಿದ್ದ ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತಿದ್ದ ರವಿಶಂಕರ್, ಮಾದಕ
ವಸ್ತು ಮಾರುತ್ತಿದ್ದ, ಸೇವಿಸುತ್ತಿದ್ದ. ಅದರಿಂದ ಹಣ ಸಂಪಾದಿಸುತ್ತಿದ್ದ’ ಎಂದು ಸಿಸಿಬಿ ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.

‘ಫ್ಯಾನ್ಸಿ ನೋಂದಣಿ ಸಂಖ್ಯೆ ಹಂಚಿಕೆ ಮಾಡುತ್ತಿದ್ದ ರವಿಶಂಕರ್ಗೆ ಹಲವು ಶ್ರೀಮಂತರ ಪರಿಚಯವಿತ್ತು. ಆ ಪೈಕಿ ಒಬ್ಬರ ಮೂಲಕ ನಟಿ ರಾಗಿಣಿ ಜೊತೆ ಸ್ನೇಹ ಬೆಳೆದಿತ್ತು. ಹಲವೆಡೆ ನಡೆದಿದ್ದ ಪಾರ್ಟಿಗಳಲ್ಲಿ ಇಬ್ಬರೂ ಒಟ್ಟಿಗೆ ಪಾಲ್ಗೊಳ್ಳುತ್ತಿದ್ದರು. ಡ್ರಗ್ಸ್ ವ್ಯಸನಿಗಳಾಗಿದ್ದ ಇಬ್ಬರೂ, ಲೂಮ್ ಪೆಪೆ ಸಾಂಬ ಹಾಗೂ ಇನ್ನೊಬ್ಬ ಆರೋಪಿ ಪ್ರತೀಕ್ ಶೆಟ್ಟಿ ಬಳಿ ಹಲವು ಬಾರಿ ಡ್ರಗ್ಸ್ ಖರೀದಿಸಿದ್ದಕ್ಕೆ ಪುರಾವೆಗಳು ಸಿಕ್ಕಿವೆ’ ಎಂಬ ಮಾಹಿತಿ ಪಟ್ಟಿಯಲ್ಲಿದೆ.

‘ಪ್ರಕರಣದಲ್ಲಿ 16ನೇ ಆರೋಪಿ ಆಗಿರುವ ರವಿಶಂಕರ್, ನಟಿ ರಾಗಿಣಿಗಾಗಿ ಪಾರ್ಟಿಗಳನ್ನು ಆಯೋಜಿಸುತ್ತಿದ್ದ. ಶ್ರೀಮಂತರ ಮಕ್ಕಳು ಹಾಗೂ ಉದ್ಯಮಿಗಳನ್ನು ಆಹ್ವಾನಿಸುತ್ತಿದ್ದ. ಅಲ್ಲಿಯೇ ಡ್ರಗ್ಸ್ ಮಾರುತ್ತಿದ್ದ. ಇದಕ್ಕೆ ಗೆಳತಿ ರಾಗಿಣಿ ಸಹಕಾರವಿತ್ತು.’

'ಕ್ವೀನ್ಸ್ ರಸ್ತೆಯಲ್ಲಿರುವ ‘1 ಕ್ಯೂ 1’ ಕ್ಲಬ್ನಲ್ಲಿ ರಾಗಿಣಿ ಹುಟ್ಟುಹಬ್ಬ ಪಾರ್ಟಿ ಆಯೋಜಿಸಿದ್ದ ರವಿಶಂಕರ್, ಸ್ನೇಹಿತರು ಹಾಗೂ ಯುವಕ–ಯುವತಿಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಾರ್ಟಿಗೆ ಕರೆಸಿದ್ದ. ಅವರಿಗೆಲ್ಲ ಆತ, ಎಕ್ಸೈಟೆಸ್ಸಿ ಮಾತ್ರೆ ಮಾರಿದ್ದ. ಸ್ನೇಹಿತೆ ಜೊತೆ ಸೇರಿ ತಾನೂ ಡ್ರಗ್ಸ್ ಸೇವಿಸಿದ್ದ’ ಎಂಬ ಅಂಶವನ್ನೂ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

‘ಯಲಹಂಕದ ‘ಲೇ–ರೋಮಾ’ ಗಾರ್ಡೇನಿಯಾ ಹೋಮ್ ಸ್ಟೇ, ಲಲಿತ್ ಅಶೋಕ ಹೋಟೆಲ್ನ ಕಿಟ್ಟಿಕೋ ರೆಸ್ಟೊರಂಟ್, ಹೆಬ್ಬಾಳದ ‘ಹೌಸ್ ಆಫ್ ಲೈಫ್ ರೆಸಾರ್ಟ್’ ಹಾಗೂ ಇತರೆಡೆ ನಡೆದ ಡ್ರಗ್ಸ್ ಪಾರ್ಟಿಯಲ್ಲೂ ಆರೋಪಿಗಳು ಪಾಲ್ಗೊಂಡಿದ್ದರು’ ಎಂದೂ ತಿಳಿಸಲಾಗಿದೆ.

‘616’ ಕೊಠಡಿಯಲ್ಲಿ ಡ್ರಗ್ಸ್ ಸೇವನೆ: 'ಹೊಸೂರು ರಸ್ತೆಯಲ್ಲಿರುವ ‘ದವನಮ್ ಸರೋವರ್ ಪೋರ್ಟಿಕೊ' ಹೋಟೆಲ್ನಲ್ಲಿ 2019ರ ಏಪ್ರಿಲ್ 28 ಹಾಗೂ 29ರಂದು ಫ್ಯಾಷನ್ ಶೋ ಆಯೋಜಿಸಲಾಗಿತ್ತು. ‘ಸೆಲೆಬ್ರಿಟಿ’ ಆಗಿ ಹೋಗಿದ್ದ ರವಿಶಂಕರ್ ಹಾಗೂ ರಾಗಿಣಿ, ಹೋಟೆಲ್ನ ಕೊಠಡಿ ಸಂಖ್ಯೆ 616ರಲ್ಲಿ ಉಳಿದುಕೊಂಡಿದ್ದರು. ಅದೇ ಕೊಠಡಿಯಲ್ಲೇ ಅವರಿಬ್ಬರೂ
ಕೊಕೇನ್ ಸೇವಿಸಿದ್ದರು. ಅದನ್ನು ನೋಡಿದ್ದ ರೂಪದರ್ಶಿಯೊಬ್ಬರು ಸಾಕ್ಷಿ ಹೇಳಿಕೆ ನೀಡಿದ್ದಾರೆ’ ಎಂಬ ಅಂಶವೂ ಇದೆ.

ಕಾರು ಚಾಲಕನಿಂದ ಡ್ರಗ್ಸ್ ತರಿಸುತ್ತಿದ್ದ: ‘ರಾಗಿಣಿ ಬಳಿ ಹೋಗುತ್ತಿದ್ದ ರವಿಶಂಕರ್, ಆಕೆಯ ಕಾರು ಚಾಲಕನ ಮೂಲಕ ಡ್ರಗ್ಸ್ ತರಿಸುತ್ತಿದ್ದ. ಆರೋಪಿ ಮಾತಿನಂತೆ ನೈಜೀರಿಯಾ ಪ್ರಜೆಯನ್ನು ಭೇಟಿಯಾಗುತ್ತಿದ್ದ ಚಾಲಕ, ಡ್ರಗ್ಸ್ ಪೊಟ್ಟಣಗಳನ್ನು ತಂದು ಕೊಡುತ್ತಿದ್ದ. ಪ್ರತಿ ಬಾರಿ ನೈಜೀರಿಯಾ ಪ್ರಜೆಗೆ ₹ 10 ಸಾವಿರದಿಂದ ₹ 20 ಸಾವಿರಕ್ಕೆ ಕೊಡುತ್ತಿದ್ದ’ ಎಂಬ ಸಂಗತಿ ಪಟ್ಟಿಯಲ್ಲಿದೆ.

‘ಶೌಚಾಲಯದಲ್ಲಿ ಡ್ರಗ್ಸ್ ಸೇವಿಸುತ್ತಿದ್ದ ಆರೋಪಿ’
‘ರಿಯಲ್ ಎಸ್ಟೇಟ್ ಉದ್ಯಮಿ ಪ್ರಶಾಂತ್ ರಾಜು, ಪ್ರಕರಣದ 8ನೇ ಆರೋಪಿ. ‘ಎಫ್ ಬಾರ್’ ಮಾಲೀಕ ಆಗಿದ್ದ ಆತ, ಇತರೆ ಆರೋಪಿಗಳ ಜೊತೆ ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಿದ್ದ’ ಎಂಬ ಮಾಹಿತಿ ಪಟ್ಟಿಯಲ್ಲಿದೆ.

‘ಯುಬಿ ಸಿಟಿಯಲ್ಲಿರುವ ಸ್ಯಾಚೋಸ್, ಫರ್ಜಿ ಕೆಫೆ, ಸ್ಕೈ ಬಾರ್, ಶಿರೋನ್ ಬಾರ್ ಮತ್ತು ತಾಜ್ ವೆಸ್ಟೆಂಡ್ನಲ್ಲಿರುವ ಬ್ಲೂಬಾರ್ ಪಾರ್ಕ್ ಹೋಟೆಲ್ಗಳಲ್ಲಿ ಆಯೋಜಿಸಿದ್ದ ಪಾರ್ಟಿಯಲ್ಲಿ ಪ್ರಶಾಂತ್ ಪಾಲ್ಗೊಂಡಿದ್ದಕ್ಕೆ ಪುರಾವೆಗಳು ಸಿಕ್ಕಿವೆ. ಆರೋಪಿ, ಪ್ರತಿ ಬಾರಿ ಶೌಚಾಲಯಕ್ಕೆ ಹೋಗಿ ಕೊಕೇನ್ ಪುಡಿ ಹಾಗೂ ಎಕ್ಸೈಟೆಸ್ಸಿ ಮಾತ್ರೆ ತೆಗೆದುಕೊಂಡು ನಶೆ ಏರಿಸಿಕೊಳ್ಳುತ್ತಿದ್ದ’ ಎಂದೂ ಉಲ್ಲೇಖಿಸಲಾಗಿದೆ.

‘ಸಂದೀಪ್ ಪಾಟೀಲ’ ಬಗ್ಗೆ ಎಚ್ಚರಿಕೆ ನೀಡಿದ್ದ ರವಿಶಂಕರ್
‘ಡ್ರಗ್ಸ್ ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆ ಚುರುಕುಗೊಳಿಸಿದ್ದ ಸಿಸಿಬಿ ಪೊಲೀಸರು, ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದರು. ಅದು ತಿಳಿಯುತ್ತಿದ್ದಂತೆ ಆರೋಪಿ ರವಿಶಂಕರ್, ‘ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ, ಜಾಲದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ, ಎಚ್ಚರಿಕೆ’ ಎಂದು ಇತರೆ ಆರೋಪಿಗಳಿಗೆ ಸಂದೇಶ ಕಳುಹಿಸಿದ್ದ’ ಎಂಬ ಅಂಶ ಪಟ್ಟಿಯಲ್ಲಿದೆ.

‘ಪ್ರಕರಣದ 4ನೇ ಆರೋಪಿ ಪ್ರಶಾಂತ್ ರಂಕಾ, ಸಾಲ ವಸೂಲಾತಿ ಮತ್ತು ವಾಹನಗಳ ಜಪ್ತಿ ಏಜೆಂಟ್ ಆಗಿದ್ದ. ರವಿಶಂಕರ್ ಜೊತೆ ಹೆಚ್ಚು ಒಡನಾಟ ಹೊಂದಿದ್ದ. ಆತನೂ ನೈಜೀರಿಯಾ ಪ್ರಜೆಗಳಿಂದ ಡ್ರಗ್ಸ್ ಖರೀದಿಸಿ ಪಾರ್ಟಿಗಳಲ್ಲಿ ಮಾರುತ್ತಿದ್ದ. ಅವರಿಬ್ಬರ ಮೊಬೈಲ್ ಜಪ್ತಿ ಮಾಡಿ, ವಾಟ್ಸ್ಆ್ಯಪ್ ಸಂದೇಶಗಳನ್ನು ಪರಿಶೀಲಿಸಿದ್ದು, ಸಂದೀಪ್ ಪಾಟೀಲ ಹೆಸರು ಉಲ್ಲೇಖವಾಗಿರುವುದು ಪತ್ತೆಯಾಗಿದೆ’ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.