ಬೆಂಗಳೂರು: ‘ವಿದೇಶಗಳಲ್ಲಿರುವ ಕ್ಯಾಸಿನೊ ಮತ್ತು ಕ್ಲಬ್ಗಳಿಗೆ ಗ್ರಾಹಕರನ್ನು ಕರೆದೊಯ್ಯುವ ಮಧ್ಯವರ್ತಿಯಾಗಿದ್ದ ಆರೋಪಿ ರಾಹುಲ್ ತೋನ್ಸೆ, ಮದುವೆ ನೆಪದಲ್ಲಿ ಯುವತಿಯರನ್ನು ಪರಿಚಯಿಸಿಕೊಂಡು ಡ್ರಗ್ಸ್ ಜಾಲಕ್ಕೆ ದೂಡುತ್ತಿದ್ದ. ಆತನನ್ನು ‘ರಾಕಿ ಭಾಯಿ’ ಎನ್ನುತ್ತಿದ್ದ ನಟಿ ಸಂಜನಾ ಗಲ್ರಾನಿ, ಮನೆಗೆ ಹಲವು ಬಾರಿ ಆಹ್ವಾನಿಸಿ ಜೊತೆಯಲ್ಲೇ ‘ಆಫ್ಟರ್ ಪಾರ್ಟಿ’ ಆಚರಿಸಿ ಡ್ರಗ್ಸ್ ಸೇವಿಸಿದ್ದಳು’ ಎಂಬ ಸಂಗತಿ ಸಿಸಿಬಿ ಪೊಲೀಸರ ತನಿಖೆಯಿಂದ ಹೊರಬಿದ್ದಿದೆ.

ಮಾದಕ ವಸ್ತು (ಡ್ರಗ್ಸ್) ಸೇವಿಸಲು ಹಾಗೂ ಮಾರಾಟದಿಂದ ಹಣ ಗಳಿಸಲು ಸಂಘಟಿತರಾಗಿದ್ದ ಅಂತರರಾಷ್ಟ್ರೀಯ ಡ್ರಗ್ಸ್ ಪ್ರಕರಣದ ಆರೋಪಿಗಳು, ಯುವಜನರನ್ನು ತೆಕ್ಕೆಗೆ ಬೀಳಿಸಿಕೊಂಡು ನಶೆ ಏರಿಸಿಕೊಳ್ಳಲು ಪ್ರಚೋದಿಸುತ್ತಿದ್ದರು. ಪ್ರಕರಣದಲ್ಲಿ 25 ಆರೋಪಿಗಳ ಪಾತ್ರ ಕುರಿತು ಸಿಸಿಬಿ ಪೊಲೀಸರು, ದೋಷಾರೋಪ ಪಟ್ಟಿಯಲ್ಲಿ ದಾಖಲೆ ಸಮೇತ ಉಲ್ಲೇಖಿಸಿದ್ದಾರೆ.

‘ಸುಂದರ ಯುವತಿಯರನ್ನು ಪರಿಚಯಿಸಿಕೊಂಡು ಮದುವೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದ ರಾಹುಲ್, ಅವರನ್ನು ಪಾರ್ಟಿಗಳಿಗೆ ಆಹ್ವಾನಿಸಿ ಡ್ರಗ್ಸ್ ಸೇವಿಸುವಂತೆ ಮಾಡುತ್ತಿದ್ದ. ಕಾಗದದಲ್ಲಿ ಗಾಂಜಾ ಸುತ್ತಿ ಗೆಳತಿಯ ಜೊತೆ ಸೇವಿಸುತ್ತಿದ್ದ ಫೋಟೊಗಳು ಆತನ ಮೊಬೈಲ್ನಲ್ಲಿ ಲಭ್ಯವಾಗಿವೆ’ ಎಂಬ ಅಂಶ ಪಟ್ಟಿಯಲ್ಲಿದೆ.

'ಪ್ರಕರಣದ 14ನೇ ಆರೋಪಿ ಆಗಿರುವ ಅರ್ಚನಾ ಮನೋಹರ್ ಗಲ್ರಾನಿ ಅಲಿಯಾಸ್ ಸಂಜನಾ ಗಲ್ರಾನಿ, ಇಂದಿರಾನಗರದ ದೂಪನಹಳ್ಳಿಯ ಸಾಯಿ ತೇಜ್ ಶೈನ್ ವಸತಿ ಸಮುಚ್ಚಯದ ಫ್ಲ್ಯಾಟ್ನಲ್ಲಿ ವಾಸವಿದ್ದಳು. ರಾಹುಲ್ ತೋನ್ಸೆ ಹಾಗೂ ನಿಯಾಸ್ ಅಹಮ್ಮದ್ನನ್ನು ಹಲವು ಬಾರಿ ಮನೆಗೆ ಕರೆಸಿದ್ದ ಸಂಜನಾ, ಡ್ರಗ್ಸ್ ಸಮೇತ ‘ಆಫ್ಟರ್ ಪಾರ್ಟಿ’ (ಆಪ್ತರನ್ನಷ್ಟೇ ಸೇರಿಸಿಕೊಂಡು ಮಾಡುತ್ತಿದ್ದ ಪಾರ್ಟಿ) ಮಾಡಿರುವುದು ದೃಢಪಟ್ಟಿದೆ.’

‘ನೈಜೀರಿಯಾ ಪ್ರಜೆ ಜಾನ್ ಅಲಿಯಾಸ್ ಬೆನಾಲ್ಡ್ ಉಡೇನ್ನಾ ಎಂಬಾತನೇ ಆರೋಪಿಗಳಿಗೆ ಕೊಕೇನ್, ಎಂಡಿಎಂಎ ಹಾಗೂ ಗಾಂಜಾ ಪೂರೈಕೆ ಮಾಡಿದ್ದ. ಪಕ್ಕದ ಮನೆಯ ನಿವಾಸಿಯೊಬ್ಬರನ್ನು ನೈಜೀರಿಯಾ ಪ್ರಜೆ ಬಳಿ ಕಳುಹಿಸಿದ್ದ ಸಂಜನಾ, ಅವರ ಮೂಲಕ ಡ್ರಗ್ಸ್ ತರಿಸಿದ್ದಳು. ಇದೇ ವಿಚಾರವಾಗಿ ನಿವಾಸಿಯ ಪತ್ನಿಯು ಸಂಜನಾ ಜೊತೆ ಗಲಾಟೆ ಸಹ ಮಾಡಿದ್ದರು’ ಎಂಬ ಮಾಹಿತಿ ದೋಷಾರೋಪ ಪಟ್ಟಿಯಲ್ಲಿದೆ.

ಸಿಗರೇಟ್ ಪ್ಯಾಕ್ನಲ್ಲಿ ಕೊಕೇನ್: ‘ಸಿಗರೇಟ್ ಪ್ಯಾಕ್ನಲ್ಲಿ ಕೊಕೇನ್ ಬಚ್ಚಿಟ್ಟು ಸಂಜನಾ ಮನೆಗೆ ಕಳುಹಿಸಲಾಗುತ್ತಿತ್ತು. ಅದನ್ನು ಪಡೆಯುತ್ತಿದ್ದ ಸಂಜನಾ, ಪ್ಲೇಟ್ನಲ್ಲಿ ಕೊಕೇನ್ ಸುರಿದುಕೊಂಡು ಮೂಗಿನಿಂದ ಎಳೆದು ನಶೆ ಏರಿಸಿಕೊಳ್ಳುತ್ತಿದ್ದಳು’ ಎಂಬ ಅಂಶವನ್ನೂ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

‘2019ರ ಅಕ್ಟೋಬರ್ 9 ರಂದು ನ್ಯೂ ಬಿಇಎಲ್ ರಸ್ತೆಯಲ್ಲಿರುವ ‘ಹಾಫ್ ವೇ ಹೌಸ್’ ರೆಸ್ಟೋರೆಂಟ್ನಲ್ಲಿ ಸಂಜನಾ ಗಲ್ರಾನಿ ಹುಟ್ಟುಹಬ್ಬ ಪಾರ್ಟಿ ಆಯೋಜಿಸಲಾಗಿತ್ತು. ಅಲ್ಲಿಯೂ ಡ್ರಗ್ಸ್ ಸೇವನೆ ಹಾಗೂ ಮಾರಾಟ ನಡೆದಿತ್ತು. 2017ರ ಅಕ್ಟೋಬರ್ನಲ್ಲಿ ಕೋರಮಂಗಲದ ವಾಲ್ಸ್ಟ್ರೀಟ್ ಕ್ಲಬ್ನಲ್ಲೂ ಆಯೋಜಿಸಿದ್ದ ಪಾರ್ಟಿಯಲ್ಲ್ಲೂ ಡ್ರಗ್ಸ್ ದಂಧೆ ಜೋರಾಗಿತ್ತು.’

‘2018ರ ಫೆಬ್ರುವರಿ 14 ರಂದು ‘ಪ್ರೇಮಿಗಳ ದಿನಾಚರಣೆ’ ಹೆಸರಿನಲ್ಲಿ ಜೆಡಬ್ಲ್ಯು ಮ್ಯಾರಿಯೇಟ್ ಹೋಟೆಲ್ನಲ್ಲಿ ಆರೋಪಿ ವೈಭವ್ ಕುಮಾರ್ ಜೈನ್ ಪಾರ್ಟಿ ಆಯೋಜಿಸಿದ್ದ. ಅದೇ ಪಾರ್ಟಿಗೆ ಹೋಗಿದ್ದ ಸಂಜನಾಳ ಬಾಯಿಗೆ ಆರೋಪಿ ವೈಭವ್ ಡ್ರಗ್ಸ್ ಮಾತ್ರೆಗಳನ್ನು ಹಾಕಿದ್ದ. ಸ್ನೇಹಿತರೊಬ್ಬರು ನೀರು ಕುಡಿಸಿದ್ದರು. ಪಾರ್ಟಿಯಲ್ಲಿ ಪಾಲ್ಗೊಂಡಿದ್ದವರು ಡ್ರಗ್ಸ್ ಸೇವಿಸಿ, ಅದರ ಮತ್ತಿನಲ್ಲೇ ತೇಲಾಡಿದ್ದರು’ ಎಂಬ ಮಾಹಿತಿಯೂ ಪಟ್ಟಿಯಲ್ಲಿದೆ.

ಫ್ಯಾಷನ್ ಷೋ ಆಯೋಜಕನ ಮನೆಯಲ್ಲಿ ಡ್ರಗ್ಸ್
‘ಪ್ರಕರಣದ 13ನೇ ಆರೋಪಿ ಆಗಿರುವ ನಿಯಾಸ್ ಅಹ್ಮದ್, ಸಂಜನಾ ಜೊತೆ ಒಡನಾಟ ಹೊಂದಿದ್ದ. ಆಕೆಯ ಮನೆಯಲ್ಲಿ ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ಪಾಲ್ಗೊಂಡು ಡ್ರಗ್ಸ್ ಸೇವಿಸುತ್ತಿದ್ದ. ಫ್ಯಾಷನ್ ಶೋ ಆಯೋಜಕನಾಗಿದ್ದ ಆತನ ಮನೆ ಮೇಲೆ ದಾಳಿ ಮಾಡಿದಾಗ, 4 ಗ್ರಾಂ ಗಾಂಜಾ ಹಾಗೂ ಕಪ್ಪು ಬಣ್ಣದ ಚಿಲುಮೆ ಪತ್ತೆಯಾಗಿತ್ತು’ ಎಂಬ ಅಂಶವನ್ನೂ ಪಟ್ಟಿಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.