ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Muda Scam: ಸಿದ್ದರಾಮಯ್ಯಗೆ ಇ.ಡಿ. ಬಲೆ

ಮುಡಾ ಹಗರಣ: ಮುಖ್ಯಮಂತ್ರಿ ವಿರುದ್ಧ ಇಸಿಐಆರ್ ದಾಖಲಿಸಿದ ಜಾರಿ ನಿರ್ದೇಶನಾಲಯ
Published : 30 ಸೆಪ್ಟೆಂಬರ್ 2024, 23:31 IST
Last Updated : 30 ಸೆಪ್ಟೆಂಬರ್ 2024, 23:31 IST
ಫಾಲೋ ಮಾಡಿ
Comments
‘ಘೋರ ತಿರಸ್ಕಾರಕ್ಕೆ ಮೋದಿ ಪ್ರತೀಕಾರ’
ಕರ್ನಾಟಕದ ಜನರು ಅವರನ್ನು (ಪ್ರಧಾನಿ ನರೇಂದ್ರ ಮೋದಿ) 2023ರ ಮಾರ್ಚ್‌ನಲ್ಲಿ ಘೋರವಾಗಿ ತಿರಸ್ಕರಿಸಿದರು. ಅವರು ಆ ಅವಮಾನವನ್ನು ಮರೆತಿಲ್ಲ. ತನಿಖಾ ಸಂಸ್ಥೆಯು ರಾಜಕೀಯ ವಿರೋಧಿಗಳ ವಿರುದ್ಧ ಕಿರುಕುಳ, ಸೇಡು ತೀರಿಸಿಕೊಳ್ಳುವ ಸಂಸ್ಥೆಯಾಗಿ ಬದಲಾಗಿರುವುದು ರಹಸ್ಯವಲ್ಲ. ಪ್ರಧಾನಿ ಹಾಗೂ ಇ.ಡಿ. ಬಣ್ಣ ಶೀಘ್ರದಲ್ಲಿ ಬಯಲಾಗಲಿದೆ. ನಾವು ಭಯ ಪಡಬೇಕಿಲ್ಲ. ಈ ಪ್ರಕ್ರಿಯೆಯಲ್ಲಿ ಸಿದ್ದರಾಮಯ್ಯ ದೋಷ‌ಮುಕ್ತರಾಗಿ ಹೊರಬರಲಿದ್ದಾರೆ. - ಜೈರಾಮ್ ರಮೇಶ್‌, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ)
ಸಚಿವರು, ಆಪ್ತರ ಜತೆ ಸಿ.ಎಂ ಚರ್ಚೆ
ಬೆಂಗಳೂರು: ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದ ಬೆನ್ನಲ್ಲೇ ಮುಂದಿನ ನಡೆಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ಸಚಿವರು ಹಾಗೂ ತಮ್ಮ ಆಪ್ತರ ಜತೆ ಸಮಾಲೋಚನೆ ನಡೆಸಿದರು. ಸಚಿವರಾದ ಜಿ.ಪರಮೇಶ್ವರ, ಎಚ್‌.ಕೆ. ಪಾಟೀಲ, ಎಚ್‌.ಸಿ. ಮಹದೇವಪ್ಪ ಹಾಗೂ ಕಾನೂನು ತಜ್ಞರ ಜತೆಯೂ ಮಾತುಕತೆ ನಡೆಸಿದರು. ಇ.ಡಿ. ಪ್ರಕರಣವನ್ನು ಕಾನೂನಾತ್ಮಕವಾಗಿ ಮತ್ತು ರಾಜಕೀಯವಾಗಿ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕು ಎಂಬ ಸಲಹೆಗಳನ್ನು ಪಡೆದರು ಎಂದು ಮೂಲಗಳು ಹೇಳಿವೆ.
ಕೇಜ್ರಿವಾಲ್, ಸೊರೇನ್ ಸಾಲಿಗೆ ಸಿದ್ದರಾಮಯ್ಯ
ಅಧಿಕಾರದಲ್ಲಿದ್ದಾಗ ಜಾರಿ ನಿರ್ದೇಶನಾಲಯ ಸೇರಿದಂತೆ ಕೇಂದ್ರೀಯ ತನಿಖಾ ಸಂಸ್ಥೆಗಳಿಂದ ತನಿಖೆ ಎದುರಿಸಿದ ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್ ಸೊರೇನ್‌, ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಾಲಿಗೆ ಸಿದ್ದರಾಮಯ್ಯ ಸೇರಿದ್ದಾರೆ. ‌ಭೂಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸೊರೇನ್ ಅವರನ್ನು ಜನವರಿಯಲ್ಲಿ ಹಾಗೂ ಅಬಕಾರಿ ನೀತಿ ಹಗರಣದಲ್ಲಿ ಕೇಜ್ರಿವಾಲ್ ಅವರನ್ನು ಮಾರ್ಚ್‌ನಲ್ಲಿ ಬಂಧಿಸಲಾಗಿತ್ತು. ಆರು ತಿಂಗಳ ಬಳಿಕ ಉಭಯ ನಾಯಕರಿಗೆ ಜಾಮೀನು ಸಿಕ್ಕಿತ್ತು. ‘ವಿರೋಧ ಪಕ್ಷಗಳ ನಾಯಕರನ್ನು ಹಣಿಯಲು ಕೇಂದ್ರ ಸರ್ಕಾರವು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ’ ಎಂದು ಪ್ರತಿಪಕ್ಷಗಳು ಪದೇ ಪದೇ ಆರೋಪಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT