ಬೆಂಗಳೂರು: ಆರ್ಥಿಕ ದುರ್ಬಲ ವರ್ಗಗಳ (ಇಡಬ್ಲ್ಯುಎಸ್) ಮೀಸಲಾತಿ ಪಟ್ಟಿಗೆ ನಗರ ಪ್ರದೇಶದ ಒಕ್ಕಲಿಗ ಮತ್ತು ಉಪಜಾತಿಗಳನ್ನು ಸೇರಿಸಿರುವ ಕರ್ನಾಟಕ ಸರ್ಕಾರ, ನಾಡಕಚೇರಿಯ ತಂತ್ರಾಂಶದಲ್ಲಿ ಸೇರ್ಪಡೆ ಮಾಡಿದೆ.

ಪರಿಶಿಷ್ಟ ಜಾತಿ, ಪಂಗಡ ಹಾಗೂ ಕೇಂದ್ರ ಸರ್ಕಾರದ ಇತರ ಹಿಂದುಳಿದ ವರ್ಗಗಳ (ಸೆಂಟ್ರಲ್ ಒಬಿಸಿ) ಪಟ್ಟಿಗಳಲ್ಲಿ ಇರದ ಜಾತಿಗಳ ಜನರು ಶಿಕ್ಷಣ ಮತ್ತು ಉದ್ಯೋಗದಲ್ಲಿ ಇಡಬ್ಲ್ಯುಎಸ್ ಮೀಸ ಲಾತಿ ಪಡೆಯಲು ಆದಾಯ ಮತ್ತು ಸ್ವತ್ತುಗಳ ಪ್ರಮಾಣಪತ್ರ ಒದಗಿಸುವಂತೆ ಸರ್ಕಾರ ಆದೇಶಿಸಿತ್ತು.

ನಗರ ಪ್ರದೇಶದ (ಮಹಾನಗರ ಪಾಲಿಕೆ, ನಗರಸಭೆ) ವ್ಯಾಪ್ತಿಯಲ್ಲಿರುವ ಒಕ್ಕಲಿಗ, ವಕ್ಕಲಿಗ, ಗೌಡ, ಉಪ್ಪಿನ ಕೊಳಗ ಒಕ್ಕಲಿಗ ಹಾಗೂ ಸರ್ಪ
ಒಕ್ಕಲಿಗ ಜಾತಿಗಳನ್ನು ಇಡಬ್ಲ್ಯುಎಸ್ ಮೀಸಲಾತಿ ಪಟ್ಟಿಯಲ್ಲಿ ಸೇರ್ಪಡೆ ಮಾಡುವಂತೆ ಅಟಲ್ಜೀ ಜನಸ್ನೇಹಿ ನಿರ್ದೇಶನಾಲಯಕ್ಕೆ ಕಂದಾಯ ಇಲಾಖೆ ಕಾರ್ಯದರ್ಶಿ ನಿರ್ದೇಶನ ನೀಡಿದ್ದರು.

ಅದರಂತೆ ತಂತ್ರಾಂಶದಲ್ಲಿ ಈ ಜಾತಿಗಳ ಸೇರ್ಪಡೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.