ಹತ್ತಾರು ಲಕ್ಷದ ಪ್ಯಾಕೇಜ್
ಮೊದಲ ಹಂತದಲ್ಲಿ ಹೂಡಿಕೆ ಉತ್ತೇಜನ ಮುಖ್ಯಸ್ಥ ಹುದ್ದೆ, ಸೆಮಿಕಂಡಕ್ಟರ್,ಇ–ಮೊಬಿಲಿಟಿ ಮತ್ತು ಆಟೊಮೊಬೈಲ್, ತಯಾರಿಕಾ ವಲಯ, ಗ್ರಾಹಕ ಸರಕುಗಳು–ಆರೋಗ್ಯ ಸೇವಾ ವಲಯಗಳಿಂದ ಬಂಡವಾಳ ಆಕರ್ಷಿಸುವ ಹೊಣೆಗಾರಿಕೆಯ ನಾಲ್ಕು ಹುದ್ದೆಗಳು ಹಾಗೂ ಮಾರುಕಟ್ಟೆ ವಿಶ್ಲೇಷಕ ಸೇರಿ ಆರು ಹುದ್ದೆಗಳ ಸೃಷ್ಟಿಗೆ ಹಣಕಾಸು ಇಲಾಖೆಯ ಅನುಮೋದನೆ ದೊರೆತಿದೆ ಎಂದು ಗೊತ್ತಾಗಿದೆ.
ಹೂಡಿಕೆ ಉತ್ತೇಜನ ಮುಖ್ಯಸ್ಥ ಹುದ್ದೆಗೆ ₹35 ಲಕ್ಷದಿಂದ ₹45 ಲಕ್ಷ, ನಾಲ್ಕು ಪ್ರಮುಖ ಉದ್ಯಮ ವಲಯಗಳ ಕಾರ್ಯನಿರ್ವಾಹಕರ ಹುದ್ದೆಗಳಿಗೆ ತಲಾ ₹30 ಲಕ್ಷದಿಂದ ₹40 ಲಕ್ಷ ಮತ್ತು ಮಾರುಕಟ್ಟೆ ವಿಶ್ಲೇಷಕ ಹುದ್ದೆಗೆ ₹20 ಲಕ್ಷದಿಂದ ₹25 ಲಕ್ಷದವರೆಗೆ ವಾರ್ಷಿಕ ವೇತನ ನಿಗದಿಪಡಿಸಲು ಇಲಾಖೆ ಒಪ್ಪಿದೆ ಎನ್ನಲಾಗಿದೆ. ಸಿಒಒ ಮತ್ತು ಇತರ ಹುದ್ದೆಗಳ ನೇಮಕಾತಿ ಎರಡು ಮತ್ತು ಮೂರನೇ ಹಂತದಲ್ಲಿ ನೇಮಕಾತಿ ನಡೆಯಲಿದೆ.