ಬೀದರ್: ರೈಲ್ವೆ ಸುರಕ್ಷತಾ ಪಡೆಯ (ಆರ್‌ಪಿಎಫ್) ಕಾನ್‌ಸ್ಟೆಬಲ್ ಚೇತನ್ ಕುಮಾರ್ ಚೌಧರಿ ಎಂಬಾತ ಚಲಿಸುತ್ತಿದ್ದ ರೈಲಿನಲ್ಲಿ ಸೋಮವಾರ ಗುಂಡು ಹಾರಿಸಿ ಸಾಯಿಸಿದ ನಾಲ್ವರ ಪೈಕಿ ಒಬ್ಬ ವ್ಯಕ್ತಿ ಬೀದರ್ ಜಿಲ್ಲೆಯವರು ಎಂದು ತಿಳಿದು ಬಂದಿದೆ.

ಮಹಾರಾಷ್ಟ್ರದ ಪಾಲ್ಘರ್ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿತ್ತು.

ಬೀದರ್ ತಾಲ್ಲೂಕಿನ ಹಮಿಲಾಪುರದ ನಿವಾಸಿ ಸೈಯದ್ ಸೈಫುದ್ದೀನ್ ಮುನಿರುದ್ದೀನ್ (38) ಮೃತ ವ್ಯಕ್ತಿ. ಈತನಿಗೆ ಪತ್ನಿ, ಮೂವರು ಹೆಣ್ಣು ಮಕ್ಕಳಿದ್ದಾರೆ.

‘ಸೈಫುದ್ದೀನ್ ಅವರು ಅಜ್ಮೇರ್ ದರ್ಗಾಕ್ಕೆ ಭೇಟಿ ಕೊಟ್ಟು ಜೈಪುರ–ಮುಂಬೈ ಸೆಂಟ್ರಲ್ ಎಕ್ಸಪ್ರೆಸ್ ರೈಲಿನಲ್ಲಿ ಹಿಂತಿರುಗುತ್ತಿದ್ದರು. ಕಾನ್‌ಸ್ಟೆಬಲ್ ಚೇತನ್‌ಕುಮಾರ್ ಚೌಧರಿ ಎಂಬಾತ ತನ್ನ ಬಳಿಯಿದ್ದ ಸ್ವಯಂಚಾಲಿತ ಬಂದೂಕಿನಿಂದ ಗುಂಡು ಹಾರಿಸಿ ನಾಲ್ವರನ್ನು ಕೊಂದಿದ್ದ. ಇದರಲ್ಲಿ ಸೈಫುದ್ದೀನ್ ಕೂಡ ಸೇರಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.