ಬೆಂಗಳೂರು: ಗಣೇಶ ಹಬ್ಬದ ಪ್ರಯುಕ್ತ ಕೆಎಂಎಫ್ 12 ನೂತನ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

‘ಖೋವಾ ಬಾದಮ್ ರೋಲ್, ಖೋವಾ ಗೋಡಂಬಿ ರೋಲ್, ಖೋವಾ ಚಾಕೋನಟ್ಟಿ ರೋಲ್, ಖೋವಾ ಲಾಡು, ಬೆಲ್ಲದ ಬರ್ಫಿ, ಪನೀರ್ ಬರ್ಫಿ, ಕಲಾಕಂದ್, ಬಿಸ್ಕತ್ ಗಳು, ಪನೀರ್ ಮುರುಕು ಮತ್ತು ಗುಡ್ ಲೈಫ್ ಚಾಕೊಲೆಟ್ ಗಿಫ್ಟ್ ಬಾಕ್ಸ್ ಉತ್ಪನ್ನ ಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ’ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್ ತಿಳಿಸಿದರು.

‘ಆಧುನಿಕ ತಂತ್ರಜ್ಞಾನದ ಮೂಲಕ ಕೆಎಂಎಫ್ ಮಾರಾಟ ಜಾಲವನ್ನು ವಿಸ್ತರಿ ಸಿಕೊಳ್ಳುತ್ತಿದೆ. 2027ಕ್ಕೆ ಅಂದಾಜು 1.30 ಕೋಟಿ ಲೀಟರ್ ಹಾಲು ಸಂಗ್ರಹಿ ಸುವ ಗುರಿ ಹೊಂದಲಾಗಿದೆ. ಪ್ರಸ್ತುತ ಪ್ರತಿ ದಿನ 83 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಹಾಲಿನ ಗುಣಮಟ್ಟ ವಿಷಯದಲ್ಲಿ ರಾಜಿ ಮಾಡಿಕೊಳ್ಳುತ್ತಿಲ್ಲ’ ಎಂದು ವಿವರಿಸಿದರು.

‘ಕೆಎಂಎಫ್ ಚಾಕೊಲೆಟ್‌ಗೆ ಅಪಾರ ಬೇಡಿಕೆ ಇದೆ. 3 ತಿಂಗಳಲ್ಲಿ 50 ಟನ್ ಚಾಕೊಲೆಟ್ ಮಾರಲಾಗಿದೆ. ಡಿಸೆಂಬರ್ ವೇಳೆಗೆ 100 ಟನ್‌ಮಾರುವ ಗುರಿ ಹೊಂದಲಾಗಿದೆ. ಬೆಂಗಳೂರು ಸೇರಿ ವಿವಿಧೆಡೆ ನಂದಿನಿ ಕೆಫೆ ತೆರೆಯಲಾಗಿದೆ. ಸೆ.30ರಂದು ಮಂಗಳೂರಿನಲ್ಲಿ ಕೆಫೆ ಆರಂಭಿಸಲಾಗುವುದು’ ಎಂದರು.

‘ಸೆ.12ರಿಂದ 15ರವರೆಗೆ ದೆಹಲಿ ಯಲ್ಲಿ ಅಂತರರಾಷ್ಟ್ರೀಯ ಡೇರಿ ಫೆಡ ರೇಷನ್ ವತಿಯಿಂದ ‘ವಿಶ್ವ ಡೇರಿ ಶೃಂಗ ಸಭೆ’ ನಡೆಯಲಿದೆ. ಇದರ ಪ್ರಾಯೋಜಕತ್ವವನ್ನು ಅಮೂಲ್ ಜತೆಯಲ್ಲಿ ಕೆಎಂಎಫ್ ವಹಿಸಿದೆ. ಇಲ್ಲಿ 15 ಉತ್ಪನ್ನ ಬಿಡುಗಡೆ ಮಾಡಲಾಗುವುದು’ ಎಂದರು.

ಜಂಬೂ ಸವಾರಿಯಲ್ಲಿ ಕೆಎಂಎಫ್ ಸ್ತಬ್ಧಚಿತ್ರ:ದಸರಾ ಜಂಬೂ ಸವಾರಿಯಲ್ಲಿ ಇದೇ ಮೊದಲ ಬಾರಿ ಕೆಎಂಎಫ್ ಸ್ತಬ್ಧಚಿತ್ರ ಮತ್ತು ವಸ್ತು ಪ್ರದರ್ಶನ ಪ್ರಾಧಿ ಕಾರದಲ್ಲಿ ವಿಶೇಷ ಮಾರಾಟ ಮಳಿಗೆ ತೆರೆಯಲು ನಿರ್ಧರಿಸಿದೆ ಎಂದು ಬಿ.ಸಿ. ಸತೀಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.