ಬೆಂಗಳೂರು: ಪ್ರಗತಿಪರರ ಸಾವನ್ನು ಸ್ವಾಗತಿಸಿದವರು, ಗಿರೀಶ ಕಾರ್ನಾಡರ ಸಾವಿನಲ್ಲೂ ವಿಕೃತಿ ತೋರಿದ್ದಾರೆ.

ಸಾಮಾಜಿಕ ಜಾಲ ತಾಣಗಳಲ್ಲಿ ಹಲವರು ಸಂಭ್ರಮಿಸಿದ್ದು, ಅದೇ ಧಾಟಿಯ ಅಭಿಪ್ರಾಯ ಕೂಡ ಅಲ್ಲಿವೆ. ಇದಕ್ಕೆ ವಿರೋಧವೂ ವ್ಯಕ್ತವಾಗಿದೆ.

ಇದನ್ನೂ ಓದಿ:ಗಿರೀಶ ಕಾರ್ನಾಡ: ಮುಗಿದ ಪಯಣ, ಉಳಿದ ಕನಸು

‘ನರಕದ ಹಾದಿ ಹಿಡಿದ ನಗರ ನಕ್ಸಲ... ಭಾವಪೂರ್ಣ ವಿದಾಯ’ ಎಂದು ನೆಟ್ಟಿಗರು ಬರೆದುಕೊಂಡಿದ್ದಾರೆ.

‘ಸದಾ ಹಿಂದೂ ಧರ್ಮ, ಹಿಂದೂ ದೇವರು, ಆಚರಣೆಗಳನ್ನು ನಿಂದಿಸಿ ಅವಹೇಳನ ಮಾಡುತ್ತಿದ್ದ ದುಷ್ಟನು, ಅಂಗಾಂಗ ವೈಫಲ್ಯದಿಂದ ಸತ್ತುಹೋದನೆಂದು ಗೊತ್ತಾಯಿತು. ಈ ದುಷ್ಟನ ಪ್ರೇತಾತ್ಮ ನೇರವಾಗಿ ನರಕಕ್ಕೆ ಹೋಗಿ ಪ್ರಕೃತಿ, ಸೂರ್ಯ, ಚಂದ್ರ, ಗಾಳಿ, ಬೆಳಕು, ನೀರು ಇರುವತನಕ ನರಕದಲ್ಲಿ ನರಳಾಡುತ್ತಿರಲೆಂದು ಭಕ್ತಿಪೂರ್ವಕವಾಗಿಸಮಸ್ತ ದೇಶ ಭಕ್ತರೆಲ್ಲ ಒಂದಾಗಿ ಪ್ರಾರ್ಥಿಸೋಣ’ ಎಂದು ‘ಸನಾತನ ಹಿಂದೂ ಧರ್ಮ’ದ ಹೆಸರಿನಲ್ಲಿ ಪೋಸ್ಟ್ ಮಾಡಲಾಗಿದೆ.

ಇದನ್ನೂ ಓದಿ:ಕಾರ್ನಾಡರ ಜತೆಗಿನ ‘ಆ ದಿನಗಳು’

‘ನಗರ ನಕ್ಸಲ ಸತ್ತ. ಜೀವನವಿಡಿ ಜಾತ್ಯತೀತ, ಪ್ರಗತಿಪರರ ಹೆಸರು ಹೇಳಿಕೊಂಡು, ನರಸತ್ತು ಹೋಗಿರುವ ನಾಲಾಯಕ್. ಈ ನೆಲದ ಸಂಸ್ಕೃತಿ ವಿರುದ್ಧ ಬದುಕಿದ ಕೊಳಕು ಮನಸ್ಸಿನ ಜೀವಿ’ ಎಂದು ಶರಣಬಸವ ಸಜ್ಜನ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಅಪ್ರತಿಮ ನಾಟಕಕಾರ, ವಸ್ತುನಿಷ್ಠ ಧೀಮಂತ

‘ಜ್ಞಾನಪೀಠದಂತಹ ಅತ್ಯುನ್ನತ ಪ್ರಶಸ್ತಿಗೆ ಭಾಜನರಾಗಿಯೂ ಅದರ ಮಹತ್ವವನ್ನು ಅರಿಯದ, ಕೊನೆಯ ದಿನಗಳಲ್ಲಿ ಸಮಾಜಘಾತುಕ ಹೇಳಿಕೆಯಿಂದ ಸಮಾಜದ ವಿರೋಧ ಕಟ್ಟಿಕೊಂಡವರು ಇಂದು ಅಸ್ತಂಗತರಾಗಿದ್ದಾರೆ’ ಎಂದುರಘು ಅಣಬೇರು ಪ್ರತಿಕ್ರಿಯಿಸಿದ್ದಾರೆ.

‘ಇನ್ನೂ ಕೆಲವು ಅರ್ಬನ್ ನಕ್ಸಲರಿದ್ದಾರೆ. ಅವರನ್ನೂ ಇವನ ಜೊತೆ ಬೇಗ ಕರ್ಕೋಳ್ಳಪ್ಪ ಭಗವಂತ’ ಎಂದು ಚಂದ್ರಶೇಖರ್ ಬರೆದಿದ್ದರೆ,
‘ಮತ್ತೊಮ್ಮೆ ನಮ್ಮ ಪವಿತ್ರ ದೇಶದಲ್ಲಿ ಹುಟ್ಟಿ ಬರುವುದು ಬೇಡ’ ಎಂದು ರಮೇಶ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಗೋಮಾಂಸ ಬೆಂಬಲಿಸಿ ಹಿಟ್ಲಿಸ್ಟ್ ಸೇರಿದ್ದರು ಕಾರ್ನಾಡ!

‘ದೇಶ, ಸಂವಿಧಾನ ವಿರೋಧಿ. ಅರಣ್ಯವಾಸಿಗಳು, ಸಾರ್ವಜನಿಕರು, ಪೊಲೀಸರು, ಸೈನಿಕರ ಹತ್ಯೆ ಮಾಡುವ ಮಾವೋವಾದಿಗಳು, ಚೀನಿಯರ ಬೂಟು ನೆಕ್ಕುವನಕ್ಸಲರ ಪರವಾಗಿ ಇದ್ದರು. ನಗರ ನಕ್ಸಲನೆಂದು ಕುತ್ತಿಗೆಗೆ ಬೋರ್ಡ್ ನೇತು ಹಾಕಿಕೊಂಡು ಬಹಿರಂಗ ಬೆಂಬಲ ಸೂಚಿಸುವ ಇಂಥ ಬುದ್ಧಿಗೇಡಿ ಸಾವಿಗೆ ಯಾವೊಬ್ಬ ದೇಶಪ್ರೇಮಿಯೂ ಸಂತಾಪ ಪಡುವುದಿಲ್ಲ. ಅಂಥ ದೇಶಪ್ರೇಮಿಗಳಲ್ಲಿ ನಾನೂ ಒಬ್ಬ.ಲದ್ದಿ ಜೀವಿಗಳಿಗೆ, ಪ್ರಗತಿಪರರಿಗೆ ಅರ್ಪಣೆ’ ಎಂದು ಯು.ಕೆ.ಚೇತನ್ ಟೀಕಿಸಿದ್ದಾರೆ.

‘ಮೋದಿ ಪ್ರಧಾನಿಯಾದರೆ ದೇಶ ಬಿಡುತ್ತೇವೆ ಅಂದ ಒಬ್ಬೊಬ್ಬರು ಜೀವ ಬಿಡುತ್ತಿದ್ದಾರೆ’ ಎಂದು ಮಂಜುನಾಥ್ ದಾವಣಗೆರೆ ಬರೆದುಕೊಂಡಿದ್ದಾರೆ.

‘ದುರಾತ್ಮಗಳಿಗೆ ಸಂಸ್ಕಾರ ಬೇಕಿಲ್ಲ, ನರಕಕ್ಕೆ ಹೋಗೋದಕ್ಕೆ ವಿಧಿವಿಧಾನ ಬೇಕಿಲ್ಲ’ ಎಂದು ಸಿದ್ದೇಶ್, ‘ಜಾತಿ ಇಲ್ಲದವರಿಗೆ ಸಂಸ್ಕಾರ ಯಾಕೆ’ ಎಂದು ರಘು ಐತಾಳ್, ‘ಒಂದು ಪೀಡೆ ತೊಲಗಿತು.ಯಾವ ಘನ ಕಾರ್ಯಕ್ಕೆ ಶೋಕಾಚರಣೆ’ ಎಂದು ಶ್ರೀನಿವಾಸ ನಾಯ್ಕ ಪೋಸ್ಟ್ ಮಾಡಿದ್ದಾರೆ.

‘ದೇವ್ರೆ ಕೆ.ಎಸ್.ಭಗವಾನ್ ಯಾವಾಗ’ ಎಂದು ಗಿರೀಶ್ ಟಿ.ಶಿವಪ್ರಸಾದ್ ಬರೆದುಕೊಂಡಿದ್ದಾರೆ.

‘ಹುಟ್ಟಿ ಬನ್ನಿ,ಭಾರತದಲ್ಲಿ ಅಲ್ಲ, ಪಾಕಿಸ್ತಾನದಲ್ಲಿ’ ಎಂದು ವಿಕ್ಕಿ ಜೈನ್, ಹೋದದ್ದೇನೋ ಹೋದ್ರಿ, ಜೊತೆಯಲ್ಲಿ ಬೊಗ್ಗುನ (ಕೆ.ಎಸ್.ಭಗವಾನ್) ಕರ್ಕೊಂಡು ಹೋಗಬಾರದಿತ್ತೆ’ ಎಂದುಗಂಗಾಧರ ಮಿತ್ರಪ್ರತಿಕ್ರಿಯಿಸಿದ್ದಾರೆ.

ಬೈದಂತೆಯೂ ಇರಬೇಕು, ಶ್ರದ್ಧಾಂಜಲಿ ಸಲ್ಲಿಸಿದಂತೆಯೂ ಇರಬೇಕು

ಕಾರ್ನಾಡ್ ಸಾವನ್ನು ಸಂಭ್ರಮಿಸುವ ಪೋಸ್ಟ್‌ಗಳ ವಿರುದ್ಧ ಸಾಮಾಜಿಕ ತಾಣಗಳಲ್ಲಿ ವಿರೋಧ, ಆಕ್ಷೇಪಗಳು ವ್ಯಕ್ತವಾಗುತ್ತಲೇ ಬೈದಂತೆಯೂ ಇರುವ, ಶ್ರದ್ಧಾಂಜಲಿ ಅರ್ಪಿಸಿದಂತೆಯೂ ಇರುವ ಸಿದ್ಧ ಸಂದೇಶವೊಂದು ಸೋಮವಾರ ಸಂಜೆ ಹೊತ್ತಿಗೆ ಹರಿದಾಡಿತು.

‘ಯಾರದ್ದೋ ಸಾವನ್ನು ಸಂಭ್ರಮಿಸುವ ವಿಕೃತಿ ನಮ್ಮದಲ್ಲ! ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ನಾಟಕಕಾರ, ನಟ, ಚಲನಚಿತ್ರ ನಿರ್ದೇಶಕ & ನಾಡ ನಕ್ಸಲ್ ಗಿರೀಶ್ ಕಾರ್ನಾಡ್ ಇನ್ನಿಲ್ಲ , ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ..!!’ ಎಂಬ ಸಿದ್ಧ ಸಂದೇಶವನ್ನು ಹಲವರು ಹಂಚಿಕೊಂಡರು. ಈ ಸಂದೇಶಕ್ಕೆ ಮತ್ತಷ್ಟು ಸೇರಿಸಿಕೊಂಡ ಕೆಲ ಮಂದಿ ‘ದುಃಖವನ್ನು ಭರಿಸುವ ಶಕ್ತಿಯನ್ನು ಕಮ್ಯೂನಿಸ್ಟ್, ಕೆಂಪು ಉಗ್ರರಿಗೆ ಆ ದೇವರು ನೀಡಲಿ... ಜೈ ಶ್ರೀರಾಮ್,’ ಎಂದು ಬರೆದುಕೊಂಡು ಹಂಚಿಕೊಂಡರು.

ಇವುಗಳನ್ನೂ ಓದಿ:

*ಆ ವೈದ್ಯೆ ಅಂದು ಕ್ಲಿನಿಕ್ಕಿಗೆ ಬಂದಿದ್ದರೆ ಕಾರ್ನಾಡರೇ ಇರುತ್ತಿರಲಿಲ್ಲ!

* ತಿಟ್ಹತ್ತಿ ತಿರುಗಿದಾಗ ಕಂಡ ಜಪಾನ್| ಗಿರೀಶ ಕಾರ್ನಾಡರ ಬರಹ

*ಧಾರ್ಮಿಕ ವಿಧಿ ವಿಧಾನಗಳಿಲ್ಲದೇ ಅಂತಿಮ ‘ಸಂಸ್ಕಾರ’

*ಕನ್ನಡದ ಸಂಸ್ಕೃತಿಯ ಕಂಪನ್ನು ಜಗತ್ತಿಗೆ ಪಸರಿಸಿದವರು ಕಾರ್ನಾಡ: ಸಿಎಂ ಎಚ್ಡಿಕೆ

*ಆಡಾಡತ ಆಯುಷ್ಯ | ‘ಸಂಸ್ಕಾರ’ಕ್ಕೊಂದು ಅಗ್ರಹಾರ ಸಿಕ್ಕ ಕಥೆ

*ಆಡಾಡತ ಆಯುಷ್ಯ | ‘ಗೋಕರ್ಣ’ ಎಂಬ ಅಡ್ಡ ಹೆಸರನ್ನು ಬಿಟ್ಟು, ‘ಕಾರ್ನಾಡ’ ಆದ ಪ್ರಸಂಗ

*ಆಡಾಡತ ಆಯುಷ್ಯ | ‘ಸಂಸ್ಕಾರ’ ಚಿತ್ರೀಕರಣದ ಮುಗಿಸಿ ಹೊರಟ ದಿನದ ನೆನಪು

*ರಘುನಾಥ ಚ.ಹ. ಬರಹ | ನಮ್ಮ ತಲೆಮಾರಿಗೆ ಚಾಳೇಶದಾನ ಮಾಡಿದವರಾರು?

*ರಾಮಚಂದ್ರ ಗುಹಾ ಬರಹ | ಮೆಚ್ಚುಗೆಗೆ ಮಾತ್ರ ಪಾತ್ರ ಈ ಗಿರೀಶ ಕಾರ್ನಾಡ

* ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶ | ‘ನಗರ ನಕ್ಸಲ’ ಘೋಷಿಸಿಕೊಂಡ ಕಾರ್ನಾಡ್

* ಕಾರ್ನಾಡರ ಬದುಕು, ವೃತ್ತಿ, ಪ್ರವೃತ್ತಿಯ ಕುರಿತ ಚಿತ್ರಗಳು

* ಕಾರ್ನಾಡ್ ನಿಧನ ಹಿನ್ನೆಲೆ: ಇಂದು ಸರ್ಕಾರಿ ರಜೆ ಘೋಷಣೆ, ಮೂರು ದಿನ ಶೋಕಾಚರಣೆ

*ಶಿರಸಿಯೊಂದಿಗೆ ಗಿರೀಶ ಕಾರ್ನಾಡರ ನಂಟು ನೆನೆದ ಬಾಲ್ಯದ ಗೆಳೆಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.